ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ದಾವಣಗೆರೆ ಜಿಲ್ಲೆಯ ನ್ಯಾಮತಿಯ ಮಾದಾಪುರದಲ್ಲಿ ಚಿರತೆ ಸೆರೆಯಾದರೂ ತಪ್ಪದ ಆತಂಕ….!

On: September 8, 2023 4:49 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE: 08-09-2023

 

ದಾವಣಗೆರೆ (Davanagere): ದಾವಣಗೆರೆ ಜಿಲ್ಲೆಯ ಹೊನ್ನಾಳಿ -ನ್ಯಾಮತಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಚಿರತೆ ಸೆರೆ ಸಿಕ್ಕಿದೆ. ಆದ್ರೆ, ಜನರಲ್ಲಿ ಮಾತ್ರ ಆತಂಕ ದೂರ ಆಗಿಲ್ಲ.

ಸವಳಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಪುರ ಗ್ರಾಮದ ಜಮೀನುಗಳಲ್ಲಿ ಚಿರತೆ ಓಡಾಡುತ್ತಿತ್ತು. ಗ್ರಾಮದ ರೈತರು, ಸಾರ್ವಜನಿಕರಲ್ಲಿ ಭಯಕ್ಕೆ ಕಾರಣವಾಗಿತ್ತು. ಅರಣ್ಯ ಇಲಾಖೆಯವರು ಸವಳಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಹದ್ದಿನ ಮಾದಾಪುರ ಗ್ರಾಮದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.

ಈ ಸುದ್ದಿಯನ್ನೂ ಓದಿ: 

Davanagere: ದಾವಣಗೆರೆ ವಿವಿಯ ಆವರಣದಲ್ಲಿ ವಿದ್ಯಾರ್ಥಿನಿ ಅಪಹರಿಸಲು ಬಂದ ಯುವಕರ್ಯಾರು…? ಆಕೆ ತಾಯಿ ಜೊತೆಗಿದ್ದದ್ದು ಯಾಕೆ…?

ಮಾದಾಪುರ ಗ್ರಾಮದ ಮೇಗಳಕೆರೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕುರಿಯನ್ನು ಎಳೆದೊಯ್ದು ಚಿರತೆಯು ತಿಂದು ಹಾಕಿತ್ತು. ಕುಂಕುವ ಗ್ರಾಮದಲ್ಲಿಯೂ ನಾಯಿಯನ್ನು ಕೊಂದು ಹಾಕಿತ್ತು. ಮಾದಾಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಭಯಕ್ಕೂ ಕಾರಣವಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಯವರ ಗಮನಕ್ಕೆ ಜನರು ತಂದಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗದ ತಾವರೆಕೊಪ್ಪ ಸಿಂಹಧಾಮಕ್ಕೆ ಸೆರೆ ಸಿಕ್ಕ ಚಿರತೆಯನ್ನು ಕಳುಹಿಸಲಾಗಿದೆ ಎಂದು ಹೊನ್ನಾಳಿ ವಲಯ ಅರಣ್ಯಾಧಿಕಾರಿ ಕೆ. ಆರ್. ಚೇತನ ತಿಳಿಸಿದ್ದಾರೆ. ಚಿರತೆ ಸಾಗಿಸುವ ಕಾರ್ಯದಲ್ಲಿ ಉಪವಲಯ ಅರಣ್ಯಾಧಿಕಾರಿ ಬರ್ಕತ್ ಅಲಿ, ಫಾರೆಸ್ಟರ್ ಕೃಷ್ಣಮೂರ್ತಿ, ವನಪಾಲಕರು ಮತ್ತು ನ್ಯಾಮತಿ ಪಿಎಸ್ ಐ ಬಿ. ಎಲ್. ಜಯಪ್ ನಾಯ್ಕ ಪಾಲ್ಗೊಂಡಿದ್ದರು. ಚಿರತೆ ಸೆರೆ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ನೂರಾರು ಜನರು ಚಿರತೆ ನೋಡಲು ಆಗಮಿಸಿದ್ದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment