Home ಕ್ರೈಂ ನ್ಯೂಸ್ ನವವಿವಾಹಿತೆ ಓಡಿಸಿಕೊಂಡು ಹೋಗಿ ಇಬ್ಬರ ಸಾವಿಗೆ ಕಾರಣನಾಗಿದ್ದ ಪ್ರಿಯತಮ ಬಂಧನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ನವವಿವಾಹಿತೆ ಓಡಿಸಿಕೊಂಡು ಹೋಗಿ ಇಬ್ಬರ ಸಾವಿಗೆ ಕಾರಣನಾಗಿದ್ದ ಪ್ರಿಯತಮ ಬಂಧನ!

Share
ಪ್ರಿಯತಮ
Share

ದಾವಣಗೆರೆ: ನವವಿವಾಹಿತೆ ಓಡಿಸಿಕೊಂಡು ಹೋಗಿದ್ದರಿಂದ ಮನನೊಂದು ಪತಿ ಮತ್ತು ಆಕೆಯ ಸೋದರ ಮಾವನ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಿಯತಮನನ್ನು ದಾವಣಗೆರೆ ಗ್ರಾಮಾಂತರ ಪೊಲೀ ಸರು ಬಂಧಿಸಿದ್ದಾರೆ.

ಶಿವಕುಮಾರ್ ಅಲಿಯಾಸ್ ಕುಮಾರ್ ಬಂಧಿತ ಆರೋಪಿ. ಈ ಪ್ರಕರಣ ಸಂಬಂಧ ಸರಸ್ವತಿಯನ್ನು ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ಸಂಬಂಧಿಕರ ಮನೆಯಲ್ಲಿ ಇದ್ದ ಸರಸ್ವತಿಯನ್ನು ಪೊಲೀಸರು ಬಂಧಿಸಿದ್ದರು.

ಶಿವಕುಮಾರ್ ಅಲಿಯಾಸ್ ಕುಮಾರ್ ಎಂಬಾತನ ಜೊತೆ ಮದುವೆಗೆ ಮುಂಚೆಯೇ ಸರಸ್ವತಿ ಪ್ರೀತಿ ಬಲೆಯಲ್ಲಿ ಬಿದ್ದಿದ್ದಳು. ಆದರೂ ಮನೆಯವರ ಒತ್ತಡಕ್ಕೆ ಮಣಿದು ಹರೀಶ್ ನನ್ನು ಮದುವೆಯಾಗಿದ್ದಳು. ಮದುವೆಯಾದ ಬಳಿಕ ಪತಿ ಹರೀಶ್ ಗೆ ಕಿರುಕುಳ ಕೊಡುತ್ತಲೇ ಇದ್ದಳು. ಪ್ರಿಯತಮ ಜೊತೆಗೆ ಸರಸ್ವತಿ ಮಾತ್ರ ಸರಸ ಸಲ್ಲಾಪ ನಿಲ್ಲಿಸಿರಲಿಲ್ಲ. ಸರಸ್ವತಿ ಬಿಟ್ಟುಬಿಡುವಂತೆ ಹರೀಶ್ ಗೆ ಶಿವಕುಮಾರ್ ಬೆದರಿಕೆ ಹಾಕಿದ್ದ. ಮಾತ್ರವಲ್ಲ, ಜೀವ ತೆಗೆಯುವುದಾಗಿ ಎಚ್ಚರಿಕೆ ನೀಡಿದ್ದ ಎಂದು ಕುಟುಂಬಸ್ಥರು ಗ್ರಾಮಾಂತರ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಆರೋಪಿಸಿದ್ದರು.

ಸರಸ್ವತಿ ಮತ್ತು ಶಿವಕುಮಾರ್ ಓಡಿ ಹೋಗಿದ್ದರಿಂದ ಮನನೊಂದು ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದರು. ಸರಸ್ವತಿ ಸೋದರ ಮಾವ ರುದ್ರೇಶ್ ಕೂಡ ಹರೀಶ್ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹರೀಶ್ ಮತ್ತು ರುದ್ರೇಶ್ ಸಂಬಂಧಿಕರು ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು.

ಸೋದರ ಮಾವ, ಚಿಕ್ಕಮ್ಮ ಎಸ್ಕೇಪ್:

ಶಿವಕುಮಾರ್ ಜೊತೆಗೆ ಸರಸ್ವತಿ ಸೋದರ ಮಾವ ಗಣೇಶ್ ಮತ್ತು ಚಿಕ್ಕಮ್ಮ ಸಹ ನಾಪತ್ತೆಯಾಗಿದ್ದು, ಪತ್ತೆಗೆ ದಾವಣಗೆರೆ ಗ್ರಾಮಾಂತರ ಪೊಲೀಸರು ಬಲೆ ಬೀಸಿದ್ದಾರೆ.

ಏನಿದು ಪ್ರಕರಣ:

ಪತ್ನಿ ಅಕ್ರಮ ಸಂಬಂಧಕ್ಕೆ ಬೇಸತ್ತು ಮದುವೆಯಾದ ಎರಡೂವರೆ ತಿಂಗಳಿಗೆ ನವವಿವಾಹಿತ ಗ್ರಾಮದ ಜಮೀನಿಗೆ ಹೋಗುವ ರಸ್ತೆಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ನಡೆದಿತ್ತು. ಈತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನವವಿವಾಹಿತೆಯ ಸೋದರ ಮಾವ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು.

ಗುಮ್ಮನೂರು ಗ್ರಾಮದ ಹರೀಶ್ (32) ಮೃತಪಟ್ಟ ದುರ್ದೈವಿ. ನವವಿವಾಹಿತೆಯ ಸೋದರ ಮಾವ ರುದ್ರೇಶ್ ಸಾವಿನ ಸುದ್ದಿ ಕುಟುಂಬಸ್ಥರು ಸಂಬಂಧಿಕರಲ್ಲಿ ಆಘಾತ, ನೋವು ತಂದಿತ್ತು.

Share

Leave a comment

Leave a Reply

Your email address will not be published. Required fields are marked *