Home ದಾವಣಗೆರೆ ದಾವಣಗೆರೆಯ ಹಿರಿಯ ರಾಜಕೀಯ ಮುಖಂಡ ಸೋಮಲಾಪುರ ಹನುಮಂತಪ್ಪ ದೈವಾಧೀನ
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ದಾವಣಗೆರೆಯ ಹಿರಿಯ ರಾಜಕೀಯ ಮುಖಂಡ ಸೋಮಲಾಪುರ ಹನುಮಂತಪ್ಪ ದೈವಾಧೀನ

Share
ದಾವಣಗೆರೆ
Share

ದಾವಣಗೆರೆ: ಕೆ.ಟಿ.ಜೆ ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಾದಿಗ ಸಮಾಜದ ಹಿರಿಯ ಮುಖಂಡರಾದ  ಸೋಮಲಾಪುರ ಹನುಮಂತಪ್ಪನವರು ಇಂದು ಮುಂಜಾನೆ ದೈವಾಧೀನರಾಗಿದ್ದಾರೆ.

ಕೆಪಿಸಿಸಿ (KPCC) ಪರಿಶಿಷ್ಟ ಜಾತಿ ವಿಭಾಗದ ದಾವಣಗೆರೆ ಮಾಜಿ ಜಿಲ್ಲಾಧ್ಯಕ್ಷರಾಗಿ ಹಾಗೂ ಪ್ರಸ್ತುತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದ ಅವರು, ಇಂದು (ದಿನಾಂಕ: 18-06-2026) ಮುಂಜಾನೆ 5:20 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಆಪ್ತ ಹಾಗೂ ಕೌಟುಂಬಿಕ ಮೂಲಗಳು ತಿಳಿಸಿವೆ.

ಇಂದು ಸಂಜೆ ಅಂತ್ಯಕ್ರಿಯೆ:

ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ 5:00 ಗಂಟೆಗೆ ದಾವಣಗೆರೆಯ ಗಾಂಧಿನಗರದ ರುದ್ರಭೂಮಿಯಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇವರ ನಿಧನಕ್ಕೆ ಜಿಲ್ಲೆಯ ಹಲವು ರಾಜಕೀಯ ಗಣ್ಯರು ಹಾಗೂ ದಲಿತ ಸಮಾಜದ ಮುಖಂಡರು ತೀವ್ರ ಕಂಬನಿ ಮಿಡಿದಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles