SUDDIKSHANA KANNADA NEWS/ DAVANAGERE/ DATE:10-10-2023
ದಾವಣಗೆರೆ (Davanagere): ಪ್ರಸಕ್ತ ಸಾಲಿನಲ್ಲಿ ಗ್ರಾಮಾಂತರ ಕೈಗಾರಿಕಾ ವಿಭಾಗ ಕಚೇರಿಯ ಜಿಲ್ಲಾ ಉದ್ಯಮ ಕೇಂದ್ರ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ದಿ ಇಲಾಖೆಯ ಅನುಮೋದಿತ ತರಬೇತಿ ಸಂಸ್ಥೆಗಳ ಮೂಲಕ ನಿಗಧಿತ ಅವಧಿಗೆ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.
Read Also This Story:
ದೇಶದಲ್ಲಿ ಎಷ್ಟು ಲಕ್ಷ ಹೆಕ್ಟೇರ್ ನಲ್ಲಿ ಅಡಿಕೆ (Areca nut) ಬೆಳೆಯಲಾಗುತ್ತೆ…? ಧಾರಣೆ ಕುಸಿಯುತ್ತಿರುವ ಈ ಹೊತ್ತಲ್ಲಿ ಅಡಿಕೆ ಸಿಪ್ಪೆ, ಹಾಳೆ ಬಳಸಿ ಕೈ ತುಂಬಾ ಹಣ ಮಾಡಬಹುದು… ಹೇಗೆ ಅಂತೀರಾ…?
ತರಬೇತಿ ವಿವರ: ಆರ್ಕ್ ಮತ್ತು ಗ್ಯಾಸ್ ವೆಲ್ಡಿಂಗ್, ಮೋಟಾರ್ ರೀವೈಡಿಂಗ್, ಬ್ಯೂಟಿ ಥೆರಫಿಸ್ಟ್, ಫೀಲ್ಡ್ ಟೆಕ್ನೀಷಿಯನ್ ಅಂಡ್ ಕಂಪ್ಯೂಟಿಂಗ್ ಪೆರಿಫೆರಲ್ಸ್, ಡೊಮೆಸ್ಟಿಕ್ ಎಲೆಕ್ಟ್ರಿಷಿಯನ್ ಮತ್ತು ಹೌಸ್ ವೈರಿಂಗ್, ಟಿ.ವಿ ರಿಪೇರಿ.
ಆಸಕ್ತ ನಿರುದ್ಯೋಗಿಗಳು ತಮ್ಮ ಗ್ರಾಮ ಪಂಚಾಯಿತಿ ಅಥವಾ ಉಪನಿರ್ದೇಶಕರ ಕಚೇರಿ(ಖಾಗ್ರಾ), ಗ್ರಾಮೀಣ ಕೈಗಾರಿಕಾ ವಿಭಾಗ, ಪ್ಲಾಟ್ ನಂ76(ಪಿ1), ಕರೂರು ಕೈಗಾರಿಕಾ ಪ್ರದೇಶ, ಪಿ.ಬಿ.ರಸ್ತೆ, ದಾವಣಗೆರೆ ಕಚೇರಿಯಿಂದ ಅರ್ಜಿಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಅ.21 ರೊಳಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9448929717 ನ್ನು ಸಂಪರ್ಕಿಸಲು ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪನಿರ್ದೇಶಕರಾದ ಸುರೇಶ್.ಹೆಚ್ ತಿಳಿಸಿದ್ದಾರೆ.
ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಬಾವಿ ಸಭೆ:
ಪ್ರಸಕ್ತ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯನ್ನು ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅ.12 ರಂದು ಮಧ್ಯಾಹ್ನ 3 ಗಂಟೆಗೆ ಅಪರ ಜಿಲ್ಲಾಧಿಕಾರಿಗಳ ಸಭಾಂಗಣ. ಮೊದಲನೆ ಮಹಡಿ, ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬೇಬಿ ಸುನೀತಾ ತಿಳಿಸಿದ್ದಾರೆ.