ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಎಸ್ ಡಿ ಪಿ ಐ ದಾವಣಗೆರೆ ನಗರ ಪ್ರತಿನಿಧಿಗಳ ಸಭೆ: ನೂತನ ಸಮಿತಿಯಲ್ಲಿ ಯಾರ್ಯಾರಿದ್ದಾರೆ…?

On: August 24, 2023 2:30 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:24-08-2023

ದಾವಣಗೆರೆ (Davanagere): ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ (Davanagere)  ನಗರ ಪ್ರತಿನಿಧಿಗಳ ಸಭೆಯು ಜಿಲ್ಲಾ ಎಸ್ ಡಿ ಪಿ ಐ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಜಬಿವುಲ್ಲಾ ಅಧ್ಯಕ್ಷತೆಯಲ್ಲಿ ನಡೆಯಿತು.

ಚುನಾವಣಾ ಅಧಿಕಾರಿಯಾಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಅಲಿ ರವರು ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿದರು. ಚುನಾವಣೆ ಪ್ರಕ್ರಿಯೆ ನಂತರ ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿ ಮಾತನಾಡಿದ ಇಸ್ಮಾಯಿಲ್ ಜಬಿವುಲ್ಲಾ ಅವರು, ಎಲ್ಲಾ ಜನಸಾಮಾನ್ಯರನ್ನು ತಲುಪುವ ನಿಟ್ಟಿನಲ್ಲಿ ಬೂತ್ ಮಟ್ಟ ದಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂದರು.

ಈ ಸುದ್ದಿಯನ್ನೂ ಓದಿ: 

Costly Flower: ದುಬಾರಿ ವರಮಹಾಲಕ್ಷ್ಮೀ ಪೂಜೆ: ಗಗನಕ್ಕೇರಿದ ಹೂ, ಹಣ್ಣು, ದರ ಕೇಳಿ ಶಾಕ್ ಆಗ್ತಿರುವ ಗ್ರಾಹಕರು, ಮಹಿಳೆಯರು…!

ಯಾವುದೇ ಜಾತಿ ಮತ ಧರ್ಮ ನೋಡದೆ ಜನಸಾಮಾನ್ಯರನ್ನು ಸ್ಪಂದಿಸುವ ಕ್ರಿಯಾಶೀಲ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ಇಲ್ಲಿಯವರೆಗೆ ನಮನ್ನು ಆಳಿದ ರಾಜಕೀಯ ಪಕ್ಷಗಳು ನಮ್ಮನ್ನು ನಡೆಸಿಕೊಂಡ ಧೋರಣೆಗಳನ್ನು ಜನಸಾಮಾನ್ಯರಿಗೆ ತಿಳಿಸಿ ಹಸಿವು ಮುಕ್ತ ಸ್ವಾತಂತ್ರ ಭಯಮುಕ್ತ ಸ್ವಾತಂತ್ರ ಎಂಬ ಧ್ಯೇಯ ವಾಕ್ಯದ ನಮ್ಮ ಪಕ್ಷದ ಅಗತ್ಯತೆ ಬಗೆಗೆ ಜನಸಾಮಾನ್ಯರಿಗೆ ತಲುಪಿಸಲು ಸನ್ನದ್ಧರಾಗಬೇಕೆಂದು ಕರೆ ನೀಡಿದರು.

ನೂತನ ಸಮಿತಿಗೆ ಅಧ್ಯಕ್ಷರಾಗಿ ಮಹಮದ್ ಅಶ್ರಫ್, ಉಪಾಧ್ಯಕ್ಷರಾಗಿ ಶಮ್ಶುದ್ದೀನ್ ರಜ್ವಿ, ಕಾರ್ಯದರ್ಶಿಯಾಗಿ ಮಹಮ್ಮದ್ ಮೋಸಿನ್, ಸಹ ಕಾರ್ಯದರ್ಶಿಯಾಗಿ ಮಹಮ್ಮದ್ ಅಫ್ಜಲ್, ಕೋಶಾಧಿಕಾರಿಯಾಗಿ ಸೈಯದ್ ಇಸಾಕ್ ಅಹಮ್ಮದ್ , ಸಮಿತಿ ಸದಸ್ಯರಾಗಿ ಅಜರ್ ಬಾತಿ, ಮಹಮ್ಮದ್ ಯಾಹಿಯ.ಎಂ, ಮೊಹಮ್ಮದ್ ಸಾಧಿಕ್, ಜಬಿವುಲ್ಲಾ,ರವರು ಆಯ್ಕೆಯಾಗಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment