SUDDIKSHANA KANNADA NEWS/ DAVANAGERE/ DATE:24-06-2023
ದಾವಣಗೆರೆ (Davanagere): ಜಗಳೂರು ತಾಲೂಕಿನ ಗೌರಮ್ಮನಹಳ್ಳಿ ಗ್ರಾಮದಲ್ಲಿ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದೊಂದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಆರೋಪ ಕೇಳಿ ಬಂದಿದೆ.
ಗೌರಮ್ಮನಹಳ್ಳಿಯ 30 ವರ್ಷದ ಶಾಂತಮ್ಮ ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿತ್ತು. ಆದ್ರೆ, ಸೋಮಶೇಖರ್ ಎಂಬಾತ ಶಾಂತಮ್ಮಳ ಪತಿಯಾಗಿದ್ದು, ಪ್ರತಿನಿತ್ಯವೂ ವಿಪರೀತ ಮದ್ಯ ಸೇವನೆ ಮಾಡಿ ಮನೆಗೆ ಬಂದು ದೈಹಿಕ ಹಿಂಸೆ ನೀಡುತ್ತಿದ್ದ. ಮಾತ್ರವಲ್ಲ, ಅವಾಚ್ಯ ಶಬ್ಧಗಳಿಂದ ಬೈಯ್ಯುತ್ತಿದ್ದ. ಇದರಿಂದಾಗಿ ಶಾಂತಮ್ಮ ಮನನೊಂದಿದ್ದರು. ಪತಿಯ ಹಿಂಸೆ ತಾಳಲಾರದೇ ನಿತ್ಯವೂ ದುಃಖದಲ್ಲಿ ಜೀವನ ನಡೆಸುವಂತಾಗಿತ್ತು.
ಈ ಸುದ್ದಿಯನ್ನೂ ಓದಿ:
BESCOM: ವಿದ್ಯುತ್ ನಿಲುಗಡೆ ಮಾಡಿದ್ದ ಬೆಸ್ಕಾಂಗೆ ಗ್ರಾಹಕರ ಪರಿಹಾರ ಆಯೋಗವು ವಿಧಿಸಿದ ದಂಡವೆಷ್ಟು..?
ಇದರಿಂದ ತೀವ್ರವಾಗಿ ಮನನೊಂದಿದ್ದ ಶಾಂತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಯಹತ್ಯೆಗೆ ಪ್ರಯತ್ನಿಸಿದ್ದು, ಈ ವೇಳೆ ಆಕೆಯನ್ನು ಕೆಳಗೆ ಇಳಿಸಿ ಚಿಕಿತ್ಸೆಗೆ ದಾವಣಗೆರೆಗೆ ಆಸ್ಪತ್ರೆಗೆ ಕರೆದುಕೊಂಡು ಬರುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದರು. ಮೃತಳ ತಂದೆ ದೊಡ್ಡಬಾತಿ ಗ್ರಾಮದ ರಾಮಪ್ಪ ಎಂಬುವವರು ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಮೃತಳ ಪುತ್ರ ಪೊಲೀಸರ ಮುಂದೆ ಸತ್ಯ ಹೇಳಿದ್ದಾನೆ.
ತಂದೆ ನಿತ್ಯವೂ ಕುಡಿದು ಬಂದು ಅಮ್ಮನ ಜೊತೆ ಜಗಳವಾಡ್ತಿದ್ದರು. ರಾಡ್ ನಿಂದ ತಲೆಗೆ ಹೊಡೆದು ತಾಯಿಯನ್ನು ತಂದೆಯೇ ಕೊಂದು ಹಾಕಿದ್ದಾರೆ ಎಂದು ಆತನ ಪುತ್ರ ಲಿಖಿತ್ ಜಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮೃತಳ ಪೋಷಕರೂ ಸಹ ಸೂಕ್ತ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಸೋಮಶೇಖರ್ ನ ವಿಚಾರಣೆ ನಡೆಸಿದ್ದಾರೆ.
ಗೃಹಿಣಿ ಆತ್ಮಹತ್ಯೆ:
ಬೇರೊಂದು ಮಹಿಳೆಯೊಂದಿಗೆ ಪತಿ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಬೇಸತ್ತು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ (Davanagere) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆಶಾ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಯ ಪತಿ ನಾಗರಾಜ್ ಎಂಬಾತ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದೇ ವಿಚಾರಕ್ಕೆ ನಾಗರಾಜ್ ಹಾಗೂ ಆಶಾಳ ನಡುವೆ ಜಗಳ ಕೂಡ ನಡೆದಿತ್ತು. ಇಬ್ಬರಿಗೂ ಬುದ್ದಿವಾದ ಹೇಳಿದ್ದರೂ ಕೇಳಿರಲಿಲ್ಲ. ನಾಗರಾಜ್ ಮಹಿಳೆಯೊಂದಿಗಿನ ಸಂಬಂಧ ಮುಂದುವರಿಸಿದ್ದ. ಎರಡೂ ಕುಟುಂಬದವರು ಸಂಸಾರ ಸರಿಪಡಿಸಲು ಮಾಡಿದ ಪ್ರಯತ್ನವೂ ವಿಫಲವಾಗಿತ್ತು. ಆದ್ರೆ, ನಾಗರಾಜ್ ನ ವರ್ತನೆಯಿಂದ ಆಶಾ ಸಾವಿಗೆ ಶರಣಾಗಿದ್ದಾಳೆ ಎಂದು ಆಕೆಯ ತಂದೆ ಬಸವರಾಜಪ್ಪ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಹಿಳೆ ಮೇಲೆ ಹಲ್ಲೆ:
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಘಟನೆಯಲ್ಲಿ ಮಹಿಳೆ ಮತ್ತು ಆಕೆಯ ಮಕ್ಕಳ ಮೇಲೆ ಹಲ್ಲೆ ನಡೆದ ಘಟನೆ ದಾವಣಗೆರೆ (Davanagere) ಜಿಲ್ಲೆ ನ್ಯಾಮತಿ ತಾಲೂಕಿನ ಜೀನಹಳ್ಳಿ ಗ್ರಾಮದಲ್ಲಿ
ನಡೆದಿದೆ.
ಕಾಮಮ್ಮ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ನನ್ನ ಗಂಡನ ಪಾಲಿಗೆ ಸೇರಿದ್ದ ಜಮೀನನ್ನು 1986ರಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ಆದ್ರೆ, ಮೈದುನ ಮರಿಕನ್ನಪ್ಪ ಜೆಸಿಬಿ ತಂದು ಇದು ನನಗೆ ಸೇರಬೇಕಾದ ಜಮೀನು
ಎಂದು ತಗಾದೆ ತೆಗೆದಿದ್ದಾನೆ. ಈ ವೇಳೆ ಕಾಮಮ್ಮ ಮತ್ತು ಮೈದುನ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ನನಗೆ ಮತ್ತು ನನ್ನ ಮಕ್ಕಳ ಮೇಲೆ ಅದೇ ಗ್ರಾಮದ ಮರಿಕನ್ನಪ್ಪ, ದೊಡ್ಡಪ್ಪ ಮಾಸ್ಟರ್, ನಾಗರತ್ನಮ್ಮ, ತೀರ್ಥಲಿಂಗಪ್ಪ ಅವರು ಹಲ್ಲೆ ಮಾಡಿದ್ದಾರೆ ಎಂದು ನ್ಯಾಮತಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಕಾಮಮ್ಮ ತಿಳಿಸಿದ್ದಾರೆ.
Comments 1