SUDDIKSHANA KANNADA NEWS/ DAVANAGERE/ DATE:19-08-2023
ದಾವಣಗೆರೆ (Davanagere): ಧರ್ಮಸ್ಥಳದಲ್ಲಿ ವಿದ್ಯಾರ್ಥಿನಿ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗುವವರೆಗೆ ಹೋರಾಟ ನಿಲ್ಲದು. ಹಿಂದೂ ಧರ್ಮದ ಪ್ರತಿಪಾದಕ ನಾನು. ಕಳೆದ 40 ವರ್ಷಗಳಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ನಾನು ತಪ್ಪು ಮಾಡಿದ್ದರೆ ನನ್ನನ್ನು ಗಲ್ಲಿಗೇರಿಸಲಿ. ಮುಗ್ಧ ಅಮಾಯಕ ಬಾಲಕಿ ಕೊಂದವರಿಗೆ ದಂಡನೆ ಆಗಲೇಬೇಕು. ಹಿಂದೂ ಧರ್ಮ ನಾಶಕ್ಕೆ ಮುಂದಾದರೆ ಬಾಂಬರ್ ಗಳಾಗ್ತೇವೆ ಎಂದು ಪ್ರಜಾಪ್ರಭುತ್ವ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್ ಶೆಟ್ಟಿ ತಿಮ್ಮರೋಡಿ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಸಂತೋಷ್ ರಾವ್ ನಿರಪರಾಧಿ ಎಂದು ಕೋರ್ಟ್ ಸಹ ತೀರ್ಪು ನೀಡಿದೆ. ಹಾಗಾದರೆ ರೇಪ್ ಮಾಡಿ ಹತ್ಯೆ ಮಾಡಿದವರು ಯಾರು? ಇದುವರೆಗೆ ಯಾಕೆ ಬಂಧಿಸಿಲ್ಲ. ಸೌಜನ್ಯಳ ಸಾವಿಗೆ ನ್ಯಾಯ ಸಿಗಲೇಬೇಕು. ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Bhadra Dam:ಭದ್ರಾ ಜಲಾಶಯದ ಒಳಹರಿವು ಕಡಿಮೆ, ಅರೆನೀರಾವರಿ ಬೆಳೆಗೆ ಮಾತ್ರ ನೀರು: ನೀರಾವರಿ ಇಲಾಖೆ ಅಧಿಕಾರಿಗಳು ಕೊಟ್ಟ ಎಚ್ಚರಿಕೆ ಏನು…?
ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬ ಹೋರಾಟ ಆರಂಭಿಸಿದ ಬಳಿಕ ನನಗೆ ಹಿಂದುತ್ವದ ಪಾಠ ಹೇಳಿಕೊಡಲು ಕೆಲವರು ಬರುತ್ತಿದ್ದಾರೆ. ಹಿಂದುತ್ವದ ಪಾಠ ಯಾವ ಸಂಘಟನೆ, ರಾಜಕೀಯ ಪಕ್ಷಗಳಿಂದಲೂ ಬೇಡ. ಕಾರ್ಯಕರ್ತರ ನರನಾಡಿಯಲ್ಲೂ ಹಿಂದುತ್ವ ಇದೆ. ನಾವು ಯಾರ ವಿರುದ್ಧವೂ ಅಲ್ಲ. ಸನಾತನ ಹಿಂದೂ ಧರ್ಮದ ಪರ ನಡೆಯುತ್ತೇವೆ. ಸೌಜನ್ಯ ಘಟನೆ ಆದಾಗಲೇ ಹೇಳಿದ್ದರೂ ಸರಿಮಾಡಿಕೊಂಡಿಲ್ಲ. ಮುಂಬರುವ ದಿನಗಳಲ್ಲಿ ಸರಿಯಾದ ಉತ್ತರ ಕೊಟ್ಟೇ
ಕೊಡುತ್ತೇವೆ. ನಾವು ಸುಮ್ಮನಿದ್ದರೆ ಅಣ್ಣಪ್ಪ, ಮಂಜುನಾಥ ಸ್ವಾಮಿ ನಮ್ಮನ್ನು ಸುಮ್ಮನೆ ಬಿಡ್ತಾರಾ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಲೇಬೇಕೆಂಬುದು ನಮ್ಮ ಒಕ್ಕೊರಲಿನ ಒತ್ತಾಯ ಎಂದು ಹೇಳಿದರು.
ಸೌಜನ್ಯಳ ಪರ ಹೋರಾಟದಲ್ಲಿ ಯಾವುದೇ ಪಂಥ ಇಲ್ಲ. ಸೌಜನ್ಯನಂತೆ ಹಿಂದೆ ಸತ್ತಂಥವರಿಗೆ ನ್ಯಾಯ ಸಿಗಬೇಕು. ಧರ್ಮಸ್ಥಳದಲ್ಲಿ ಜಾಗ, ಹೆಣ್ಣಿಗಾಗಿ ಕೊಲೆ ಮಾಡುತ್ತಿದ್ದಾರೆ. ಪಾಪ ಕೃತ್ಯ ನಡೆಯುತ್ತಿವೆ. ಜೈನ ಸಮುದಾಯದ ಮೇಲೆ
ದಾಳಿ ನಡೆಯುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಾರೆ. ಕಮ್ಯುನಿಸ್ಟ್, ಎಡ, ಬಲ, ಕ್ರೈಸ್ತ ಮಿಷನರಿಗಳು ನಮ್ಮ ಹೋರಾಟದ ಹಿಂದೆ ಇಲ್ಲ. ಧರ್ಮಸ್ಥಳದಲ್ಲಿ ಭಗವದ್ವಜ ಎಲ್ಲಿ. ಒಂದೇ ಒಂದು ಇಲ್ಲ. ಸನಾತನ ಹಿಂದೂ ಧರ್ಮದ ಮೇಲೆ ಪ್ರಹಾರ ಮಾಡುವವರು ಸೌಜನ್ಯ ಕೇಸ್ ನಿಂದ ಸಿಕ್ಕಿಬಿದ್ದಿದ್ದಾರೆ. ಇದು ಸಂಘಪರಿವಾರ, ಹಿಂದು ಸಂಘಟನೆಗಳಿಗೆ ಗೊತ್ತಿಲ್ಲವೇ. ಸೌಜನ್ಯ ಕೇಸ್ ನ ಮೂರು ಸಾಕ್ಷಿಗಳನ್ನು ನಾಶ ಮಾಡಿದ್ದಾರೆ. ಪದ್ಮಾವತಿಯನ್ನು 40 ದಿನ ರೇಪ್ ಮಾಡಿ ಕೊಂದು ಹಾಕಿದ್ದರು. ಈ ಪ್ರಕರಣವೂ ಮುಚ್ಚಿ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಹದಿನೇಳು ವರ್ಷದ ಅಪ್ರಾಪ್ತ ಬಾಲಕಿಗೆ ನ್ಯಾಯ ಸಿಕ್ಕಿಲ್ಲ. ಆರೋಪಿಗಳು ಸಿಕ್ಕಿಲ್ಲ. ನಿರಪರಾಧಿ ಸಂತೋಷ್ ನನ್ನು ಆರೋಪಿ ಎಂದು ಮಾಡಲಾಗಿತ್ತು. ಆರು ವರ್ಷದ ಮೇಲೆ ಜಾಮೀನು ಸಿಗುತ್ತೆ. 11 ವರ್ಷದಲ್ಲಿ ನಿರಪರಾಧಿ ಎಂದು ಕೋರ್ಟ್ ಹೇಳಿದೆ. ಅತ್ಯಾಚಾರ ಆಗಿರುವ ದಾಖಲೆ ಇದೆ. ಕೋರ್ಟ್ ನ ತೀರ್ಪಿನಲ್ಲಿಯೂ ಸಹ ಉಲ್ಲೇಖಿಸಲಾಗಿದೆ. ರಾಜ್ಯದ ಧರ್ಮದ ನ್ಯಾಯದೇವತೆ ಅಣ್ಣಪ್ಪ, ಮಂಜುನಾಥ ನೆಲೆಸಿರುವ ಧಾರ್ಮಿಕ ಸ್ಥಳದಲ್ಲಿ ಆಗಿರುವ ಘಟನೆ ಇಂದು. ಇಂಥ ಅನೇಕ ಘಟನೆಗಳುಈ ಹಿಂದೆಯೂ ನಡೆದಿವೆ. ಈ ಹಿಂದೆ ಇದೇ ರೀತಿ ಅತ್ಯಾಚಾರಗಳ ಆಗಿವೆ. ಪೇಟಾಧಾರಿಗಳ ವಿರುದ್ಧ ಆರೋಪಗಳು ಕೇಳಿ ಬಂದಿದೆ. ಹಿಂದೆ ಜಾಗಕ್ಕೋಸ್ಕರ, ದಾರಿಗೋಸ್ಕರ, ನೀರಿಗೋಸ್ಕರ ಸಾವಿರಾರು ಕಾನೂನು ಬಾಹಿರ ಪ್ರಕರಣ ನಡೆದಿದ್ದರೂ ಕ್ರಿಮಿನಲ್ ಕೇಸ್ ಯಾಕೆ ದಾಖಲಾಗಿಲ್ಲ ಎಂದು ಪ್ರಶ್ನಿಸಿದರು.
ಸುಳ್ಳು ದಾಖಲೆ ಸೃಷ್ಟಿಸಿ ಸಾವಿರಾರು ಎಕರೆ ಪರಭಾರೆ ಮಾಡಲಾಗಿದೆ. ಆದ್ರೂ ಯಾಕೆ ತೆಗೆದುಕೊಂಡಿಲ್ಲ. ರಾಜಕೀಯ, ಸರ್ಕಾರಿ ಕಚೇರಿಗಳಲ್ಲಿ ಧರ್ಮಸ್ಥಳದವರು ಎಂದರೆ ಕೆಲಸ ಆಗುತ್ತದೆ. ಎಲ್ಲಿದೆ ಪ್ರಜಾಪ್ರಭುತ್ವ, ನ್ಯಾಯ ಎಂದು ಪ್ರಶ್ನಿಸಿದರು.
ಸೌಜನ್ಯ ಕುಟುಂಬದವರು ಕೊಟ್ಟಿರುವ ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಿಲ್ಲ. ಹನ್ನೊಂದು ವರ್ಷದದಿಂದ ಸತ್ಯ ಕಣ್ಮುಚ್ಚಿ ಕುಳಿತಿದೆ. ಸೌಜನ್ಯಳಂಥ ಅಪ್ರಾಪ್ತ ಬಾಲಕಿಗೆ ಸಿಗದ ನ್ಯಾಯ ಬೇರೆ ಯಾರಿಗೆ ಸಿಗುತ್ತದೆ ಎಂಬ ವಿಶ್ವಾಸ ಇಟ್ಟುಕೊಳ್ಳಲು ಸಾಧ್ಯ. ನನ್ನನ್ನು ಹಿಂದೂ ವಿರೋಧಿ, ದುಡ್ಡು ತೆಗೆದುಕೊಂಡಿದ್ದೇನೆಂಬ ಸುಳ್ಳು ಆರೋಪ ಮಾಡಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ಯಾವ ಕೇಸ್ ಗಳಿಗೂ ಎಫ್ ಐ ಆರ್ ಆಗಿಲ್ಲ. ಯಾಕೆ ಕ್ರಮ ತೆಗೆದುಕೊಂಡಿಲ್ಲ. ಧರ್ಮಸ್ಥಳ ಭಾತರದಲ್ಲಿ ಇಲ್ಲವಾ. ಏನೇ ಮಾಡಬೇಕಾದರೂ ದೊಡ್ಡವರ ಅನುಮತಿ ಬೇಕಾ. ಅಣ್ಣಪ್ಪ, ಮಂಜುನಾಥ ಸ್ವಾಮಿಯೇ ಕಡಿವಾಣ ಹಾಕಬೇಕು ಎಂದರು.
ಅತ್ಯಾಚಾರ, ಕೊಲೆ ಪ್ರಕರಣದ ಸಾಕ್ಷಿಗಳನ್ನು ನಾಶ ಮಾಡಲಾಗಿದೆ. ಆಗಿನ ತನಿಖಾಧಿಕಾರಿ ಯೋಗೀಶ್, ವೈದ್ಯಾಧಿಕಾರಿ ಆದಂ, ರಶ್ಮಿ, ಆಗಿನ ಎಸ್ಪಿ ಅಭಿಷೇಕ್ ಗೋಯಲ್ ಮುಗಿಸಿಯಾಗಿದೆ. ತನಿಖಾಧಿಕಾರಿಗೆ ಗಲ್ಲು ಆಗಬೇಕು. ಸರ್ಕಾರಿ ಅಧಿಕಾರಿಗೆ
ಜ್ಞಾನ ಇಲ್ಲವೇ. ಉದ್ದೇಶಪೂರ್ವಕವಾಗಿ ಸಾಕ್ಷಿ ನಾಶ ಮಾಡಲಾಗಿದೆ. ಇವರಿಗೆಲ್ಲರಿಗೂ ಶಿಕ್ಷಯಾಗಬೇಕು. ಸೌಜನ್ಯ ಪೋಷಕರು ಕೊಟ್ಟ ದೂರು ತೆಗೆದುಕೊಂಡಿಲ್ಲ. ಇದರಲ್ಲಿ ಉಲ್ಲೇಖಿಸಿರುವ ಅನಮಾನಾಸ್ಪದ ವ್ಯಕ್ತಿಗಳ ಕುರಿತಾಗಿ ಸರಿಯಾಗಿ ತನಿಖೆ
ಯಾಕೆ ನಡೆದಿಲ್ಲ ಎಂದು ಅವರು ಪ್ರಶ್ನಿಸಿದರು.
ಸೌಜನ್ಯ ಪ್ರಕರಣ ಸಂಬಂಧ ಮರುತನಿಖೆ ಅಗತ್ಯವಿಲ್ಲ ಎಂದಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ತಿಳುವಳಿಕೆ ಕಡಿಮೆ ಇದೆ. ಯಾರೋ ಹಳ್ಳಿಯಿಂದ ಬಂದವರು ಹೇಳಿರಬೇಕು. ದೊಡ್ಡ ವಿಷಯ ಅಲ್ಲ ಅದು. ಹಾಗಾಗಿ, ಈ ರೀತಿ ಹೇಳಿಕೆ
ನೀಡಿರಬಹುದು. ಸರ್ಕಾರ ಮರು ತನಿಖೆ ನಡೆಸುವ ಸಂಬಂಧ ಸ್ಪಷ್ಟ ಮಾಹಿತಿ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುವೆ ಅಷ್ಟೇ. ತನಿಖೆ ಮಾಡಿದರೆ ಸ್ವಾಗತ. ನ್ಯಾಯ ಸಿಗದಿದ್ದರೆ ಈ ಸರ್ಕಾರವನ್ನು ನಾವಲ್ಲ, ಅಣ್ಣಪ್ಪ, ಮಂಜುನಾಥ ಸ್ವಾಮಿಯೂ ಬಿಡೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನಗೆ ಎಂಥ ಪ್ರಭಾವಿಗಳು ಫೋನ್ ಮಾಡಿ ಬೆದರಿಕೆ ಹಾಕಿದರೂ ಉಳಿಗಾಲ ಇಲ್ಲ. ನನಗೇನೂ ತಲೆಬಿಸಿ ಇಲ್ಲ. ಇದುವರೆಗೆ ಯಾರು ಫೋನ್ ಮಾಡಿ ಬೆದರಿಕೆ ಹಾಕಿಲ್ಲ. ಸೌಜನ್ಯಳಿಗೆ ನ್ಯಾಯ ಸಿಗುವಂತಾಗಲು ಕಾನೂನು ಹೋರಾಟ ಮುಂದುವರಿಸ್ತೇವೆ. ದೇಶದ ಕಾನೂನಿನ ಮೇಲೆ ನಂಬಿಕೆ ಇದೆ. ಇಲ್ಲದಿದ್ದರೆ ಅಣ್ಣಪ್ಪ ಸ್ವಾಮಿನೇ ಶಿಕ್ಷೆ ಕೊಟ್ಟೇ ಕೊಡುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿಸರ್ಕಾರ್, ರಾಹುಲ್, ಶ್ರೀಧರ್, ಪರಶುರಾಮ್, ರಾಜು, ಮಾರ್ಕಂಡೇಯ, ರಘು ಮತ್ತಿತರರು ಹಾಜರಿದ್ದರು.