ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ದಾವಣಗೆರೆಯಲ್ಲಿ ಗೃಹ ಜ್ಯೋತಿ ಯೋಜನೆ ಚಾಲನೆ ವೇಳೆ ಗದ್ದಲ, ಗೊಂದಲ, ರಾದ್ಧಾಂತ… ಯಾಕಾಗಿ…? 

On: August 6, 2023 1:06 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:06-08-2023

 

ದಾವಣಗೆರೆ (Davanagere): ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಗದ್ದಲ ಗಲಾಟೆಗೆ ಕಾರಣವಾಯಿತು. ಹರಿಹರ ಬಿಜೆಪಿಯ ಶಾಸಕ ಬಿ. ಪಿ. ಹರೀಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಕೇಳಿ 10 ಕೆ. ಜಿ. ಘೋಷಣೆ ಮಾಡಿದ್ದೀರಾ ಎಂಬ ಮಾತು ಆಡುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರೊಚ್ಚಿಗೆದ್ದರು. ಈ ವೇಳೆ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಗೃಹ ಜ್ಯೋತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಅಧ್ಯಕ್ಷತೆಯಲ್ಲಿ ಚಾಲನೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕ ಬಿ. ಪಿ. ಹರೀಶ್ ಅವರು ಭಾಷಣ ಆರಂಭಿಸಿದರು. ಮಾತಿನ ಮಧ್ಯೆ, ಕಾಂಗ್ರೆಸ್ ಸರ್ಕಾರದ 10 ಕೆ ಜಿ ಅಕ್ಕಿ ಕುರಿತಾಗಿ ಟೀಕೆ ಮಾಡಿದರು. ಆ ಬಳಿಕ ಪ್ರಧಾನಿ ಮೋದಿ ಮಾತು ಕೇಳಿ ಘೋಷಣೆ ಮಾಡಿದ್ದೀರಾ. ಈಗ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹರೀಶ್ ಅವರು ನಾನು ಭಾಷಣ ನಿಲ್ಲಿಸುತ್ತೇನೆ. ನೀವು ಈ ರೀತಿ ವರ್ತನೆ ಮಾಡಿದರೆ ಹೇಗೆ ಎಂದರು. ಆ ಬಳಿಕ ಮಲ್ಲಿಕಾರ್ಜುನ್ ಅವರು ಹರೀಶ್ ಅವರೇ ಮಾತನಾಡಿ ಎಂದರು. ಆ ಬಳಿಕ ನಿಮ್ಮ ಕಾರ್ಯಕ್ರಮಗಳೆಲ್ಲವೂ ಜಾರಿಯಾಗಲಿ. ಜನಸಾಮಾನ್ಯರಿಗೆ ತಲುಪುವಂತಾಗಲಿ ಎಂದು ಹೇಳಿ ಮಾತು ಮುಗಿಸಿದರು.

ಈ ಮಾತು ಕೇಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಎದ್ದು ನಿಂತು ಭಾಷಣ ನಿಲ್ಲಿಸಿದರೆ ಸರಿ. ಇಲ್ಲದಿದ್ರೆ ನಾವೆಲ್ಲರೂ ಹೊರಗೆ ಹೋಗುತ್ತೇವೆ ಎಂಬ ಮಾತು ಆಡಿದರು. ಆಗ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಶಾಸಕರಾದ ಬಸವಂತಪ್ಪ, ದೇವೇಂದ್ರಪ್ಪ ಸೇರಿದಂತೆ ವೇದಿಕೆಯಲ್ಲಿದ್ದವರು ಸಿಟ್ಟುಗೊಂಡವರನ್ನು ಸಮಾಧಾನಪಡಿಸಲು ಯತ್ನಿಸಿದರೂ ಕೇಳಲಿಲ್ಲ.

15 ನಿಮಿಷಗಳ ಕಾಲ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಸಮ್ಮುಖದಲ್ಲಿ ಮಾತಿನ ವಾಗ್ವಾದ ನಡೆಯಿತು. ಗೃಹ ಜ್ಯೋತಿ ಯೋಜನೆ ಬಗ್ಗೆ ಮಾತನಾಡುತ್ತಾ ಕಾಂಗ್ರೆಸ್ ವಿರೋಧಿಸಿ ಮಾತನಾಡಿದ ಬಿ. ಪಿ ಹರೀಶ್ ಅವರ ವಿರುದ್ಧ ಧಿಕ್ಕಾರ, ಘೋಷಣೆಗಳನ್ನೂ ಕೂಗಲಾಯಿತು. ಬೆಸ್ಕಾಂ ಎಂ ಡಿ ಮಹಾಂತೇಶ್ ಬೀಳಗಿ ಸರ್ಕಾರದ ಬಗ್ಗೆ ಮಾತನಾಡುವ ಬದಲು ಪಕ್ಷದ ಪರವಾಗಿ ಮಾತನಾಡಿದ್ದಾರೆ. ನನ್ನ ವಿರೋಧಿಸಿದವರು ನಿಮ್ಮ ಪರವಾಗಿ ವಿರೋಧ ಪಕ್ಷದವನಾಗಿ ಮಾತನಾಡಿದ್ದೆೇನೆ ಎಂದೂ ಸಹ ಹೇಳಿದರು. ಮಲ್ಲಿಕಾರ್ಜುನ್ ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment