SUDDIKSHANA KANNADA NEWS/ DAVANAGERE/ DATE:11-09-2023
ದಾವಣಗೆರೆ (Davanagere): ರಾಮ ರಾಮ ಎಂದು ನುಡಿಧೀತ್ತಲೆ ಮುತೈದೆಯರಿಗೆ ಮಹಾತಾಯಿ ಉಡಿ ತುಂಬಿಯಾಳಲೆ ನರಲೋಕದ ಜನಕೆ ಆನೆ ಕಿರೀಟ ಇಟ್ಟಿತಲೆ ಮಹಾತಾಯಿ ಬೇರುಸೊಪ್ಪು ಬೇಸಿತ್ತಲೆ ಎಚ್ಚರಲ್ಲೇ.
ಇದು ಐತಿಹಾಸಿಕ ಪ್ರಸಿದ್ಧಿಯಾದ ದಾವಣಗೆರೆ ತಾಲೂಕಿನ ಶ್ರೀ ಕ್ಷೇತ್ರ ಅನೆಕೊಂಡ ಗ್ರಾಮದಲ್ಲಿ ಶ್ರಾವಣಮಾಸದ ಕಡೇ ಸೋಮವಾರದ ಪ್ರಯುಕ್ತ ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನದ ಕಾರ್ಣಿಕ.
ಜಾತ್ರಾ ಮಹೋತ್ಸವಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ನ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು, ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಈ ಸುದ್ದಿಯನ್ನೂ ಓದಿ:
Davanagere:ಪಕ್ಷ ವಿರೋಧಿ ಚಟುವಟಿಕೆ ಸಾಬೀತಾಗಿದ್ದಕ್ಕೆ ಉಚ್ಚಾಟನೆ, ಸಿದ್ದೇಶ್ವರ ವಿರುದ್ಧ ಅಪಪ್ರಚಾರ ನಡೆಸಿದರೆ ಸಹಿಸಲ್ಲ: ಎಸ್. ವಿ. ರಾಮಚಂದ್ರಪ್ಪ ಎಚ್ಚರಿಕೆ
ಶ್ರೀ ಕ್ಷೇತ್ರ ಅನೆಕೊಂಡ ಗ್ರಾಮದಲ್ಲಿ ಶ್ರಾವಣಮಾಸದ ಕಡೇ ಸೋಮವಾರದ ಪ್ರಯುಕ್ತ ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನದ ಕಾರ್ಣಿಕ ಮತ್ತು ಜಾತ್ರಾ ಮಹೋತ್ಸವಕೆ ಭೇಟಿ ನೀಡಿ ಲೋಕಕಲ್ಯಾಣಕ್ಕೆ ಶಾಮನೂರು ಶಿವಶಂಕರಪ್ಪ
ಅವರು, ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಸದಸ್ಯರು, ಗೌಡ್ರು ಅಜ್ಜಪ್ಪ, ಆನೆಕೊಂಡ ನಾಗರಾಜ್, ಕುಮಾರ್,ಮಂಜುನಾಥ್, ಗೌಡ್ರು ಸುರೇಶ್, ಭಕ್ತಾದಿಗಳು ಹಾಜರಿದ್ದರು. ಆನೆಕೊಂಡ ದೇವಸ್ಥಾನದ ಕಾರ್ಣಿಕ ಪ್ರಸಿದ್ಧಿ ಪಡೆದಿದೆ. ರಾಮ ರಾಮ ಎಂದು ನುಡಿಧೀತ್ತಲೆ ಮುತೈದೆಯರಿಗೆ ಮಹಾತಾಯಿ ಉಡಿ ತುಂಬಿಯಾಳಲೆ ನರಲೋಕದ ಜನಕೆ ಆನೆ ಕಿರೀಟ ಇಟ್ಟಿತಲೆ ಮಹಾತಾಯಿ ಬೇರುಸೊಪ್ಪು ಬೇಸಿತ್ತಲೆ ಎಚ್ಚರಲ್ಲೇ ಎಂಬ ಕಾರ್ಣಿಕ ನೀಡಿದ್ದು, ಇದು ಚರ್ಚೆಯಾಗುತ್ತಿದೆ.
ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು. ದೇವರ ದರ್ಶನ ಪಡೆದು ಪುನೀತರಾದ ಭಕ್ತರು, ಕಾರ್ಣಿಕ ಬರುತ್ತಿದ್ದಂತೆ ತಮಗೆ ಅನಿಸಿದ ರೀತಿಯಲ್ಲಿ
ವಿಶ್ಲೇಷಿಸಿದ್ದು ಕಂಡು ಬಂತು.