ದಾವಣಗೆರೆ: ಕುಕ್ಕುವಾಡ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ನೋಂದಣಿ ಒಂದೇ ದಿನದಲ್ಲಿ ಮುಗಿದಿದೆ. ನೋಂದಣಿಗಾಗಿ ಬಂದ ರೈತರು ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂದುರುಗಿದರು.
ಈ ಸಂದರ್ಭದಲ್ಲಿ ರೈತರೊಂದಿಗೆ ಉಪಸ್ಥಿತರಿದ್ದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಮಾತನಾಡಿ, ಶಾಮನೂರು ಎಸ್ ಎಸ್ ಗಣೇಶ್ ರವರ ಒಡೆತನದ ಕುಕ್ಕುವಾಡ ಶುಗರ್ ಫ್ಯಾಕ್ಟರಿ ಡಿಸ್ಟಿಲರಿಯವರು ಕ್ವಿಂಟಾಲ್ ಒಂದಕ್ಕೆ ₹2400.00ರ ದರದಂತೆ 7295 ಕ್ವಿಂಟಾಲ್ ಖರೀದಿಸಬೇಕು ಮತ್ತು ಇದಕ್ಕಾಗಿ ಶೇ.50 ರಷ್ಟು ಹಣವನ್ನು ಮುಂಗಡವಾಗಿ ಪಾವತಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಡಿಸ್ಟಿಲರಿಯವರು ಬಿಜೆಪಿ ಹೋರಾಟಕ್ಕೆ ಮಣಿದು ಕೇವಲ 2000 ಕ್ವಿಂಟಾಲ್ ಖರೀದಿಸುವುದಾಗಿ ಹೇಳಿ, 24 ಲಕ್ಷ ರೂಪಾಯಿ ಮುಂಗಡ ಹಣ ಪಾವತಿಸಿದೆ. ಆದ್ದರಿಂದ ನೋಂದಣಿ
ಪ್ರಕ್ರಿಯೆ ಕೇವಲ 2000 ಕ್ವಿಂಟಾಲ್ ಸೀಮಿತಗೊಳಿಸಿ 61 ರೈತರ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಇದರಿಂದ ರೊಚಿಗೆದ್ದ ರೈತರು ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಆಗ ಬಿ ಎಂ ಸತೀಶ್ ರವರು ನೋಡಲ್ ಅಧಿಕಾರಿಯಾಗಿರುವ ಅಬಕಾರಿ ಡಿಸಿ ಚಿದಾನಂದ ಜನೈ ರವರೊಂದಿಗೆ ಮಾತನಾಡಿ ನೀವು ಎಲ್ಲಿದ್ದೀರಿ ಸ್ಥಳಕ್ಕೆ ಬನ್ನಿ ಎಂದು ತಾಕೀತು ಮಾಡಿದರು. ಆದರೆ ಅವರು ಮಾತನಾಡಿ ಡಿಸ್ಟಿಲರಿಯವರಿಗೆ ಮನವೊಲಿಸಿ ಇನ್ನುಳಿದ 5295 ಕ್ವಿಂಟಾಲ್ ಖರೀದಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮೆಕ್ಕೆಜೋಳ ಬೆಳೆದ ರೈತರ ಗೋಳು ಹೇಳತೀರದಾಗಿದೆ. ದರ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೀಡಾಗಿರುವ ರೈತರನ್ನು ಅಲೆದಾಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ಜಿ ಎಂ ಗಂಗಾಧರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಇದಕ್ಕೂ ತಮಗೂ ಸಂಬಂಧವಿಲ್ಲದವರಂತೆ ನಡೆದುಕೊಳ್ಳುತ್ತಾರೆ ಎಂದು ಬಿ ಎಂ ಸತೀಶ್ ಆರೋಪಿಸಿದರು.
ಬಿಜೆಪಿ ಮುಖಂಡರ ಆರೋಪ ಮತ್ತು ಹೋರಾಟ
ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಅವರ ನೇತೃತ್ವದಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಕೆಳಗಿನ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ:
ಮುಂಗಡ ಹಣದ ಕೊರತೆ: ನಿಯಮದಂತೆ ಖರೀದಿಸುವ ಮೊತ್ತದ ಶೇ.50 ರಷ್ಟು ಹಣವನ್ನು ಮುಂಗಡವಾಗಿ ಪಾವತಿಸಬೇಕು. ಆದರೆ ಡಿಸ್ಟಿಲರಿಯವರು ಕೇವಲ ₹24 ಲಕ್ಷ ಪಾವತಿಸಿರುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ನೋಡಲ್ ಅಧಿಕಾರಿಯಾದ ಅಬಕಾರಿ ಡಿಸಿ ಚಿದಾನಂದ ಜನೈ ಅವರಿಗೆ ಸ್ಥಳಕ್ಕೆ ಆಗಮಿಸುವಂತೆ ತಾಕೀತು ಮಾಡಲಾಗಿದೆ. ಬಾಕಿ ಉಳಿದ 5,295 ಕ್ವಿಂಟಾಲ್ ಖರೀದಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಜನಪ್ರತಿನಿಧಿಗಳ ವಿರುದ್ಧ ಕಿಡಿ: ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ಈ ವಿಷಯದಲ್ಲಿ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂದು ಆರೋಪಿಸಲಾಗಿದೆ.
ರೈತರ ಪ್ರಸ್ತುತ ಸ್ಥಿತಿ
ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ದರ ಕುಸಿತದಿಂದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ.
ಸರಿಯಾದ ವ್ಯವಸ್ಥೆ ಇಲ್ಲದೆ ಅಲೆದಾಡುತ್ತಿರುವುದು ರೈತರ ಆರ್ಥಿಕ ಮತ್ತು ಮಾನಸಿಕ ನೆಮ್ಮದಿಯನ್ನು ಹಾಳುಮಾಡುತ್ತಿದೆ.
ಗಮನಿಸಿ: ಸರ್ಕಾರ ನಿಗದಿಪಡಿಸಿದ ಪೂರ್ಣ ಪ್ರಮಾಣದ ಮೆಕ್ಕೆಜೋಳವನ್ನು ಖರೀದಿಸದಿದ್ದರೆ ರೈತರಿಗೆ ಭಾರಿ ನಷ್ಟ ಉಂಟಾಗುವ ಭೀತಿ ಇದೆ.
ಪ್ರತಿಭಟನೆ ವೇಳೆ ಕೊಳೇನಹಳ್ಳಿ ಕೆ.ಜಿ.ಚೆನ್ನಬಸಪ್ಪ, ಎಸ್.ಸಿ.ಸಿದ್ದಪ್ಪ, ಕಾಶೀಪುರದ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.
- BM Sathish BJP
- Davanagere Agriculture News
- Farmer protest Davanagere
- Kannada Keywords: ಮೆಕ್ಕೆಜೋಳ ಖರೀದಿ
- Karnataka Farmers.
- Kukkuwada Sugar Factory
- Maize price drop
- Maize procurement Davanagere
- Maize procurement limit
- Maize registration closed
- Minimum Support Price (MSP) Karnataka
- ಕನಿಷ್ಠ ಬೆಂಬಲ ಬೆಲೆ
- ಕರ್ನಾಟಕ ಕೃಷಿ ಸುದ್ದಿ
- ಕುಕ್ಕುವಾಡ ಮೆಕ್ಕೆಜೋಳ ನೋಂದಣಿ
- ಕುಕ್ಕುವಾಡ ಶುಗರ್ ಫ್ಯಾಕ್ಟರಿ
- ದಾವಣಗೆರೆ ಜಿಲ್ಲಾಧಿಕಾರಿ.
- ದಾವಣಗೆರೆ ಸುದ್ದಿ
- ಬಿ ಎಂ ಸತೀಶ್ ಬಿಜೆಪಿ
- ಮೆಕ್ಕೆಜೋಳ ದರ ಕುಸಿತ
- ರೈತರ ಆಕ್ರೋಶ





Leave a comment