SUDDIKSHANA KANNADA NEWS/ DAVANAGERE/ 05-04-2023
ದಾವಣಗೆರೆ: ದಾವಣಗೆರೆ (DAVANAGERE) ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (CONGRESS) ಅಭ್ಯರ್ಥಿ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN) ಅವರು ಪ್ರಚಾರ ಚುರುಕುಗೊಂಡಿದೆ. ಶಾಮನೂರು, ಕುಂದುವಾಡ ಸೇರಿದಂತೆ ಹಲವೆಡೆ ಈಗಾಗಲೇ ಭೇಟಿ ಮಾಡಿ ಮತಯಾಚನೆ ಮಾಡಿದ್ದಾರೆ.
ನಗರದ ನಿಟುವಳ್ಳಿ ಭಾಗದ 6 ವಾರ್ಡ್ ಗಳ ಪಾಲಿಕೆ ಸದಸ್ಯರು, ವಾರ್ಡ್ ಅಧ್ಯಕ್ಷರು, ಬೂತ್ ಅಧ್ಯಕ್ಷರ ಸಭೆಯನ್ನು ಆರ್. ಎಸ್. ಶೇಖರಪ್ಪರವರ ಕಚೇರಿ(OFFICE)ಯಲ್ಲಿ ಮಲ್ಲಿಕಾರ್ಜುನ್ ಅವರು ನಡೆಸಿದರು.
ಸಭೆಯಲ್ಲಿ ಚುನಾವಣೆ(ELECTIN)ಗೆ ಪಕ್ಷ(PARTY)ದ ಸಂಘಟನೆ, ಮನೆ (HOUSE)ಮನೆಗೆ ತೆರಳಿ ಮತಯಾಚಿಸುವ ಹಾಗೂ ಮಲ್ಲಿಕಾರ್ಜುನ್ ರವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕಾರ್ಯ ಮಾಡುವ ಬಗ್ಗೆ ಚರ್ಚಿಸಲಾಯಿತು, ಈ ಸಂದರ್ಭದಲ್ಲಿ ನೂರಾರು ಯುವಕರು ಈ ಬಾರಿ ಮಲ್ಲಿಕಾರ್ಜುನ್ ರವರನ್ನು ಬೆಂಬಲಿಸಿ, ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಆರ್.ಎಸ್ ಶೇಖರಪ್ಪ, ಆರ್.ಎಚ್ ನಾಗಭೂಷಣ್, ಕೆ.ಜಿ. ಶಿವಕುಮಾರ್, ಮಹಾನಗರ ಪಾಲಿಕೆ ಸದಸ್ಯೆ ಸವಿತಾ ಹುಲ್ಮನಿ ಗಣೇಶ್, ಹುಲ್ಮನಿ ಗಣೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.
19 ನೇ ವಾರ್ಡ್ ನ ಮಂಡಿಪೇಟೆಯ ವಿಜಯಲಕ್ಷ್ಮಿ ರಸ್ತೆಯಲ್ಲಿ ದಾವಣಗೆರೆ (DAVANAGERE)ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (CONGRESS) ಅಭ್ಯರ್ಥಿ ಶಾಮನೂರು ಶಿವಶಂಕರಪ್ಪರು ಭರ್ಜರಿ ಪ್ರಚಾರ ನಡೆಸಿದರು. ವಾಹನದಲ್ಲಿ ಕುಳಿತು ಪ್ರಚಾರ ನಡೆಸಿದ ಅವರು, ಅಭಿವೃದ್ಧಿ ಕಾರ್ಯಗಳನ್ನು ಹೇಳುತ್ತಾ ಮತ ನೀಡುವಂತೆ ಮನವಿ ಮಾಡಿದರು.