ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನಿಗದಿಗಿಂತ ಹೆಚ್ಚು ಮಕ್ಕಳು, ಪ್ರಯಾಣಿಕರ ಹೊತ್ತೊಯ್ಯುವ ವ್ಯಾನ್, ಆಟೋರಿಕ್ಷಾಗಳಿಗೆ ಕೇಸ್, ದಂಡ!

On: August 19, 2025 1:58 PM
Follow Us:
ಮಕ್ಕಳು
---Advertisement---

SUDDIKSHANA KANNADA NEWS/ DAVANAGERE/DATE:19_08_2025

ದಾವಣಗೆರೆ: ನಿಗದಿಗಿಂತ ಹೆಚ್ಚು ಮಕ್ಕಳು ಮತ್ತು ಪ್ರಯಾಣಿಕರನ್ನು ಹೊತ್ತೊಯ್ಯುವ ವ್ಯಾನ್, ಆಟೋರಿಕ್ಷಾಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕೇಸ್ ದಾಖಲಿಸಿ, ದಂಡವನ್ನೂ ವಿಧಿಸಿದ್ದಾರೆ.

READ ALSO THIS STORY: ಧರ್ಮಸ್ಥಳದಲ್ಲಿ ಎಲ್ಲವೂ ಗೊಂದಲಮಯ: ಸುಳ್ಳಿನ ಜಾಲದಿಂದ ದೇವಾಲಯದ ಪರಂಪರೆಗೆ ಧಕ್ಕೆ ತರುವ ಹುನ್ನಾರ!

ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ ಮತ್ತು ಡಿವೈಎಸ್ ಪಿ ಶರಣಬಸವೇಶ್ವರ ಬಿ. ಅವರ ಮಾರ್ಗದರ್ಶನದಲ್ಲಿ ದಾವಣಗೆರೆ ಸಿಪಿಐ ನಲುವಾಗಲು ಮಂಜುನಾಥ ನೇತೃತ್ವದಲ್ಲಿ ದಾವಣಗೆರೆ ದಕ್ಷಿಣ ಮತ್ತು
ಉತ್ತರ ಸಂಚಾರ ಠಾಣೆಯ ಪಿಎಸ್ಐ ಕೆ. ಎನ್. ಶೈಲಜಾ, ಮಹಾದೇವ ಭತ್ತೆ, ಜಯಶೀಲಾ ಹಾಗೂ ಎಎಸ್ಐ ಮತ್ತು ಸಿಬ್ಬಂದಿಗಳು ಬೆಳಿಗ್ಗೆ ಏಳು ಗಂಟೆಯಿಂದ 9 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿದರು.

ಎಲ್ಲೆಲ್ಲಿ ಪರಿಶೀಲನೆ?

ದಾವಣಗೆರೆ ನಗರದಲ್ಲಿ ಸಂಚರಿಸುವ ವಿವಿಧ ಶಾಲಾ ಕಾಲೇಜ್ ಗಳ ಬಸ್, ವ್ಯಾನ್, ಆಟೋ ರೀಕ್ಷಾಗಳನ್ನು ಪರಿಶೀಲನೆ ನಡೆಸಲಾಯಿತು.

  1. ಗುಂಡಿ ಸರ್ಕಲ್
  2. ಅಂಬೇಡ್ಕರ್ ಸರ್ಕಲ್,
  3. ಅರುಣ ಸರ್ಕಲ್
  4. ನಿಜಲಿಂಗಪ್ಪ ಸರ್ಕಲ್
  5. ಸಮುದಾಯ ಭವನ ಸರ್ಕಲ್ ಶಾಮನೂರು
  6. ಹದಡಿ ರಸ್ತೆ
  7. ಎಂ.ಜಿ. ಸರ್ಕಲ್
  8. ಆವರಗೆರೆ
  9. ಸಂಗೊಳ್ಳಿ ರಾಯಣ್ಣ ಸರ್ಕಲ್
  10. ಆರ್.ಎಂ.ಸಿ ಲಿಂಕ್ ರಸ್ತೆ
  11. ಕೆ.ಆರ್. ರಸ್ತೆ
  12. ಹೊಂಡದ ಸರ್ಕಲ್
  13. ಅಕ್ತರ್ ರಜಾ ಸರ್ಕಲ್
  14. ಆರ್.ಟಿ.ಓ ಸರ್ಕಲ್
  15. ಬೆೇತೂರು ರಸ್ತೆ

ಈ ರಸ್ತೆಗಳಲ್ಲಿ ವಿಶೇಷ ಕಾರ್ಯಚರಣೆ ನಡೆಸಿದ್ದು, ಡ್ರಂಕ್ ಅಂಡ್ ಡ್ರೈವ್, ವಾಹನ ಚಾಲನಾ ಪರವಾನಿಗೆ, ವಾಹನದ ದಾಖಲಾತಿಗಳು, ನೋಂದಣಿ ಫಲಕ ಅತಿ ವೇಗದ ಚಾಲನೆ, ಅಪಾಯಕಾರಿ ಚಾಲನೆ, ಹೆಚ್ಚು ಶಾಲಾ ಮಕ್ಕಳನ್ನು
ಹತ್ತಿಸಿಕೊಂಡು ಮತ್ತು ವಾಹನದಲ್ಲಿ ಜಿ.ಪಿ.ಎಸ್, ಸಿಸಿ ಕ್ಯಾಮಾರ ಅಳವಡಿಕೆ, ಬಗ್ಗೆ ಪರಿಶೀಲನೆ ಮಾಡಲಾಯಿತು. ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎರಡು ಪೊಲೀಸ್ ಠಾಣೆಯಿಂದ ಒಟ್ಟು 77 ಶಾಲಾ ವಾಹನಗಳನ್ನು ಪರಿಶೀಲನೆ ಮಾಡಿದ್ದು, ಅದರಲ್ಲಿ ಹೆಚ್ಚು ಶಾಲಾ ಮಕ್ಕಳನ್ನು ಕೆರೆದೊಯ್ಯತ್ತಿದ್ದ 38 ವಾಹನದ ಚಾಲಕರ ವಿರುದ್ಧ ಕೇಸ್ ದಾಖಲಿಸಿ ರೂ. 9200 ದಂಡ ವಿಧಿಸಲಾಗಿದೆ.

ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡಿದ 13 ಶಾಲಾ ವಾಹನ ಚಾಲಕರಿಗೆ ರೂ. 6500 ದಂಡ, ಸಿಗ್ನಲ್ ಜಂಪ್ ಮಾಡಿದ 3 ಪ್ರಕರಣಗಳನ್ನು ದಾಖಲಿಸಿ ರೂ. 1500 ದಂಡ ವಿಧಿಸ,ಲಾಗಿದೆ. ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ಸಾರ್ವಜನಿಕ ರಸ್ತೆಯಲ್ಲಿ ಮದ್ಯಪಾನ ಮಾಡಿ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ವಾಹನ ಚಾಲಕ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಸರಾ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ವಿರೋಧ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು: ಮೊಹಮ್ಮದ್ ಜಿಕ್ರಿಯಾ

ನಡುಕ

“ಮತದಾರರ ಅಧಿಕಾರ ಯಾತ್ರೆ”ಗೆ ಭಾರೀ ಬೆಂಬಲ, ಬಿಜೆಪಿಗೆ ನಡುಕ: ಸೈಯದ್ ಖಾಲಿದ್ ಅಹ್ಮದ್

ಶಿವಾಜಿ

“ಅಫ್ಜಲ್ ಗುರು ವಧೆ ಮಾಡುವ ಶಿವಾಜಿ ಮಹಾರಾಜರ ಪೋಸ್ಟರ್”: ತೆರವಿಗೆ ಪೊಲೀಸರು ಬರುತ್ತಿದ್ದಂತೆ ಮಟಿಕಲ್ ನಲ್ಲಿ ಉದ್ವಿಗ್ನ ವಾತಾವರಣ!

RASHI

ಈ ರಾಶಿಯವರಿಗೆ ವ್ಯಾಪಾರದಲ್ಲಿ ದ್ವಿಗುಣ: ಶುಕ್ರವಾರದ ರಾಶಿ ಭವಿಷ್ಯ 29 ಆಗಸ್ಟ್ 2025

ಟಿಕ್ಕಿ

“ಕಪ್ಪಗಿದ್ದೆಯಾ ಮಗನಿಗೆ ಒಳ್ಳೆಯ ಜೋಡಿಯಲ್ಲ, ಬೇರೆ ಮದ್ವೆ ಮಾಡ್ತೀವಿ ಬಿಟ್ಬಿಡು”: ಟೆಕ್ಕಿ ಸೂಸೈಡ್ ಸ್ಫೋಟಕ ಕಾರಣ ಬಹಿರಂಗ!

ಹಿಂದೂ

ಆ. 29ಕ್ಕೆ ಹಳೇಕುಂದುವಾಡಕ್ಕೆ ಹಿಂದೂ “ಫೈರ್” ಬಾಂಡ್ ಹಾರಿಕಾ ಮಂಜುನಾಥ್: ಯುವಕರಲ್ಲಿ ದೇಶಭಕ್ತಿ, ಸಂಸ್ಕೃತಿ ಮೂಡಿಸುವುದು ಹೇಗೆ? ವಿಷಯದ ಬಗ್ಗೆ ದಿಕ್ಸೂಚಿ ಭಾಷಣ

Leave a Comment