Home ಕ್ರೈಂ ನ್ಯೂಸ್ ನಾನು ನನ್ನ ತಂಗಿ ಒಂದು ರೂಂನಲ್ಲಿ ಮಲಗ್ತೇವೆ, ಅಮ್ಮ – ಗುರೂಜಿ ಬೇರೆ ರೂಮಿನಲ್ಲಿ…! ಮಗಳು ಬಿಚ್ಚಿಟ್ಟ ಸ್ಫೋಟಕ ರಹಸ್ಯವೇನು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನಾನು ನನ್ನ ತಂಗಿ ಒಂದು ರೂಂನಲ್ಲಿ ಮಲಗ್ತೇವೆ, ಅಮ್ಮ – ಗುರೂಜಿ ಬೇರೆ ರೂಮಿನಲ್ಲಿ…! ಮಗಳು ಬಿಚ್ಚಿಟ್ಟ ಸ್ಫೋಟಕ ರಹಸ್ಯವೇನು?

Share
ಅಮ್ಮ
Share

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ವಿವಾಹಿತೆ ಮಹಿಳೆ ಜೊತೆ ಜ್ಯೋತಿಷಿ ಕಮಲಾಕರ್ ಭಟ್ ಅನೈತಿಕ ಸಂಬಂಧ ಹೊಂದಿದ್ದಲ್ಲದೇ, ಆಕೆ ಮಕ್ಕಳ ಮನಸ್ಸಿನ ಮೇಲೂ ಕೆಟ್ಟ ಪರಿಣಾಮ ಬೀರಿದೆ. ಅಮ್ಮ ಮತ್ತು ಗುರೂಜಿ ಒಂದೇ ರೂಂನಲ್ಲಿ ಇರೋದಲ್ಲದೇ, ಪುತ್ರಿಗೆ ಕಿರುಕುಳ ನೀಡಿದ ಆರೋಪವೂ ಕೇಳಿ ಬಂದಿದೆ.

ಪತ್ನಿ

ಸುಚಿತ್ರಾ ಮಗಳೇ ಸ್ಫೋಟಿಸಿರುವ ಮಾಹಿತಿ ಪ್ರಕಾರ ಇಬ್ಬರ ನಡುವೆ ಅನೈತಿಕ ಸಂಬಂಧ ಇದ್ದದ್ದು ಬೆಳಕಿಗೆ ಬಂದಿದೆ. ನಾನು ಮತ್ತು ನನ್ನ ತಂಗಿ ಒಂದು ರೂಂನಲ್ಲಿ ಮಲಗಿದರೆ, ಗುರೂಜಿ ಮತ್ತು ಅಮ್ಮ ಬೇರೆ ರೂಂನಲ್ಲಿ ಮಲಗುತ್ತಿದ್ದರು ಎಂದು ಹೇಳುವ ಮೂಲಕ ಕಾಮುಕ ಗುರೂಜಿ ಕಾಮಕಾಂಡ ಬಟಾಬಯಲಾಗುವಂತೆ ಮಾಡಿದೆ.

ಕಳೆದ 20 ವರ್ಷಗಳ ಹಿಂದೆ ಮಹೇಶ್ ನಾಯ್ಕ ಮತ್ತು ಸುಚಿತ್ರಾ ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಬಳಿಕ ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಬೆಂಗಳೂರಿನಲ್ಲಿ ಮಹೇಶ್ ನಾಯ್ಕ ಕೆಲಸ ಮಾಡುತ್ತಿದ್ದರೆ, ಇತ್ತ ಗುರೂಜಿ ಜೊತೆ ಸುಚಿತ್ರಾ ರಂಗಿನಾಟ ಶುರುವಿಟ್ಟುಕೊಂಡಿದ್ದಳು.

ಹೊರಗೆ ನಾರ್ಮಲ್.. ಒಳಗಡೆ…?

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಮಹೇಶ್ ಮತ್ತು ಸುಚಿತ್ರಾ ಇಬ್ಬರು ಮಕ್ಕಳೊಂದಿಗಿನ ಜೀವನ. ಹೊರಗೆ ನೋಡಿದರೆ ಎಲ್ಲವೂ ನಾರ್ಮಲ್. ಆದರೆ ಒಳಗೆ ದೊಡ್ಡದಾದ ಬಿರುಕು.

ಬಯಲಾಗಿದ್ದು ಒಂದು ಮೆಸೇಜ್ ನಿಂದ:

ಕಳೆದ ಆರು ತಿಂಗಳ ಹಿಂದೆ, ಸುಚಿತ್ರಾಳ ಪತಿಗೆ ಗುರೂಜಿ ಜೊತೆಗಿನ ಅಕ್ರಮ ಸಂಬಂಧ ಗೊತ್ತಾಗಿದೆ. ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಶಿವಮೊಗ್ಗಕ್ಕೆ ಸುಚಿತ್ರಾ ಹೋಗಿದ್ದಳು. ಅಲ್ಲಿ ವಾಸವಾಗಿದ್ದುಕಮಲಾಕರ ಭಟ್ ಗುರೂಜಿ ಜೊತೆ. ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಗುರೂಜಿ ಎಂದರೆ ದೇವರಂತವರು ಅನ್ನೋ ನಂಬಿಕೆ. ಆದರೆ ಆ ನಂಬಿಕೆಯ ಹಿಂದೆ ಮೌನವಾಗಿ ಬೆಳೆದಿದ್ದ ಸಂಬಂಧವೊಂದು, ಕೊನೆಗೆ ಮಗಳ ಮೆಸೇಜ್ ಮೂಲಕ ಸ್ಫೋಟವಾಗಿದೆ.

ಸ್ಫೋಟಕ ಸತ್ಯವೇನು?

“ನಾನು ಮತ್ತು ತಂಗಿ ಒಂದೇ ರೂಮಿನಲ್ಲಿ ಮಲಗ್ತೀವಿ. ಅಮ್ಮ ಮತ್ತು ಗುರೂಜಿ ಬೇರೆ ರೂಮಿನಲ್ಲಿ…” ಮಗಳು ತನ್ನ ತಂದೆಗೆ ಕಳುಹಿಸಿದ ಸರಳ ಮೆಸೇಜ್ ಅಲ್ಲ. ಒಂದು ಕುಟುಂಬದ ವೈವಾಹಿಕ ಜೀವನ, ಮಕ್ಕಳೊಂದಿಗಿನ ಸುಂದರ ಬದುಕಿಗೆ ಕೊಳ್ಳಿ ಇಟ್ಟಿದೆ. ಇದು ಅಷ್ಟಕ್ಕೆ ನಿಂತಿಲ್ಲ.

ಅಮ್ಮ ಹಿಂಸೆ ಕೊಡ್ತಾಳೆ, ಕರೆದುಕೊಂಡು ಹೋಗು ಅಪ್ಪ:

“ಅಮ್ಮ ನನ್ನಿಗೆ ಹಿಂಸೆ ಕೊಡ್ತಿದ್ದಾರೆ ಪ್ಲೀಸ್ ಅಪ್ಪ, ನನ್ನನ್ನು ಕರೆದುಕೊಂಡು ಹೋಗು ಇಲ್ಲ ಅಂದ್ರೆ ನಾನು ಸಾಯ್ತೀನಿ” ಎಂದು ಪುತ್ರಿ ತನ್ನ ತಂದೆಗೆ ಮೆಸೇಜ್ ಕಳುಹಿಸಿದ್ದಾಳೆ. ಈ ಮೆಸೇಜ್ ಓದಿದ ಮಹೇಶ್ ನಾಯ್ಕಗೆ ಬರಸಿಡಿಲು ಬಡಿದಂತಾಗಿದೆ.

ತಕ್ಷಣ ಮಗಳನ್ನು ಸಿದ್ದಾಪುರಕ್ಕೆ ಬರಲು ಹೇಳಿದ. ಬಂದ ಮಗಳನ್ನು ನೇರವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ. ಮಕ್ಕಳ ಕಲ್ಯಾಣ ಇಲಾಖೆ ಮುಂದೆಯೂ ಮಗಳನ್ನ ಹಾಜರುಪಡಿಸಿದರು. ಅಲ್ಲಿ ಹೊರಬಂದಿದ್ದು—ಮಗಳ ಮನಸ್ಸಿನ ನೋವು,
ಭಯ, ಮತ್ತು ಮನೆಯೊಳಗಿನ ಅಸಹ್ಯ ವಾತಾವರಣ.

ಇದರ ನಡುವೆ, ರಾತ್ರಿ ಸುಮಾರು 9.45ರ ಹೊತ್ತಿಗೆ, ಸುಚಿತ್ರಾ ತನ್ನ ತಂದೆ ಮತ್ತು ಇನ್ನಿತರ ನಾಲ್ವರು ಜೊತೆ ಚಾಕು ಹಿಡಿದು ಮನೆಗೆ ನುಗ್ಗಿದ ಘಟನೆ ನಡೆದಿದೆ ಎನ್ನಲಾಗಿದೆ. ಅವರನ್ನು ತಡೆಯಲು ಹೋಗಿದ್ದ ಮಹೇಶ್, ಅವರ ತಮ್ಮ ವಸಂತ್ ನಾಯ್ಕ್
ಮತ್ತು ನೆರೆಮನೆಯ ಕುಮಾರ್ ಮೇಲೆ ಚಾಕು ದಾಳಿ ನಡೆದಿದೆ. ಈ ಗಲಾಟೆಯಲ್ಲಿ ಓರ್ವ ಮೃತಪಟ್ಟಿದ್ದು, ಪ್ರಕರಣ ಗಂಭೀರ ತಿರುವು ಪಡೆದಿದೆ.

ಕಮಲಾಕರ ಭಟ್ ಗುರೂಜಿ ಮತ್ತು ಸುಚಿತ್ರಾ ಒಟ್ಟಿಗೆ ಇರುವ ಫೋಟೋಗಳು ಟಿವಿ ಚಾನೆಲ್‌ಗಳಿಗೆ ಲಭ್ಯವಾಗಿವೆ. “ನನ್ನ ಕುಟುಂಬ” ಎಂದು ಗುರೂಜಿ ಶೇರ್ ಮಾಡಿದ್ದ ಫೋಟೋ, ಇಬ್ಬರ ಅನ್ಯೋನ್ಯತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಸುಚಿತ್ರಾಳ
ಹೆಗಲ ಮೇಲೆ ಕೈ ಹಾಕಿ ಕ್ಲಿಕ್ಕಿಸಿಕೊಂಡ ಸೆಲ್ಫಿ—ಮಗಳ ಆರೋಪಗಳಿಗೆ ಮತ್ತಷ್ಟು ಬಲ ನೀಡುವಂತಿದೆ.

ಒಟ್ಟಿನಲ್ಲಿ, ಇದು ಕೇವಲ ಅಕ್ರಮ ಸಂಬಂಧದ ಕಥೆಯಲ್ಲ. ಇದು ನಂಬಿಕೆಯ ಹಿಂದೆ ಅಡಗಿದ ವಾಸ್ತವ. ಮಕ್ಕಳ ಮೌನದ ಕಿರುಚಾಟ ಮತ್ತು ಒಂದು ಮೆಸೇಜ್ ಬದಲಾಯಿಸಿದ ಕುಟುಂಬದ ಭವಿಷ್ಯ ಇದು. ಒಟ್ಟಿನಲ್ಲಿ ಗುರೂಜಿ ಕಾಮುಕ ತೃಷೆ ತೀರಿಸಿಕೊಳ್ಳಲು ಇಷ್ಟೊಂದು ನಾಟಕವಾಡಿದ್ದು, ಬೇರೆಯವರಿಗೆ ಕಷ್ಟ ಪರಿಹರಿಸುವುದಾಗಿ ಹೇಳಿ ಈಗ ತಾನೇ ತೋಡಿದ ಹಳ್ಳಕ್ಕೆ ಬಿದ್ದಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ಸುಚಿತ್ರಾಗೆ ಮದುವೆಯಾಗಿ ಎರುಡು ಮಕ್ಕಳಿದ್ವು.ಗಂಡ ಮಹೇಶ್ ನಾಯ್ಕ್, ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ. ಈಕೆ ಮಾತ್ರ ಜ್ಯೋತಿಷಿ ಕಮಲಾಕರ ಭಟ್ ತೆಕ್ಕೆಯಲ್ಲಿ ನಿತ್ಯ ತೇಲಾಡ್ತಿದ್ದಳು. ನಿತ್ಯ ಪೂಜೆ ನೆಪದಲ್ಲಿ ಸುಚಿತ್ರಾ ಮನೆಗೆ ಬರ್ತಿದ್ದ ಕಮಲಾಕರ್ ಭಟ್ ನಿತ್ಯವೂ ಪೂಜೆಯಲ್ಲಿ ತೊಡಗಿಕೊಳ್ತಿದ್ದ. ಇದರಿಂದ ಸುಚಿತ್ರಾ ಮೊದಲ ಮಗಳಿಗೆ ಇರಿಸು ಮುರಿಸು ಆಗ್ತಿತ್ತು. ಹೀಗಾಗಿ ಹಲವು ಬಾರಿ ತನ್ನ ಅಮ್ಮನ ಜೊತೆ ಜಗಳ ಕೂಡ ಮಾಡಿದ್ದಳು ಎನ್ನಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles