ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದುರ್ಗಾಂಬಿಕಾ ದೇಗುಲದಿಂದ ನಾಡಹಬ್ಬ ದಸರಾ: ಸಚಿವರ ಸಭೆಯಲ್ಲಿ ಚರ್ಚಿತ ಪ್ರಮುಖ ವಿಚಾರಗಳು ಏನು?

On: August 30, 2025 10:12 PM
Follow Us:
ದಸರಾ
---Advertisement---

SUDDIKSHANA KANNADA NEWS/ DAVANAGERE/DATE:30_08_2025

ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸಿರುವ 2025ನೇ ಸಾಲಿನ ದಸರಾ ಮಹೋತ್ಸವ ಆಚರಣೆ ಅಂಗವಾಗಿ ಶ್ರೀ ದುರ್ಗಾಂಭಿಕಾ ದೇವಿ ಪ್ರಸಾದ ನಿಲಯದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

READ ALSO THIS STORY: 16 ಬ್ಯಾಂಕ್ ಅಕೌಂಟ್ ಪತ್ತೆ, ಕರ್ನಾಟಕ ಸೇರಿ 10 ಕಡೆಗಳಲ್ಲಿ ವಂಚನೆ: ಸ್ಫೋಟಕ ಮಾಹಿತಿ ನೀಡಿದ “ಡಿಜಿಟಲ್ ಅರೆಸ್ಟ್” ಕೇಸ್ ನ 2ನೇ ಆರೋಪಿ!

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಸಚಿವರು ಮಾತನಾಡಿದರು. ನಾಡ ಹಬ್ಬವಾದ ದಸರಾವನ್ನು ಸಡಗರ ಹಾಗೂ ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸುವಂತೆ ಸೂಕ್ತ ಮಾಹಿತಿಯನ್ನು ನೀಡಿದರು.

ದಸರಾ ಹಬ್ಬವೆಂದರೆ ಕೇವಲ ಬರಿ ಹಬ್ಬವಲ್ಲ. ನಮ್ಮ ನಾಡ ಸಂಸ್ಕೃತಿ ಹಾಗೂ ಹೆಮ್ಮೆಯ ಗರಿ, ಐತಿಹಾಸಿಕ ಪರಂಪರೆಯುಳ್ಳ ಹಬ್ಬವನ್ನು ನಮ್ಮ ಜಿಲ್ಲೆಯಲ್ಲಿಯು ನಗರದೇವತೆಯ ಆಶಿರ್ವಾದದಿಂದ ಅಚ್ಚುಕಟ್ಟಾಗಿ
ನೆರವೇರಿಸೋಣವೆಂದು ಸಚಿವರು ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಅಥಣಿ ವೀರಣ್ಣ, ಹನುಮಂತಪ್ಪ, ಟ್ರಸ್ಟ್ ನ ಎಲ್ಲಾ ಧರ್ಮದರ್ಶಿಗಳು, ಗೌಡರು, ಶಾನುಭೋಗರು, ರೈತರು, ಬಾರೀಕರು, ಬಣಕಾರರು, ಕುಂಬಾರರು, ತಳವಾರರು, ಬಾಬುದಾರರು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.

ದೇವಸ್ಥಾನ ಸಮಿತಿಗೆ ಸಂಸದರಿಂದ ಸಲಹೆ

ನಾಡ ಹಬ್ಬ ದಸರಾವನ್ನು ಸಂಭ್ರಮದಿಂದ ಜಿಲ್ಲೆಯಲ್ಲಿ ಆಚರಣೆ ಮಾಡಲು ಸಕಲ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ದೇವಸ್ಥಾನ ಸಮಿತಿಯವರಿಗೆ ಸೂಕ್ತ ನಿದರ್ಶನಗಳನ್ನು ನೀಡಿದರು. ಗೃಹ ಕಚೇರಿಯಲ್ಲಿ ಸಮಿತಿಯವರೊಂದಿಗೆ ಸಭೆ ನಡೆಸಿದ ಸಂಸದರು ನಾಡ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅಗತ್ಯ ಸಲಹೆಗಳನ್ನು ನೀಡಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment