ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಜನರಿಗೆ ಒಳಿತು ಮಾಡಲು ದಾವಣಗೆರೆ(Davanagere)ಯಲ್ಲಿ ಇರ್ರಿ, ಇಲ್ಲದಿದ್ದರೆ ಹೋಗಿ: ಎಸ್ಎಸ್ಎಂ ಈ ಎಚ್ಚರಿಕೆ ಕೊಟ್ಟಿದ್ಯಾರಿಗೆ…?

On: June 12, 2023 7:31 AM
Follow Us:
S. S. Mallikarjun warning
---Advertisement---

SUDDIKSHANA KANNADA NEWS/ DAVANAGERE/ DATE:11-06-2023

ದಾವಣಗೆರೆ (Davanagere): ಜನರಿಗೆ ಒಳಿತು ಮಾಡಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಅಸಡ್ಡೆ ತೋರಿದರೆ ಸಹಿಸುವ ಪ್ರಶ್ನೆಯೇ ಇಲ್ಲ. ಕಷ್ಟಕ್ಕೆ ಸ್ಪಂದಿಸಿ, ಪಾರದರ್ಶಕ ಕೆಲಸ ಮಾಡುವುದಿದ್ದರೆ ದಾವಣಗೆರೆಯಲ್ಲಿ ಇರಬಹುದು. ಇಲ್ಲಾಂದ್ರೆ ಹೋಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN) ಖಡಕ್ ಎಚ್ಚರಿಕೆ ನೀಡಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಹಿರಿಯ ಅಧಿಕಾರಿಗಳು ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿಲ್ಲ. ಭಾನುವಾರ ರಜಾ ಎಂದು ಹೇಳಿ ಮನೆಯಲ್ಲಿದ್ದಾರೋ ಅಥವಾ ಪತ್ನಿ, ಮಕ್ಕಳ ಜೊತೆ ಟೂರ್ ಹೋಗಿದ್ದಾರೋ. ಇಂಥ ಮಹತ್ವದ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದರೆ ಹೇಗೆ ಎಂದು ಎಸ್ಪಿ, ಡಿಸಿ, ಸಿಇಒ ಹೆಸರು ಪ್ರಸ್ತಾಪಿಸದೇ ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ:

Davanagere: ಬಿಜೆಪಿಯವರು ಊರೆಲ್ಲಾ ಹದಗೆಡಿಸಿದ್ದಾರೆ, ಸರಿಮಾಡಲು ಐದು ವರ್ಷ ಬೇಕು: ಎಲ್ಲಾ ತನಿಖೆ ಮಾಡಿಸ್ತೇವೆ ಎಂದಿದ್ಯಾಕೆ ಎಸ್.ಎಸ್. ಮಲ್ಲಿಕಾರ್ಜುನ್

ಈ ದಿನ ರಾಜ್ಯಾದ್ಯಂತ ಉಚಿತ ಬಸ್ ಪಾಸ್ (Free Bus Pass) ಅನ್ನು ಮಹಿಳೆಯರಿಗೆ ನೀಡಲಾಗುತ್ತಿದೆ. ಸಾಮಾನ್ಯ ಮತ್ತು ವೇಗದೂತ ಬಸ್ ಗಳಲ್ಲಿ ಪ್ರಯಾಣ ಮಾಡಬಹುದು. ಇದರ ಸದುಪಯೋಗ ಪಡೆದುಕೊಳ್ಳಿ. ಬಡ ಮಹಿಳೆಯರು, ಬಡ ಮನೆತದವರೇ ಹೆಚ್ಚು. ಈ ನಿಟ್ಟಿನಲ್ಲಿ ಕಾಂಗ್ರೆಸ್ (Congress) ಸರ್ಕಾರವು ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಈಗ ಅದನ್ನು ಒಂದೊಂದಾಗಿ ಜಾರಿ ಮಾಡುತ್ತಿದೆ. ಜನರಿಗೆ ಉಪಯೋಗವಾಗುವ ಕೆಲಸ ಮಾಡುತ್ತಿದೆ. ಇಂದು ಒಂದು ಗ್ಯಾರಂಟಿ ಜಾರಿಯಾಗಿದೆ. ಉಳಿದ ನಾಲ್ಕು ಹಂತ ಹಂತವಾಗಿ ಜಾರಿಗೆ ಬರಲಿವೆ. ಆಗಸ್ಟ್ 15ರೊಳಗೆ ಎಲ್ಲಾ ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸುತ್ತೇವೆ. ಇದು ನಮ್ಮ ಬದ್ಧತೆ ಎಂದು ತಿಳಿಸಿದರು.

18 ಲಕ್ಷ ರೂಪಾಯಿ ವರಮಾನ ಜಿಲ್ಲಾ ಕೆ ಎಸ್ ಆರ್ ಟಿ ಸಿಗೆ ಬಂದಿದೆ. ಕೆಲವೆಡೆ ಸರ್ಕಾರಿ ಬಸ್ ಗಳು ಖಾಲಿ ಹೋಗುತ್ತವೆ. ಮಹಿಳೆಯರೂ ಪ್ರಯಾಣ ಮಾಡಲಿ. ಬಸ್ ತುಂಬುತ್ತದೆ. ಮಹಿಳೆಯರು ಜಾಸ್ತಿ ದಿನ ತವರು ಮನೆಗೆ ಹೋಗಬೇಡಿ. ಅಲ್ಲಿ ಇಲ್ಲಿ ಎಂದು ಸಂಚರಿಸಬೇಡಿ. ಬೇಗ ಹೋಗಿ ಎರಡೇ ದಿನಕ್ಕೆ ಮತ್ತೆ ಮನೆಗೆ ಬನ್ನಿ ಎಂದು ಸಲಹೆ ನೀಡಿದರು.

10 ಕೆ. ಜಿ. ಅಕ್ಕಿ ನೀಡುವ ಕಾರ್ಯ ಜುಲೈ1ರಿಂದ ಜಾರಿಗೆ ಬರಲಿದೆ. ವಿರೋಧಪಕ್ಷದವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. 5ನೇ ತಾರೀಖು ಬರೋರು, ಎರಡು ದಿನ ಇದ್ದು ಹೋಗೋರು ನಾವಲ್ಲ. ಮನೆ ಯಜಮಾನಿಗೆ 2 ಸಾವಿರ ರೂಪಾಯಿ ಕೊಡೋದು ದೊಡ್ಡ ಯೋಜನೆ. 13 ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅನುಷ್ಠಾನಗೊಳಿಸುತ್ತಾರೆ. ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಸಿದ್ದರಾಮಯ್ಯ ಅವರು, ಸಮರ್ಪಕ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳುತ್ತಾರೆ. ಬಿಜೆಪಿಯವರಿಗೆ ಏನೂ ಗೊತ್ತಿಲ್ಲ. ವಿನಾಕಾರಣ ವಿರೋಧ ಮಾಡುವುದೇ ಅವರ ಕೆಲಸ ಎಂದು ಕಿಡಿಕಾರಿದರು.

ಕೇಂದ್ರದಲ್ಲಿ ಬಿಜೆಪಿ ಆಡಳಿತ ಬಂದ ಮೇಲೆ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿಯಾಗಿದೆ. ವಿದ್ಯಾವಂತರಾದವರು ರಸ್ತೆಗೆ ಬಂದಿದ್ದಾರೆ. ಮುಂದುವರಿದ ರಾಷ್ಟ್ರಗಳಲ್ಲಿ ಶೇಕಡಾ 1ರಿಂದ 2 ರಷ್ಟು ಮಾತ್ರ ನಿರುದ್ಯೋಗ ಸಮಸ್ಯೆ ಇದೆ. ಅಲ್ಲಿನ ಸರ್ಕಾರಗಳು ಬಜೆಟ್ ನಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗದಂತೆ ನೋಡಿಕೊಳ್ಳುವ ಸರ್ಕಾರಗಳು ಇಂಥ ಸಮಸ್ಯೆ ಎದುರಾಗದಂತೆ ನೋಡಿಕೊಂಡಿವೆ. ಪದವೀಧರರು, ಡಿಪ್ಲಮೋ ಪದವೀಧರರಿಗೆ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಕಾಲ ನೀಡುತ್ತೇವೆ. ಸದುಪಯೋಗಪಡಿಸಿಕೊಂಡರೇ ದೇಶವೂ ಉದ್ಧಾರವಾಗುತ್ತದೆ ಎಂದರು.

ಐದು ಗ್ಯಾರಂಟಿಗಳ ಯೋಜನೆ ಜಾರಿಯಿಂದ 55 ಸಾವಿರ ಕೋಟಿ ರೂ. ಅಂದಾಜು ಹಣಕಾಸು ಹೊಡೆತ ಬೀಳುತ್ತದೆ. ಶೇಕಡಾ 90ರಷ್ಟು ಜನರು 200 ಯೂನಿಟ್, ಶೇಕಡಾ 88ರಷ್ಟು ಮಂದಿ 100 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಾರೆ. ಬಡವರಿಗೆ ತುಂಬಾನೇ ಅನುಕೂಲ ಆಗಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ಮಾಯಕೊಂಡ ಶಾಸಕ ಬಸವಂತಪ್ಪ, ಎಡಿಸಿ ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಮಹಾನಗರ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಸದಸ್ಯರಾದ ಗಡಿಗುಡಾಳ್
ಮಂಜುನಾಥ್, ಅಬ್ದುಲ್ ಲತೀಫ್, ನಾಗರಾಜ್ ಸೇರಿದಂತೆ ಇತರರು ಹಾಜರಿದ್ದರು.

Davnagere Ksrtc bus stand

Ksrtc bus stand program in Davanagere

Ksrtc Bus ticket in Davanagere

Davanagere Shakthi Program

ಎಸ್. ಎಸ್. ಮಲ್ಲಿಕಾರ್ಜುನ್ ಎಚ್ಚರಿಕೆ

ಕಾರ್ಯಕ್ರಮಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗರಂ

ಎಸ್ಪಿ, ಡಿಸಿ ಹೆಸರು ಹೇಳದೇ ಕಿಡಿ

ಮನೆಯಲ್ಲಿದ್ದಾರೋ, ಟೂರ್ ಹೋಗಿದ್ದಾರೋ

ದಾವಣಗೆರೆಯಲ್ಲಿ ಕಾರ್ಯಕ್ರಮ ಇದ್ದರೂ ಯಾಕೆ ಬಂದಿಲ್ಲ

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment