ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ದಾವಣಗೆರೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಿವರು

On: September 2, 2023 12:49 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:02-09-2023

ದಾವಣಗೆರೆ (Davanagere): ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ನೀಡಲಾಗುವ 2023-24ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ಆಯ್ಕೆಯಾದ ಶಿಕ್ಷಕರಿಗೆ ಸೆ.5 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರಿಗೆ ಸನ್ಮಾನ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. 

ಈ ಸುದ್ದಿಯನ್ನೂ ಓದಿ: 

Explosive Detection Expertise: ಬೆರಗಾಗುವಂಥ ಟ್ರ್ಯಾಕ್ ರೆಕಾರ್ಡ್: ಸ್ಫೋಟಕ ಪತ್ತೆ, ವಿಧ್ವಂಸಕ ಕೃತ್ಯ ತಡೆ, ಪ್ರಧಾನಿ ಭೇಟಿ ಸ್ಥಳ ತಪಾಸಣೆ ನಿಪುಣೆ ಸೌಮ್ಯ ಈಗ ನೆನಪಷ್ಟೇ……!

ಪ್ರಾಥಮಿಕ ಶಾಲಾ ವಿಭಾಗದ ಪ್ರಶಸ್ತಿ ವಿಜೇತ ಶಿಕ್ಷಕರು:

ಚನ್ನಗಿರಿ ತಾಲ್ಲೂಕಿನ ಸತೀಶ್, ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತಿಮ್ಲಾಪುರ, ರತ್ನಮ್ಮ ಸಹ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಟ್ಟಕಡೂರು, ಹರಿಹರ ತಾಲ್ಲೂಕಿನ ಅರುಣ್ ಬಿ, ಸಹ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಕಿರಿಯ ಪ್ರಾಥಮಿಕ ಶಾಲೆ ಹಿಂಡಸಘಟ್ಟ, ಕೆ.ವಿ ಸುಜಾತ ಮುಖ್ಯ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬುಳ್ಳಾಪುರ, ದಾವಣಗೆರೆ (Davanagere) ಉತ್ತರ ವಲಯದ ತಿಪ್ಪೇಶ್ ಟಿ.ಬಿ ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಿ.ಚಿತ್ತಾನಹಳ್ಳಿ, ಗಂಗಮ್ಮ ಸಹ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲೇಬೇತೂರು, ದಾವಣಗೆರೆ (Davanagere) ದಕ್ಷಿಣ ವಲಯದ ಬಸವರಾಜ ಈ. ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕತೊಗಲೇರಿ, ನಾಗವೇಣಿ ಎ.ಎಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶ್ರೀರಾಮಬಡಾವಣೆ, ಜಗಳೂರು ತಾಲ್ಲೂಕಿನ ಪ್ರೇಮ ಡಿ ಸಹ ಶಿಕ್ಷಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಿಕ್ಕಮ್ಮನಹಟ್ಟಿ, ಶ್ರೀದೇವಿ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭರಮಸಮುದ್ರ, ಹೊನ್ನಾಳಿ ತಾಲ್ಲೂಕಿನ ಮಹಮ್ಮದ್ ರಫೀ ಬಿ. ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಮ್ಮೇನಹಳ್ಳಿ, ಸುಧಾ ಹೆಚ್.ಹೆಚ್ ಸಹ ಶಿಕ್ಷಕಿ ಸರ್ಕಾರಿ
ಹಿರಿಯ ಪ್ರಾಥಮಿಕ ಶಾಲೆ ಸೊರಟೂರು.

ಪ್ರೌಢಶಾಲಾ ವಿಭಾಗದ ಪ್ರಶಸ್ತಿ ವಿಜೇತ ಶಿಕ್ಷಕರು:

ಚನ್ನಗಿರಿ ತಾಲ್ಲೂಕಿನ ಹೆಚ್.ಪಿ ಶಿವಲಿಂಗಪ್ಪ, ದೈಹಿಕ ಶಿಕ್ಷಕರು, ಸರ್ಕಾರಿ ಬಾಲಿಕಾ ಪ್ರೌಢಶಾಲೆ, ನಲ್ಲೂರು, ಹರಿಹರ ತಾಲ್ಲೂಕಿನ ಮಂಜುನಾಥ ಟಿ.ಡಿ, ಸಹ ಶಿಕ್ಷಕರು, ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರೌಢಶಾಲೆ ಶಾಲೆ, ಹರಳಹಳ್ಳಿ, ದಾವಣಗೆರೆ ಉತ್ತರವಲಯದ ನಾಗರಾಜ ಟಿ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಆವರಗೆರೆ, ದಾವಣಗೆರೆ (Davanagere) ದಕ್ಷಿಣ ವಲಯದ ಶ್ರೀಕಾಂತ ಕೆ ಸರ್ಕಾರಿ ಪ್ರೌಢಶಾಲೆ, ಹೆಚ್ ಬಸವಾಪುರ, ಜಗಳೂರು ತಾಲ್ಲೂಕಿನ ಸಿದ್ದಪ್ಪ ಹೆಚ್.ಎಸ್, ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ದೇವಿಕೆರೆ, ಹೊನ್ನಾಳಿ ತಾಲ್ಲೂಕಿನ ಮಹೇಂದ್ರನಾಥ್ ಕೆ.ಜಿ, ಸಹ ಶಿಕ್ಷಕರು ಮಾರಿಕಾಂಭ ಪ್ರೌಢಶಾಲೆ, ಉಜ್ಜನೀಪುರ.

ವಿಶೇಷ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು:

ದಾವಣಗೆರೆ (Davanagere) ಉತ್ತರ ವಲಯದ ಆರ್ ಅನ್ನಪೂರ್ಣ, ಸರ್ಕಾರಿ ಹಿರಿಯ ಪ್ರೌಢಶಾಲೆ ಎಲೇಬೇತೂರು, ಹಾಲಪ್ಪ ಡಿ, ಸಹ ಶಿಕ್ಷಕ ಸಿ.ವಿ.ವಿ ಕನ್ನಡ ಹಿರಿಯ ಪ್ರೌಢಶಾಲೆ ಶಾಲೆ, ಕೆ.ಪಿ ರಸ್ತೆ, ದಾವಣಗೆರೆ(Davanagere), ಹೊನ್ನಾಳಿ ತಾಲ್ಲೂಕಿನ ಕುಮಾರನಾಯ್ಕ್ ಎಸ್, ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಮ್ಮಾರಗಟ್ಟೆ, ನ್ಯಾಮತಿ ತಾಲ್ಲೂಕಿನ ವಿಜಯಲಕ್ಷ್ಮಿ ಬಿ, ಸಹ ಶಿಕ್ಷಕಿ ಸರ್ಕಾರಿ ಕಿರಿಯ ಪ್ರೌಢಶಾಲೆ ಸುರಹೊನ್ನೆ, ರವಿಕುಮಾರ ಹೆಚ್, ಮುಖ್ಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟಿ ಗೋಪಗೊಂಡನಹಳ್ಳಿ, ಬಸವರಾಜ ಕೆ.ವಿ, ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಜೀನಹಳ್ಳಿ.

ಆಯ್ಕೆಯಾದ ಶಿಕ್ಷಕರಿಗೆ ಸೆ.5 ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಲಾಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ಕೊಟ್ರೇಶ್ ತಿಳಿಸಿದ್ದಾರೆ

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment