ದಾವಣಗೆರೆ: ಗಣೇಶಮೂರ್ತಿ ವಿಸರ್ಜನೆ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆ ಮತ್ತು ವಿಸರ್ಜನೆ ವೇಳೆ ಪೊಲೀಸ್ ಇಲಾಖೆ ನಮಗೆ ರಕ್ಷಣೆ ನೀಡಲು ಹಗಲಿರಲು ಶ್ರಮಿಸುತ್ತಾರೆ. ಈ ಬಾರಿ ಹಬ್ಬಗಳ ಆಚರಣೆ, ವಿಸರ್ಜನೆಗೆ ಡಿಜೆಗಳಿಗೆ ಅನುಮತಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
READ ALSO THIS STORY: ಬಾಪೂಜಿ ಸಂಸ್ಥೆ ಕಟ್ಟಿದ ಎಸ್ಕೆ ಕೊಟ್ರಬಸಪ್ಪರ ಪ್ರತಿಮೆ ನಿಮ್ಮ ಮನೆ ಮುಂದೆ ಪ್ರತಿಷ್ಠಾಪಿಸಿ: ಎಸ್ಎಸ್ಎಂಗೆ ಯಶವಂತರಾವ್ ಜಾಧವ್ ಸವಾಲ್!
ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಆಯೋಜಿಸಲಾದ ನಾಗರಿಕ ಸೌಹಾರ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಜೆಯಿಂದ ಶಬ್ದ ಮಾಲಿನ್ಯ ಉಂಟಾಗುವುದಲ್ಲದೇ ಹಲವು ಘರ್ಷಣೆಗಳಿಗೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ಸಾರ್ವಜನಿಕರು ನಮ್ಮ ದೇಶದ ಕಲೆ, ಸಂಸ್ಕೃತಿ ಸಾಂಸ್ಕೃತಿಕತೆಗೆ ಹೆಸರಾದ ಸ್ಥಳೀಯ ಜಾನಪದ ಪ್ರಕಾರಗಳು, ಡೋಲು, ಮುಂತಾದವುಗಳನ್ನು ಮೆರವಣಿಗೆಗೆ ಬಳಸಿಕೊಂಡಲ್ಲಿ ಕಲಾವಿದರ ಹೊಟ್ಟೆಯು ತುಂಬಲಿದೆ. ನಮ್ಮ ಕಲೆ, ಸಂಸ್ಕೃತಿ ಉಳಿಸಬೇಕಾದರೆ, ಅವುಗಳನ್ನು ಪ್ರೋತ್ಸಾಹಿಸಿ ಪೋಷಿಸಬೇಕು ಎಂದು ಹೇಳಿದರು.
ಡಿಜೆಗಳಿಗೆ ಪರ್ಯಾಯವಾಗಿ ಡೋಲು, ತಮಟೆ, ಜಾನಪದ ನೃತ್ಯ, ಸಾಂಸ್ಕೃತಿಕ ರಸದೌತಣ ನೀಡುವುದರೊಂದಿಗೆ ಸನಾತನ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕು ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಯಾರಿಗೆ ಆಗಲೀ ಅಥವಾ ಅನ್ಯ ಜಾತಿ, ಕೋಮುಗಳ ಶಾಂತಿ ಕದಡುವಂಥವರನ್ನು ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ವೀಡಿಯೋ, ಆಡಿಯೋಗಳನ್ನು ಹಂಚಿಕೊಳ್ಳುವಂತಿಲ್ಲ. ಲ್ಲೆಯಲ್ಲಿ ಈಗಾಗಲೇ ಅಂತಹವರನ್ನು ಗುರುತಿಸಿ 28 ಮಂದಿ ಗಡೀಪಾರು ಮಾಡಲಾಗಿದೆ. ಇಂತಹವರ ಬಗ್ಗೆ ಮಾಹಿತಿ ಇದ್ದಲ್ಲಿ ಹಾಗೂ ಮದ್ಯ, ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಕುರಿತು ಮಾಹಿತಿ ಇದ್ದಲ್ಲಿ ಮಾಹಿತಿ ನೀಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಲೆ, ಸಾಂಸ್ಕೃಕತೆಗೆ ಹೆಸರುವಾಸಿಯಾದ ದೇಶದಲ್ಲಿ ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಉಳಿವಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಈ ದೇಶದಲ್ಲಿ ಹಬ್ಬಗಳು ಸಂಭ್ರಮ ಸಡಗರದಿಂದ ಆಚರಣೆ ಮಾಡಬೇಕು. ಆದರೆ ಆ ಸಡಗರ ನಮಗೆ ಶೋಕಾಚರಣೆಯಾಗಬಾರದು. ಆದ್ದರಿಂದ ಹಿಂದೂ ಹಾಗೂ ಮುಸ್ಲೀಂ ಸಮುದಾಯದ ಜನತೆ ಯಾವುದೇ ರೀತಿಯ ಕೋಮು ಗಲಭೆ, ಶಾಂತಿ ಕದಡುವ ಕೆಲಸ ಮಾಡದಂತೆ ವ್ಯವಸ್ಥಿತವಾಗಿ ಆಚರಣೆ ಮಾಡಬೇಕು ಎಂದರು.
ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಸಿ:
ಪರಿಸರ ಮಾಲಿನ್ಯ ತಡೆಗಟ್ಟಲು ಜಿಲ್ಲಾಡಳಿತ ವತಿಯಿಂದ ಹಲವಾರು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ನಮ್ಮ ಜೀವ ಜಲವಾದ ತುಂಗಾಭದ್ರಾ ನದಿ ಮೂಲವನ್ನು ಉಳಿಸಬೇಕು. ಪರಿಸರ ಸ್ನೇಹಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿ
ಪರಿಸರ ಉಳಿವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಾರ್ವಜನಿಕರು ಹಬ್ಬದ ಪ್ರಯುಕ್ತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸಲು ಸಂಬಂಧಪಟ್ಟ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಮಾರ್ಗಗಳನ್ನು ಬದಲಾವಣೆ ಮಾಡದೆ ಜಿಲ್ಲಾಡಳಿತ ಸೂಚನೆಯಂತೆ ಪಾಲನೆ ಮಾಡಬೇಕು. ಮದ್ಯಪಾನ ಮಾಡಿ ಮೆರವಣಿಗೆಯಲ್ಲಿ ಭಾಗವಹಿಸುವುದರಿಂದ ನಮ್ಮ ಸಂಸ್ಕೃತಿಯನ್ನು ಹಾಳುಮಾಡಿದಂತಾಗುತ್ತದೆ. ಗಣೇಶಮೂರ್ತಿ ಪ್ರತಿಷ್ಟಾಪನೆ, ವಿಸರ್ಜನೆ ವೇಳೆ ವಿದ್ಯುತ್ ಅವಘಡಗಳು ಸಂಭವಿಸದಂತೆ ಅತ್ಯಂತ ಜಾಗೃತೆ ವಹಿಸಬೇಕು ಎಂದರು.