SUDDIKSHANA KANNADA NEWS/ DAVANAGERE/ DATE:29-08-2023
ದಾವಣಗೆರೆ (Davanagere): ಸಂಸದ ಜಿ. ಎಂ. ಸಿದ್ದೇಶ್ವರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ನಡುವಿನ ವಾಗ್ಯುದ್ಧ ಮುಂದುವರಿದಿದೆ. ಇದು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮಲ್ಲಿಕಾರ್ಜುನ್ ರ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚು ಮಾತನಾಡದಿದ್ದರೂ ಮಾಜಿ ಶಾಸಕ ಎಸ್. ಎ. ರವೀಂದ್ರನಾಥ್ ಹಾಗೂ ಎಸ್ ಎಸ್ ಎಂ ಸ್ನೇಹಿತರು ಎಂಬ ಮಾತು ಆಡಿದ್ದರು. ಈ ಮಾತಿಗೆ ಸಿಡಿಗುಂಡುಗಳನ್ನು ಸಿಡಿಸಿರುವ ಸಚಿವ ಮಲ್ಲಿಕಾರ್ಜುನ್ ಅವರು, ತಪ್ಪು ಮಾಡಿಲ್ಲವೆಂದರೆ ಆಣೆ ಮಾಡಲಿ ಎಂದು ಸಿದ್ದೇಶ್ವರ ಅವರಿಗೆ ಸವಾಲು ಹಾಕಿದರು.
ಈ ಸುದ್ದಿಯನ್ನೂ ಓದಿ:
M. P. Renukacharya: ರಾಜ್ಯದಲ್ಲಿ ಕಾಂಗ್ರೆಸ್ ಅಲ್ಲ, ಬಿಜೆಪಿ ಮುಕ್ತವಾಗ್ತಿದೆ, ಬಿಎಸ್ ವೈಗೆ ಆಗಿರುವ ಬೇಸರ ವಿಚಾರ ಬಹಿರಂಗಗೊಳಿಸಿದ ಎಂ. ಪಿ. ರೇಣುಕಾಚಾರ್ಯ…!
Davanagereಯ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ (Davanagere) ಲೋಕಸಭಾ ಸದಸ್ಯರಾಗಿ ಮಾತ್ರ ಕಾರ್ಯನಿರ್ವಹಿಸಿದ್ದರೆ, ರಾಜ್ಯಕ್ಕೆ ಸಂಬಂಧಿಸಿದ ಯಾವ ಯೋಜನೆ, ಕಾಮಗಾರಿಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ, ತಾನು ಯಾವುದೇ ತಪ್ಪು ಮಾಡಿಲ್ಲ ಎಂಬ ಬಲವಾದ ನಂಬಿಕೆ ಇದ್ದರೆ ಸಿದ್ದೇಶ್ವರ ಆಣೆ ಮಾಡಲಿ ನೋಡೋಣ. ದಾವಣಗೆರೆಗೆ ಸಿದ್ದೇಶ್ವರ ಅವರು ಕೇವಲ ದುಡ್ಡು ಮಾಡಲು ಬಂದಿರುವುದು. ದುಡ್ಡು ಮಾಡಿಕೊಂಡು ಹೋಗೋದು ಅಷ್ಟೇ ಎಂದು ಛೇಡಿಸಿದರು.
ಮಂಗ ತಿಂದು ಒರೆಸಿದ ಕಥೆ ಹೇಳಿದ ಎಸ್ಎಸ್ಎಂ:
ದಾವಣಗೆರೆ (Davanagere) ಸಂಸದ ಜಿ. ಎಂ. ಸಿದ್ದೇಶ್ವರ ಅವರು, ಬಿಜೆಪಿ ಆಡಳಿತಾವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜೊತೆ ಸೇರಿಕೊಂಡು ಲೂಟಿ ಹೊಡೆದಿದ್ದಾರೆ. ಮಂಗ ಏನೋ ತಿಂದು ಯಾರಿಗೋ ಒರೆಸಿತ್ತು ಅಂತಾರಲ್ಲಾ ಹಾಗೆ. ಮಂಗ ತಿಂದು ಮ್ಯಾಕೆಗೆ ಒರೆಸಿತ್ತು ಎಂಬ ಗಾದೆಯಂತೆ ಎಲ್ಲವನ್ನೂ ಲೂಟಿ ಹೊಡೆದಿದ್ದಾರೆ. ಎಲ್ಲಾ ತಿಂದು ತೇಗಿ ಬಿಟ್ಟಿದ್ದಾರೆ. ಸ್ಮಾರ್ಟ್ ಸಿಟಿ, ಕುಂದುವಾಡ ಕೆರೆ ಸೇರಿದಂತೆ ವಿವಿಧ ಯೋಜನೆಗಳಲ್ಲಿಯೂ ಇದು ಆಗಿದೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರ ಮಾಡಲು ಬಿಡಲಿಲ್ಲ:
ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ ಮತ್ತು ರೇಣುಕಾಚಾರ್ಯರ ಮೇಲೆ ಈಗ ಸಿದ್ದೇಶ್ವರ ಎಲ್ಲವನ್ನೂ ಹಾಕಲು ಮುಂದಾಗಿದ್ದಾರೆ. ಸರ್ಕಾರ ಇದ್ದಾಗ ಜಿಲ್ಲೆಯಲ್ಲಿ ಇವರಿಗ್ಯಾರಿಗೂ ಅಧಿಕಾರ ಮಾಡಲು ಬಿಡಲಿಲ್ಲ. ಎಲ್ಲಾ ತಿಂದ ಮೇಲೆ
ನಾನು ಮಧ್ಯಪ್ರವೇಶಿಸುವುದಿಲ್ಲ, ನಾನು ಲೋಕಸಭಾ ಸದಸ್ಯ. ಕೇಂದ್ರ ಸರ್ಕಾರದ ಯೋಜನೆಗಳು, ಸಂಸದರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ ಎನ್ನುತ್ತಿದ್ದಾರೆ. ಮಧ್ಯಪ್ರವೇಶಿಸಿಯೇ ಇಲ್ಲ ಎನ್ನುವುದಾದರೆ ಆಣೆ ಮಾಡಲಿ.
ಸುಖಾಸುಮ್ಮನೆ ಅವರು, ಇವರ ಮೇಲೆ ಯಾಕೆ ಹಾಕಬೇಕು. ಅವರು ಮಾಡಿದ ತಪ್ಪು ಇದೆ ಎಂದು ಒಪ್ಪಿಕೊಂಡತಾಯ್ತು ಅಲ್ವಾ ಎಂದು ಹೇಳಿದರು.
ಮೂವರ ತೆಗೆದಾಗಿದೆ, ಮತ್ತೆ ಇನ್ಯಾರಿದ್ದಾರೋ..?
ಹೇಳುತ್ತಾ ಹೋದರೆ ಸಾಕಷ್ಟು ವಿಚಾರಗಳಿವೆ. ಈಗಾಗಲೇ ಜಿಲ್ಲೆಯಲ್ಲಿ ಮೂವರು ಶಾಸಕರಾಗಿದ್ದವರು ಸೋತಿದ್ದಾರೆ. ಈಗ ಮೂವರನ್ನು ತೆಗೆದು ಹಾಗಿದೆ. ಚುನಾವಣೆಗೆ ಮುನ್ನ ಇನ್ನು ಯಾರ್ಯಾರನ್ನು ತೆಗೆಯುತ್ತಾರೋ ಏನೋ ಗೊತ್ತಿಲ್ಲ. ಏನಾಗುತ್ತದೆ ಎಂಬುದನ್ನು ಮುಂದೆ ನೋಡೋಣ ಎಂದು ಹೇಳಿದರು.
ನಾಚಿಕೆಯಾಗಲ್ವಾ..?
ದಾವಣಗೆರೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಲು ಕಾರಣ ನಾವು. ಸ್ಮಾರ್ಟ್ ಸಿಟಿ ನಾವು ತಂದಿದ್ದು ಎಂದು ಹೇಳಿಕೊಳ್ಳಲು ಜಿ. ಎಂ. ಸಿದ್ದೇಶ್ವರ ಅವರಿಗೆ ನಾಚಿಕೆಯಾಗೋದಿಲ್ವಾ. ಒಂದು ಏನಾದರೂ ಪ್ರಯತ್ನ ಇದೆಯಾ ಅವರದ್ದು. ಸ್ಮಾರ್ಟ್ ಸಿಟಿ ತಂದಿದ್ದು ಕಾಂಗ್ರೆಸ್ ನವರು. 2016 -17ರಲ್ಲಿ ಜಾರಿಗೆ ತಂದೆವು. ದೇಶದಲ್ಲಿ ಸ್ಮಾರ್ಟ್ ಸಿಟಿ ವಿಭಾಗದಲ್ಲಿ 9 ನೇ ಸ್ಥಾನದಲ್ಲಿದ್ದೆವು. ಈಗ ಎಷ್ಟನೇ ಸ್ಥಾನದಲ್ಲಿದ್ದೇವೆ ಎಂಬುದನ್ನು ಕೇಳಿ. ಎಲ್ಲೆಲ್ಲಿ ಲೂಟಿ ಹೊಡೆಯಬೇಕೋ ಅಲ್ಲೆಲ್ಲಾ ಲೂಟಿ ಹೊಡೆದಿದ್ದಾರೆ. ಸ್ವಚ್ಛತೆ ಎಂಬುದನ್ನೇ ಕಾಪಾಡಿಲ್ಲ. ಯಾವ ಯೋಜನೆ ಎಲ್ಲಿ ಜಾರಿಗೊಳಿಸಬೇಕು ಎಂಬುದರ ಬಗ್ಗೆ ನಿಖರತೆ ಇಲ್ಲ. ಎಲ್ಲವನ್ನೂ ಅವರ ಕಾಲೇಜಿಗೆ ಹಾಕಿಕೊಂಡಿದ್ದಾರೆ. ಎಂದು ಕಿಡಿಕಾರಿದರು.