Home ದಾವಣಗೆರೆ ಪಿಯು, ಡಿಗ್ರಿ ನಂತರ ಮುಂದೇನು? ದಾವಣಗೆರೆಯಲ್ಲಿ ಜೂನ್ 27, 28 ಕ್ಕೆ “ನ್ಯೂಸ್ ಫಸ್ಟ್” ಬೃಹತ್ ಶಿಕ್ಷಣ ಮೇಳ, ಉಚಿತ ಪ್ರವೇಶ!
ದಾವಣಗೆರೆಬೆಂಗಳೂರುವಾಣಿಜ್ಯ

ಪಿಯು, ಡಿಗ್ರಿ ನಂತರ ಮುಂದೇನು? ದಾವಣಗೆರೆಯಲ್ಲಿ ಜೂನ್ 27, 28 ಕ್ಕೆ “ನ್ಯೂಸ್ ಫಸ್ಟ್” ಬೃಹತ್ ಶಿಕ್ಷಣ ಮೇಳ, ಉಚಿತ ಪ್ರವೇಶ!

Share
ದಾವಣಗೆರೆ
Share

ದಾವಣಗೆರೆ: ಪಿಯುಸಿ ಮುಗಿತು.. ನಂಗ ಇಷ್ಟು ಅಂಕ ಬಂದಿದೆ. ಸಿಇಟಿಯಲ್ಲಿ ಈ ರ್ಯಾಂಕ್ ಬಂದಿದೆ… ನಾವು ಯಾವ ಕೋರ್ಸ್ ಮಾಡಿದ್ರೆ ಬೆಸ್ಟ್, ಡಿಗ್ರಿ ಮುಗೀತು ನಮಗೆ ಯಾವ ಕಾಲೇಜ್ ಸೂಟ್ ಆಗುತ್ತೆ ಅಂತ ವಿದ್ಯಾರ್ಥಿಗಳು, ಪೋಷಕರು ಯೋಚನೆ ಮಾಡ್ತಾ ಇದ್ದೀರಾ. ಈ ಎಲ್ಲ ಯೋಚನೆ, ಆತಂಕ ದೂರ ಮಾಡಲು ನ್ಯೂಸ್ ಫಸ್ಟ್ ಸುದ್ದಿ ವಾಹಿನಿ ದಾವಣಗೆರೆಯ ಪಿಬಿ ರಸ್ತೆ ಬಳಿ ಇರುವ ರೇಣುಕಾ ಮಂದಿರದಲ್ಲಿ ಇದೇ ತಿಂಗಳು ದಿನಾಂಕ 27 ಮತ್ತು 28 ರಂದು ಬೃಹತ್ ಶಿಕ್ಷಣ ಮೇಳ ಮಾಡುತ್ತಿದೆ.

ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ, ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನ ಒಳಗೊಂಡು ಶಿಕ್ಷಣ ಮೇಳ ನಡೆಯಲಿದೆ. ಪಿಯುಸಿ, ಡಿಗ್ರಿ, ಆದ ನಂತರ ಮುಂದೇನು ಅನ್ನೋದಕ್ಕೆ ಎಲ್ಲದಕ್ಕೂ ಉತ್ತರ
ಸಿಗಲಿದೆ..

ಎಜ್ಯುಕೇಶನ್ ಎಕ್ಸ್ಪೋದಲ್ಲಿ ಏನೆಲ್ಲಾ ಮಾಹಿತಿ ಸಿಗಲಿದೆ ಗೊತ್ತಾ..?

  • * ವಿನೂತನ ಕೋರ್ಸ್ ಗಳ ಮಾಹಿತಿ
  • * ಸ್ಥಳದಲ್ಲೆ ದಾಖಲಾದ್ರೆ ಶುಲ್ಕ ವಿನಾಯಿತಿ
  • * ಇಂಜಿನಿಯರಿಂಗ್ ಕೋರ್ಸ್ ನ ಸೆಮಿನಾರ್
  • * ಸಿಇಟಿ ಮಾಕ್ ಕೌನ್ಸಿಲಿಂಗ್
  • * ಆಯ್ದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಫ್
  • * ವಿದ್ಯಾರ್ಥಿಗಳಿಗೆ ಕೆರಿಯರ್ ಕೌನ್ಸಲಿಂಗ್

ಪ್ರತಿ ಗಂಟೆಗೊಮ್ಮೆ ಕೂಡ ಸರ್ಪ್ರೈಜ್ ಗಿಫ್ಟ್ ಕೂಡ ಸಿಗಲಿದೆ. ಇದಕ್ಕೆ ಉಚಿತ ಪ್ರವೇಶವಿದ್ದು, ಪೋಷಕರು ತಮ್ಮ ಮಕ್ಕಳೊಂದಿಗೆ ಎಕ್ಸ್ಪೋದಲ್ಲಿ ಭಾಗಿಯಾದ್ರೆ ಸೂಕ್ತ…

ಇನ್ನೂ ಶನಿವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಎಕ್ಸ್ಪೋ ಉಧ್ಘಾಟಿಸಲಿದ್ದಾರೆ. ಜೊತೆಗೆ ದಾವಣಗೆರೆಯ ವಿವಿಧ ಕಾಲೇಜ್ ನಲ್ಲಿ ಸಿಇಟಿ ಟಾಫರ್ ಆದ ವಿದ್ಯಾರ್ಥಿಗಳಿಗೆ ನ್ಯೂಸ್ ಫಸ್ಟ್ ಕೂಡ ಅಭಿನಂದಿಸಲಿದೆ.. ನ್ಯೂಸ್ ಫಸ್ಟ್ ಎಜ್ಯುಕೇಶನ್ ಎಕ್ಸ್ಪೋದಲ್ಲಿ ಅಗತ್ಯ ಮಾಹಿತಿ ದೊರೆಯಲಿದ್ದು ರಾಜ್ಯದ ಎಲ್ಲ ಜನರ ಭಾಗವಹಿಸಿ ಅದರ ಸದುಪಯೋಗ ಪಡಿಸಿಕೊಳ್ಳಬೇಕಿದೆ.

Share

Leave a comment

Leave a Reply

Your email address will not be published. Required fields are marked *

Related Articles