ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ದಾವಣಗೆರೆ ಮಹಾನಗರ ಪಾಲಿಕೆಯ ಮೂರು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಅವಿರೋಧ ಆಯ್ಕೆ: ಮತ್ತೊಂದು ಸಮಿತಿ ಅಧ್ಯಕ್ಷರ ಆಯ್ಕೆ ಘೋಷಿಸಲಿಲ್ಲ ಯಾಕೆ..?

On: August 28, 2023 2:53 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:28-08-2023

ದಾವಣಗೆರೆ (Davanagere): ದಾವಣಗೆರೆ (Davanagere) ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. ಪಕ್ಷೇತರ ಇಬ್ಬರು ಸದಸ್ಯರು ಇತ್ತೀಚೆಗಷ್ಟೇ ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರಿ ಬೆಂಬಲ ಘೋಷಿಸಿದ್ದರು. ಮಹಾನಗರ ಪಾಲಿಕೆ ಮೇಯರ್ ಆಗಿದ್ದ ಜಯಮ್ಮ ಗೋಪಿನಾಯ್ಕ, ಉಪಮೇಯರ್ ಆಗಿದ್ದವರು ಕಾಂಗ್ರೆಸ್ ಸೇರಿದ ಕಾರಣಕ್ಕೆ ಬಿಜೆಪಿಗಿಂತ ಕಾಂಗ್ರೆಸ್ ಸದಸ್ಯರ ಬಲ ಹೆಚ್ಚಾಗಿತ್ತು. ಮೇಲಾಗಿ ಸ್ಥಾಯಿ ಸಮಿತಿಗಳ ಆಯ್ಕೆಗೆ ಕರೆಯಲಾಗಿದ್ದ ಸಭೆಯಲ್ಲಿ ಬಿಜೆಪಿ ಚುನಾವಣೆಗೆ ಉತ್ಸಾಹ ತೋರಿರಲಿಲ್ಲ. ಆಗಲೇ ಕಾಂಗ್ರೆಸ್ ನ ನಾಲ್ಕು ಸ್ಥಾನಗಳು ಪಾಲಾಗುವುದು ಬಹುತೇಕ ಖಚಿತವಾಗಿತ್ತು.

ಈ ಸುದ್ದಿಯನ್ನೂ ಓದಿ: 

G. M. Siddeshwara: ಅವ್ರೇನೋ ಹೇಳ್ತಾರೆ, ನಾನೇನೋ ಹೇಳ್ತೀನಿ.. ನೀವೇನೋ ಸುದ್ದಿ ಮಾಡ್ತೀರಾ… ತಿಕ್ಕಾಟ ಬೇಡ್ವೇ ಬೇಡ: ಸಂಸದ ಜಿ. ಎಂ. ಸಿದ್ದೇಶ್ವರ

ಅಂದುಕೊಂಡಂತೆ ಮಹಾನಗರ ಪಾಲಿಕೆಯ ನಾಲ್ಕು ಸಮಿತಿಗಳು ಕೈ ವಶವಾಗಿವೆ. ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆ ಘೋಷಿಸಲಾಯಿತು. ಒಂದು ಸಮಿತಿಗೆ ಮಾತ್ರ ಘೋಷಣೆ ಮಾಡಲಿಲ್ಲ. ಮೂರು ಸಮಿತಿಗಳ ಅಧ್ಯಕ್ಷರ ಹೆಸರನ್ನು ಮಹಾನಗರ ಪಾಲಿಕೆಯ ಮೇಯರ್ ವಿನಾಯಕ್ ಪೈಲ್ವಾನ್ ಘೋಷಿಸಿದರು.

ಅಬ್ದುಲ್ ಲತೀಫ್ ಗೆ ಲಕ್:

ನಗರ ಯೋಜನೆ ಮತ್ತು ಅಭಿವೃದ್ಧಿಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 26 ನೇ ವಾರ್ಡ್ ನ ಪಾಲಿಕೆ ಸದಸ್ಯರು ಹಾಗೂ ಪಾಲಿಕೆಯ ಮಾಜಿ ಉಪಮೇಯರ್ ಅಬ್ದುಲ್ ಲತೀಫ್ ಅವಿರೋಧ ಆಯ್ಕೆಯಾದರು.

ಉದಯ್ ಕುಮಾರ್ ಮತ್ತೆ ಪಟ್ಟ:

ತೆರಿಗೆ ನಿರ್ಧರಣೆ ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರ ಸ್ಥಾನಕ್ಕೆ ವಾರ್ಡ್ ನಂಬರ್ 45 ರ ಹೆಚ್. ಉದಯಕುಮಾರ್ ಸ್ಪರ್ಧಿಸಿದ್ದು, ಚುನಾವಣೆ ನಡೆಯದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು.

ಮೀನಾಕ್ಷಿ ಜಗದೀಶ್ ಮಿಂಚು:

ವಾರ್ಡ್ ನಂಬರ್ 20ರ ಮಹಾನಗರ ಪಾಲಿಕೆ ಸದಸ್ಯೆ ಮೀನಾಕ್ಷಿ ಜಗದೀಶ್ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ. ಸಾರ್ಜಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗಿದ್ದಾರೆ.

ನಾಲ್ಕನೇಯ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಯೂ ನಡೆಯುವ ಸಾಧ್ಯತೆ ಇತ್ತು. ಆದ್ರೆ, ಅಧ್ಯಕ್ಷರಾಗಿದ್ದ ಪಾಲಿಕೆ ಸದಸ್ಯರ ಸಂಬಂಧಿಕರೊಬ್ಬರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಮುಂದೂಡಲಾಯಿತು
ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷರ ಆಯ್ಕೆ ವೇಳೆ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಸುಧಾ ಇಟ್ಟುಗುಡಿ ಮಂಜುನಾಥ್, ಪಾಮೇನಹಳ್ಳಿ ನಾಗರಾಜ್, ಎ. ನಾಗರಾಜ್ ಮತ್ತಿತರರು ಹಾಜರಿದ್ದರು. ನೂತನ ಅಧ್ಯಕ್ಷರಿಗೆ ಶುಭ ಕೋರಿದರು. ಬಿಜೆಪಿ ಸದಸ್ಯರು ಸಭೆಯಲ್ಲಿ ಹಾಜರಿದ್ದರೂ, ಬಹುಮತ ಇಲ್ಲದ ಕಾರಣ ಸ್ಪರ್ಧೆ ಮಾಡಲಿಲ್ಲ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment