SUDDIKSHANA KANNADA NEWS/ DAVANAGERE/ DATE:22-08-2023
ದಾವಣಗೆರೆ (Davanagere): ಬಿಜೆಪಿಯವರು ಗುಣಮಟ್ಟ ವಿಷಯದಲ್ಲಿ ಶೇ.40ರಷ್ಟು ಭ್ರಷ್ಟಾಚಾರವ ಮಾಡಿದ್ದಾರೆ ಎಂಬುದಕ್ಕೆ ನಾನಾ ಉದಾಹರಣೆಗಳ ಪೈಕಿ ಶಾಮನೂರು- ಶಿರಮಗೊಂಡನಹಳ್ಳಿ ಮಧ್ಯದ ರಸ್ತೆ ಮತ್ತೊಂದು ಸಾಕ್ಷಿ ಎಂದು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲಾತಾಣದ ಅಧ್ಯಕ್ಷ ಹರೀಶ್ ಕೆ. ಎಲ್. ಬಸಾಪುರ ಆರೋಪಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಎಸ್.ಎಸ್ ಮಲ್ಲಿಕಾರ್ಜುನ್ ರವರು ರಸ್ತೆ ಮಾಡುವುದು, ಪ್ರತಿ ವರ್ಷ ಅದೇ ರಸ್ತೆಯನ್ನು ರಿಪೇರಿ ಮಾಡುವುದು ಮತ್ತು ಸರ್ಕಾರಕ್ಕೆ ಇದರಿಂದ ಆಗುವ ನಷ್ಟವನ್ನು ತಪ್ಪಿಸಲು ಸಿಮೆಂಟ್ ರಸ್ತೆ ಎಂಬ ಶಾಶ್ವತ ಪರಿಹಾರವನ್ನು ದಾವಣಗೆರೆ ಜಿಲ್ಲೆಯಲ್ಲಿ ಜಾರಿಗೆ ತಂದಿದ್ದರು. ಇದಕ್ಕೆ ಮೊದಲು ವಿರೋಧಿಸಿದ ಬಿಜೆಪಿ ನಾಯಕರು ಬಳಿಕ ಅದೇ ಸಿಮೆಂಟ್ ರಸ್ತೆ ಯೋಜನೆಯನ್ನು ತಮ್ಮ ಅವಧಿಯಲ್ಲೂ ಸಹ ಮುಂದುವರೆಸಿದ್ದರು. ಆದರೆ ಬಿಜೆಪಿಯವರು ಗುಣಮಟ್ಟದ ಕಾಮಗಾರಿ ನಡೆಸಿಲ್ಲ ಎಂದು ದೂರಿದ್ದಾರೆ.
ಈ ಸುದ್ದಿಯನ್ನೂ ಓದಿ:
Davanagere Sp Uma Prashanth:ಡಾ. ಕೆ. ಅರುಣ್ ವರ್ಗಾವಣೆ: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಲೇಡಿ ಸಿಂಗಂ ಖ್ಯಾತಿಯ ಉಮಾ ಪ್ರಶಾಂತ್
2021-22 ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಡಿ ಕೈಗೊಂಡ 40 ಲಕ್ಷ ರೂಪಾಯಿ ವೆಚ್ಚದ ಶಾಮನೂರುನಿಂದ ಶಿರಮಗೊಂಡನಹಳ್ಳಿಗೆ ಸಿಸಿ ರಸ್ತೆ ಹಾಗೂ ಡೆಕ್ ಸ್ಲ್ಯಾಬ್ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು ರಸ್ತೆ ನಿರ್ಮಾಣಗೊಂಡು ಏಳೆಂಟು ತಿಂಗಳುಗಳಲ್ಲಿ ರಸ್ತೆ ಬಿರುಕು ಬಿಟ್ಟಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ನಾಗರೀಕರು ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರವರಿಗೆ ದೂರು ನೀಡುವುದಾಗಿ ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ತಿಳಿಸಿದಾಗ ರಾತ್ರೋ ರಾತ್ರಿ ಬಿರುಕು ಬಿದ್ದ ಸಿಸಿ ರಸ್ತೆಗೆ ಡಾಂಬರ್ ಹಾಕುವ ಮೂಲಕ ತ್ಯಾಪೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎಸ್.ಎಸ್ ಮಲ್ಲಿಕಾರ್ಜುನ ಅವರ ದೂರ ದೃಷ್ಟಿ ಆಲೋಚನೆಯಿಂದ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಿ 25 – 30 ವರ್ಷಗಳ ಕಾಲ ಬಾಳಿಕೆ ಬರಲು ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಿ, ಸರ್ಕಾರದ ಬೊಕ್ಕಸಕ್ಕಾಗುವ ನಷ್ಟ ತಪ್ಪಿಸಲು ಪ್ರಯತ್ನಿಸಿದರೇ, ಬಿಜೆಪಿ ಸರ್ಕಾರದಲ್ಲಿ ಸಿಸಿ ರಸ್ತೆಗಳ ಆಯಸ್ಸು ಏಳೆಂಟು ತಿಂಗಳು ಎಂಬುದು ರಸ್ತೆ ಕಂಡು ಬಂದಿದ್ದು, ಬಿಜೆಪಿ ಆಡಳಿತದ ಅವಧಿಯಲ್ಲಿ ಆಗಿರುವ ಎಲ್ಲಾ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವ ಅಗತ್ಯ ಇದೆ ಎಂದು ಒತ್ತಾಯಿಸಿದ್ದಾರೆ.