ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಅಖಿಲ ಭಾರತ ನಾಗರೀಕ ಸೇವಾ ಕುಸ್ತಿ, ಕಬಡ್ಡಿ ಪಂದ್ಯಾವಳಿಗೆ ರಾಜ್ಯ ತಂಡಗಳ ಆಯ್ಕೆ ಪ್ರಕ್ರಿಯೆ

On: September 8, 2023 3:47 AM
Follow Us:
KUSTHI SELECTION
---Advertisement---

SUDDIKSHANA KANNADA NEWS/ DAVANAGERE/ DATE: 08-09-2023

ದಾವಣಗೆರೆ (Davanagere): ಅಖಿಲ ಭಾರತ ನಾಗರೀಕ ಸೇವಾ ಕುಸ್ತಿ ಮತ್ತು ಕಬಡ್ಡಿ ಪಂದ್ಯಾವಳಿಗೆ ಪುರುಷ ಮತ್ತು ಮಹಿಳೆಯರ ರಾಜ್ಯ ತಂಡವನ್ನು ಆಯ್ಕೆ ಮಾಡಲು ಕುಸ್ತಿ ಮತ್ತು ಕಬ್ಬಡಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ: 

Davanagere: ದಾವಣಗೆರೆ ವಿವಿಯ ಆವರಣದಲ್ಲಿ ವಿದ್ಯಾರ್ಥಿನಿ ಅಪಹರಿಸಲು ಬಂದ ಯುವಕರ್ಯಾರು…? ಆಕೆ ತಾಯಿ ಜೊತೆಗಿದ್ದದ್ದು ಯಾಕೆ…?

2023-24ನೇ ಸಾಲಿನ ಅಖಿಲ ಭಾರತ ನಾಗರೀಕ ಸೇವಾ ಖೋ-ಖೋ, ಕುಸ್ತಿ ಕಬಡ್ಡಿ ಮತ್ತು ಯೋಗಸಾನ ಪಂದ್ಯಾವಳಿಗಳು ಅಕ್ಟೋಬರ್ 4 ರಿಂದ 7 ರ ವರೆಗೆ ನವದೆಹಲಿಯ ಖೋ, ಖೋ ಸೆಂಟರ್, ಕೋಹತ್ ಎನ್.ಕ್ಲೇವ್ ಮತ್ತು ತ್ಯಾಗರಾಜ್ ಸ್ಟೇಡಿಯಂ, ತ್ಯಾಗರಾಜ್ ನಗರ ಇಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು ರಾಜ್ಯವನ್ನು ಪ್ರತಿನಿಧಿಸುವ ಕುಸ್ತಿ ಮತ್ತು ಕಬಡ್ಡಿ ತಂಡಗಳ ಆಯ್ಕೆ ಪ್ರಕ್ರಿಯೆ ಆಯೋಜಿಸಲಾಗಿದೆ.

ಪಂದ್ಯಾವಳಿಗಳ ವಿವರ:

ಸೆಪ್ಟೆಂಬರ್ 9 ರಂದು ಬೆಳಿಗ್ಗೆ 9 ಗಂಟೆಗೆ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಹಾಗೂ ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಕುಸ್ತಿ ಪಂದ್ಯಾವಳಿಗೆ ಭಾಗವಹಿಸುವ ಕ್ರೀಡಾಪಟುಗಳು ದಾವಣಗೆರೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಬಳಿ ವರದಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಕುಸ್ತಿ ತರಬೇತುದಾರ, ವಿನೋದ್‍ಕುಮಾರ್.ಕೆ ಮೊ.ನಂ.8971388143 ಮತ್ತು ತುಕಾರಾಮ್ ಮೊ.ನಂ 9945489193 ಇವರನ್ನು ಸಂಪರ್ಕಿಸಬೇಕು.

ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತುಮಕೂರು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಬಳಿ ವರದಿ ಮಾಡಿಕೊಳ್ಳಬೇಕು. ಸಂಪರ್ಕಿಸಬೇಕಾದ ವಿಳಾಸ ಕಬಡ್ಡಿ ತರಬೇತುದಾರರಾದ ಇಸ್ಮಾಯಿಲ್ ಮೊ.ನಂ. 9980588415 ಮತ್ತು ಶ್ರೀಶೈಲ ಎಸ್. ಆಯ್ಕೆಪ್ರಕ್ರಿಯೆಯಲ್ಲಿ 2022-23ನೇ ಸಾಲಿನ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಸರ್ಕಾರಿ ನೌಕರರು ಮಾತ್ರ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಹರ್ಷ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment