SUDDIKSHANA KANNADA NEWS/ DAVANAGERE/ DATE:07-07-2023
ದಾವಣಗೆರೆ (Davanagere) : ಮನೆ ಕಳ್ಳತನ ಮಾಡಿದ್ದ ಆರು ಆರೋಪಿಗಳನ್ನು ಬಂಧಿಸಿರುವ ದಾವಣಗೆರೆ ಪೊಲೀಸರು (Davanagere Police), ಬಂಧಿತರಿಂದ ಒಟ್ಟು 25 ಲಕ್ಷದ 75 ಸಾವಿರದ 200 ರೂಪಾಯಿ ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿಯನ್ನೂ ಓದಿ:
Santhebennur Pushkarini: ಪುಷ್ಕರಣೆಯ ಸೊಬಗು ನೋಡಿ ಬನ್ನಿ: ಪಿಯು, ಡಿಗ್ರಿ ಕಾಲೇಜು ಹುಡುಗಿಯರು ಹೆಚ್ಚಾಗಿ ಬರಲು ಕಾರಣವೇನು ಗೊತ್ತಾ…?
ಹಾವೇರಿ ಜಿಲ್ಲೆಯ ರಾಣೆೇಬೆನ್ನೂರು ಗೋವಿಂದ ಬಡಾವಣೆಯ ಶಿವರಾಜ ಲಮಾಣಿ ಅಲಿಯಾಸ್ ರಾಜಿ (26), ಮಾರುತಿ (25), ಸುನೀಲ್ ಬಿ. ಲಮಾಣಿ (22), ಮನೋಜ್ ಡಿ. ಲಮಾಣಿ (25), ಅಭಿಷೇಕ್ ಅಲಿಯಾಸ್ ಅಭಿ (22)), ಮಾಲತೇಶ್ (25) ಬಂಧಿತ ಆರೋಪಿಗಳು.
ಕಳೆದ ತಿಂಗಳು ಮೂರನೇ ತಾರೀಖಿನಂದು ಶಾಮನೂರು ಡಾಲರ್ಸ್ ಕಾಲೋನಿ ನಿವಾಸಿ ಡಾ. ತಿಪ್ಪೇಸ್ವಾಮಿ ಅವರು, ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದರು. ನಾಲ್ಕನೇ ತಾರೀಖಿನಂದು ವಾಪಸ್ಸು ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬಾಗಿಲನ್ನು ಹೊಡೆದು ಒಟ್ಟು 31 ಲಕ್ಷದ 34 ಸಾವಿರದ ಐದು ನೂರ ಎಂಬತ್ತೆರಡು ಮೌಲ್ಯದ ಬೆಲೆ ಬಾಳುವ ಬೆಳ್ಳಿ ಬಂಗಾರ ಮತ್ತು ಇತರೆ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು. ಆರೋಪಿಗಳ ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ ಬಸರಗಿ ಮತ್ತು ದಾವಣಗೆರೆ ನಗರ ಉಪ ವಿಭಾಗದ
ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಇನ್ ಸ್ಪೆಕ್ಟರ್ ಆದ ತನಿಖಾಧಿಕಾರಿ ಪ್ರಭಾವತಿ ಸಿ ಶೇತಸನದಿ ಪಿಎಸ್ ಐ ಮಂಜುನಾಥ ಕಲ್ಲದೇವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು.
ಆರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಕಳ್ಳತನ ಮಾಡಿದ್ದ 23 ಲಕ್ಷದ 35 ಸಾವಿರದ ಇನ್ನೂರು ರೂಪಾಯಿಯ ಬೆಲೆ ಬಾಳುವ 417 ಗ್ರಾಂ ಬಂಗಾರದ ಆಭರಣಗಳು, 60 ಸಾವಿರ ರೂಪಾಯಿ ಮೌಲ್ಯದ 328 ಗ್ರಾಂ ಬೆಳ್ಳಿಯ ಆಭರಣ, ಕೃತ್ಯಕ್ಕೆ
ಬಳಸಿದ್ದ 1 ಲಕ್ಷದ 80 ಸಾವಿರ ರೂಪಾಯಿ ಮೌಲ್ಯದ ಎರಡು ಬೈಕ್ ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಆರೋಪಿತರನ್ನು ಪತ್ತೆ ಮಾಡಿದ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ, ತನಿಖಾಧಿಕಾರಿ ಪ್ರಭಾವತಿ ಸಿ ಶೇತಸನದಿರೇಣುಕಾ ಜಿ.ಎಂ.ಮಂಜುನಾಥ ಕಲ್ಲದೇವರು ಹಾಗೂ ಸಿಬ್ಬಂದಿ ಆನಂದ ಮುಂದಲಮನಿ, ಭೋಜಪ್ಪ ಕಿಚಡಿ, ಯೋಗೀಶ್ ನಾಯ್ಕ, ಮಂಜಪ್ಪ.ಟಿ, ಗೋಪಿನಾಥ ಬಿ ನಾಯ್ಕ, ಆರ್. ಲಕ್ಷ್ಮಣ್, ಬಿ. ವಿ. ಮಂಜುನಾಥ, ರಾಮಚಂದ್ರಪ್ಪ, ಅಜಯ್, ಮಂಜುನಾಥ, ಅಕ್ತರ್, ನಾಗರಾಜ ಕುಂಬಾರ್, ಮಾರುತಿ, ವೀರೇಶ್, ರಾಘವೇಂದ್ರ, ಶಾಂತರಾಜ್ ಅವರನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಅವರು ಶ್ಲಾಘಿಸಿದ್ದಾರೆ.
Davanagere Police News, Davanagere Police Updates, Davanagere Police Suddi, Davanagere Police Arrest, Davanagere Police Work, Davanagere Police
Comments 1