ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಪತಿ ಕೊಂದಿದ್ದ ಪತ್ನಿ, ಪ್ರಿಯಕರ ಸೆರೆ: ಗಂಡನಿಗೆ ಮುಹೂರ್ತವಿಟ್ಟು ನಾಟಕ ಆಡಿದ್ದಾಕೆಯ ಕೈಗೆ ಬಿತ್ತು ಕೋಳ..!

On: June 14, 2023 12:20 PM
Follow Us:
kavya
---Advertisement---

SUDDIKSHANA KANNADA NEWS/ DAVANAGERE/ DATE:14-06-2023

ದಾವಣಗೆರೆ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಕೊಂದು ಹಾಕಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಹದಡಿ ಪೊಲೀಸರು ಬಂಧಿಸಿದ್ದಾರೆ.

ಕಾವ್ಯ ಹಾಗೂ ವಿನೋಬನಗರದ ವಾಸಿ ಬೀರೇಶ್ (24) ಬಂಧಿತ ಆರೋಪಿಗಳು. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗಾಂಬಿಕಾ ಕ್ಯಾಂಪ್ ನ ಹಳೇಬಿಸಲೇರಿ ಗ್ರಾಮ ವಾಸಿ ಲಿಂಗರಾಜು (34) ಎಂಬಾತ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.

 

Lingaraj death
Lingaraj death

ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಮನೆಗೆ ಬಂದಾಗ ಕಾವ್ಯಾ ತನ್ನ ಪತಿ ಗೋಡೆ ಮೇಲಿಂದ ಬಿದ್ದಾಗ ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ ಎಂದು ನಾಟಕ ಆಡಿದ್ದಳು.

ಈ ಸುದ್ದಿಯನ್ನೂ ಓದಿ: 

ದಾವಣಗೆರೆಯ ಹಳೇಬಿಸ್ಲೇರಿಯಲ್ಲಿ ನಿಗೂಢವಾಗಿ ವಿವಾಹಿತ ಮರಣ: ಸಾವಿನ ಹಿಂದಿದೆಯಾ “ಹೆಣ್ಣಿನ” ನೆರಳು…?

ಗೋಡೆ ಮೇಲಿಂದ ಬಿದ್ದು ನಿಂಗರಾಜ್ ಮೃತಪಟ್ಟಿಲ್ಲ. ಇದೊಂದು ಕೊಲೆ ಎಂದು ಶಿವಲಿಂಗಮ್ಮ ದೂರು ಕೊಟ್ಟಿದ್ದರು. ತನಿಖೆ ಆರಂಭಿಸಿದ ಪೊಲೀಸರು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡರು. ಜೂನ್ 9 ರಂದು ರಾತ್ರಿ 9.10ರಿಂದ 10ರ
ಬೆಳಿಗ್ಗೆ 5.45ರ ಮಧ್ಯದ ಅವಧಿಯಲ್ಲಿ ನಿಂಗರಾಜನನ್ನು ಆತನ ಪತ್ನಿ ಕಾವ್ಯ ಹಾಗೂ ಪ್ರಿಯಕರ ಬೀರೇಶ್ ಯಾವುದೋ ಆಯುಧದಿಂದ ಹೊಡೆದು ಕೊಂದು ಹಾಕಿದ್ದಾರೆ.

ಪತಿಯೊಂದಿಗೆ ಬದುಕಲು ಇಷ್ಟವಿಲ್ಲದ ಕಾರಣ ಬೀರೇಶ್ ನ ಜೊತೆಗೆ ಕಾವ್ಯ ಅನೈತಿಕ ಸಂಬಂಧ ಹೊಂದಿದ್ದಳು. ಇದಕ್ಕೆ ಗಂಡ ಎಲ್ಲಿ ಅಡ್ಡಬರುತ್ತಾನೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ದಾವಣಗೆರೆ ನಗರದ ದೇವರಾಜ್ ಅರಸ್ ಬಡಾವಣೆಯ ಮಹಾನಗರ ಪಾಲಿಕೆಯ ಸ್ಟೇಡಿಯಂ ಆವರಣದಲ್ಲಿ ಬೀರೇಶ್ ಹಾಗೂ ಕಾವ್ಯಳನ್ನು ಆಕೆಯ ತವರು ಮನೆ ದುರ್ಗಾಂಬಿಕಾ ಕ್ಯಾಂಪ್ ನಲ್ಲಿರುವ ಮನೆಯಲ್ಲಿ ಬಂಧಿಸಲಾಗಿದೆ. ಮೂರು ತಿಂಗಳ ಕಾಲ ಮಂಗಳೂರಿನಲ್ಲಿ ಕಾವ್ಯ ಹಾಗೂ ಬೀರೇಶ ಒಟ್ಟಿಗೆ ವಾಸ ಮಾಡಿದ್ದು ಸಹ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಆರೋಪಿಗಳ ಪತ್ತೆಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪವಿಭಾಗದ ಎಎಸ್ಪಿ ಕನ್ನಿಕಾ ಸಿಕ್ರಿವಾಲಾ, ಮಾಯಕೊಂಡ ವೃತ್ತ ನಿರೀಕ್ಷಕ ಡಿ. ನಾಗರಾಜ್ ನೇತೃತ್ವದಲ್ಲಿ ಪಿಎಸ್ ಐ ಸಂಜೀವ್ ಕುಮಾರ್, ಶಕುಂತಲಾ, ಪೊಲೀಸ್ ಮುಖ್ಯ ಪೇದೆಗಳಾದ
ಕೆ. ಶ್ರೀನಿವಾಸ್, ಬಿ. ಚನ್ನಕೇಶವ, ಇತರೆ ಸಿಬ್ಬಂದಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳನ್ನು ಬಂಧಿಸಿದ ಅಧಿಕಾರಿಗಳು, ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ಅವರು ಅಭಿನಂದಿಸಿದ್ದಾರೆ.

Davanagere Death News/ Davanagere Arrest, Davanagere Latest News, Davanagere Crime News, Davanagere News, ದಾವಣಗೆೆರೆ ಕೊಲೆ ಆರೋಪಿಗಳ ಬಂಧನ, ದಾವಣಗೆರೆ ಕ್ರೈಂ ನ್ಯೂಸ್, ದಾವಣಗೆರೆಯಲ್ಲಿ ಪತಿಗೆ ಮುಹೂರ್ತವಿಟ್ಟ ಪತ್ನಿ ಸೆರೆ, ದಾವಣಗೆರೆ ಪೊಲೀಸರ ಕಾರ್ಯಾಚರಣೆ, ಆರೋಪಿಗಳ ಬಂಧನ

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment