ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG NEWS UPDATES: ಭದ್ರಾ ಡ್ಯಾಂನ ನೀರಿಗೆ ಒತ್ತಾಯಿಸಿ ದಾವಣಗೆರೆ (Davanagere)ಬಂದ್: ಯಾವೆಲ್ಲಾ ಸಂಘಟನೆಗಳು ಕೊಟ್ಟಿವೆ ಸಪೋರ್ಟ್…? ಹೇಗಿರುತ್ತೆ ಬಂದ್ ಎಫೆಕ್ಟ್…?

On: September 24, 2023 12:30 PM
Follow Us:
DAVANAGERE BUNDH
---Advertisement---

SUDDIKSHANA KANNADA NEWS/ DAVANAGERE/ DATE:24-09-2023

ದಾವಣಗೆರೆ (Davanagere): ಭದ್ರಾ ಡ್ಯಾಂನ ಬಲದಂಡೆ ನಾಲೆಯಲ್ಲಿ ನೀರು ಹರಿಸಬೇಕು ಎಂದು ಆಗ್ರಹಿಸಿ ಸೋಮವಾರ ದಾವಣಗೆರೆ (Davanagere) ಬಂದ್ ಗೆ ಭಾರತೀಯ ರೈತ ಒಕ್ಕೂಟ ಕರೆ ಕೊಟ್ಟಿದ್ದು, ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ.

ಈ ಸುದ್ದಿಯನ್ನೂ ಓದಿ: 

ಭಾರತದಲ್ಲಿ ಯಾವಾಗ ರಿಯಲ್ ಎಸ್ಟೇಟ್ (Real estate)ನಲ್ಲಿ ಹೂಡಿಕೆ ಮಾಡಬಹುದು…? ಈ ಸಮಯದಲ್ಲಿ ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ…!

ಬೆಳಿಗ್ಗೆ 7.30ಕ್ಕೆ ನಗರದ ಜಯದೇವ ವೃತ್ತದಲ್ಲಿ ಜಮಾವಣೆಗೊಳ್ಳಲಿರುವ ಸಾವಿರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನಾ ಸಭೆ ನಡೆಸಲಿದ್ದಾರೆ. ಆ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಮೂಲಕ ತೆರಳಲಿದ್ದು, ಜೊತೆಗೆ ಅಂಗಡಿ ಮುಂಗಟ್ಟುಗಳ ಬಂದ್ ಗೆ ಮನವಿ ಮಾಡಲಿದ್ದಾರೆ. ಈ ನಡುವೆ ಬಂದ್ ಗೆ ಬಿಜೆಪಿಯು ಬೆಂಬಲ ಕೊಟ್ಟಿದೆ.

DAVANAGERE BUNDH WARNING
DAVANAGERE BUNDH 

Davanagere ಚೇಂಬರ್ ಆಫ್ ಕಾಮರ್ಸ್, ದಲ್ಲಾಳಿ ಮಾಲೀಕರ ಸಂಘ, ಕೂಲಿ ಕಾರ್ಮಿಕರ ಸಂಘ, ಖಾಸಗಿ ಬಸ್ ಗಳ ಮಾಲೀಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳು, Davanagere ಆಟೋ ಮಾಲೀಕರ ಸಂಘ, ಕ್ರಿಮಿನಾಶಕ, ರಸಗೊಬ್ಬರ ಜಿಲ್ಲಾ ಸಂಘ, ಆಮ್ ಆದ್ಮಿ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿರುವುದು ಭಾರತೀಯ ರೈತ ಒಕ್ಕೂಟಕ್ಕೆ ಬಲ ಬಂದಿದೆ.

ಭದ್ರಾ ಡ್ಯಾಂನ ಅಚ್ಚುಕಟ್ಟುಪ್ರದೇಶದ ಶೇಕಡಾ 70 ರೈತರು ದಾವಣಗೆರೆ ಜಿಲ್ಲೆಯ ರೈತರು ಬರಲಿದ್ದಾರೆ. ಈ ಜಲಾಶಯದ ನೀರೇ ರೈತರಿಗೆ ಜೀವಸೆಲೆ. ಪ್ರತಿಯೊಬ್ಬ ದಾವಣಗೆರೆಯ ಜನರು ಬಂದ್ ಗೆ ಬೆಂಬಲ ಸೂಚಸಬೇಕು. ಬಂದ್ ಯಶಸ್ವಿಯಾದರೆ ಸರ್ಕಾರದ ಮೇಲೆ ಒತ್ತಡ ಹೇರಲು ಅನುಕೂಲವಾಗುತ್ತದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಭತ್ತ ಬೆಳೆದಿರುವ ರೈತರು ಕಂಗಾಲಾಗಿದ್ದಾರೆ. ನೀರು ಸ್ಥಗಿತಗೊಳಿಸಿರುವ ಕಾರಣದಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಜಿಲ್ಲೆಯ ರೈತರ ಹಿತ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕಾರಣಕ್ಕೆ ಬಂದ್ ಗೆ ಎಲ್ಲರೂ ಬೆಂಬಲ ಸೂಚಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಭಾರತೀಯ ರೈತ ಒಕ್ಕೂಟದ ಪ್ರಮುಖರಾದ ಶಾಮನೂರು
ಲಿಂಗರಾಜ್ ಮನವಿ ಮಾಡಿದ್ದಾರೆ.

ಬಂದ್ ನಡೆಸುವ ಮೂಲಕ ಜನರಿಗೆ ತೊಂದರೆ ಉಂಟು ಮಾಡುವ ಉದ್ದೇಶ ಇಲ್ಲ. ಶಿವಮೊಗ್ಗದ ಕಾಡಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ನೀರಾವರಿ ಸಲಹಾ ಸಮಿತಿಯು ನೂರು ದಿನಗಳ ಕಾಲ ಭದ್ರಾ ಡ್ಯಾಂನ ಬಲದಂಡೆ ಹಾಗೂ ಎಡದಂಡೆ ನಾಲೆಯಲ್ಲಿ ನೀರು ಹರಿಸಲು ನಿರ್ಧರಿಸಲಾಗಿತ್ತು. ಆಗಸ್ಟ್ 10ರಿಂದ ನೀರು ಸಹ ಹರಿಸಲಾಗುತಿತ್ತು. ಆದ್ರೆ, ಕಳೆದ ಕೆಲ ದಿನಗಳಿಂದ ನೀರು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಭತ್ತ ಬೆಳೆ ಸಂಪೂರ್ಣ
ನಾಶವಾಗುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭತ್ತ ಬೆಳೆಗೆ ನೀರು ಬೇಕಿರುವುದು ಈಗಲೇ. ಆದ್ದರಿಂದ ಕೊಟ್ಟ ಮಾತಿನಂತೆ, ತೆಗೆದುಕೊಂಡ ನಿರ್ಧಾರದಂತೆ ನೂರು ದಿನಗಳ ಕಾಲ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಲೇಬೇಕು. ಯಾವುದೇ ಸಬೂಬು ಬೇಡ. ಆನ್ ಅಂಡ್ ಆಫ್ ಪದ್ಧತಿ ಕೈಬಿಡಬೇಕು. ಭದ್ರಾ ಜಲಾಶಯದಲ್ಲಿ ಸದ್ಯಕ್ಕೆ 161 ಅಡಿ ನೀರು ಇದೆ. ಕುಡಿಯುವ ನೀರಿಗೆ 7 ಟಿಎಂಸಿ ತೆಗೆದಿಟ್ಟರೂ ಸಹ ನೀರು ಹರಿಸಬಹುದು. ಬೇಸಿಗೆ ಬೆಳೆಗೆ ನೀರೂ ನೀಡಬಹುದು.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತನ್ನ ಜಿಲ್ಲೆಯ ರೈತರ ಹಿತ ಕಾಪಾಡಲು ಈ ರೀತಿ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಈ ದಿಟ್ಟ ಕ್ರಮ ತೆಗೆದುಕೊಳ್ಳಲೇಬೇಕು. ನಮಗೆ ಬಾಯಿ ಮಾತಿನ ಭರವಸೆ ಬೇಡವೇ ಬೇಡ. ಲಿಖಿತವಾಗಿ ಮಾಹಿತಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ದಾವಣಗೆರೆ (Davanagere)ಬಂದ್‌ಗೆ ಬೆಂಬಲ:

ಭಾರತೀಯ ರೈತ ಒಕ್ಕೂಟ ಸೋಮವಾರ ಕರೆದಿರುವ ದಾವಣಗೆರೆ ಬಂದ್‌ಗೆ ಸಂಪೂರ್ಣ ಸಹಕಾರ ನೀಡಲು ಏಕತಾ ವೇದಿಕೆ ಸಜ್ಜಾಗಿದೆ.

ಒಂದು ಕಡೆ ಮಳೆ ಇಲ್ಲ ಭತ್ತ ನಾಟಿ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಭದ್ರಾ ನಾಲೆಗಳ ನೀರನ್ನು ಬಂದ್ ಮಾಡಿರುವುದು ದುರಂತವೇ ಸರಿ. ರಾಜ್ಯ ಸರ್ಕಾರ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಆದಕಾರಣ ಅನೇಕ ಮನವಿಗಳಿಗೂ ಸ್ಪಂದಿಸದ ಸರ್ಕಾರಕ್ಕೆ ದಾವಣಗೆರೆ ಜಿಲ್ಲೆ ಬಂದ್ ಮಾಡುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ನೀಡಬೇಕಾಗಿದೆ ಎಂದು ಕರ್ನಾಟಕ ಏಕತಾ ವೇದಿಕೆ ರಾಜ್ಯಾಧ್ಯಕ್ಷ ಎನ್. ಹೆಚ್ ಹಾಲೇಶ್‌ರವರು ತಿಳಿಸಿದ್ದಾರೆ.

ಆಮ್ ಆದ್ಮಿ ಸಪೋರ್ಟ್:

ಭದ್ರಾ ನೀರಿಗಾಗಿ ದಾವಣಗೆರೆ ಜಿಲ್ಲೆಯ ರೈತ ಸಮುದಾಯದವರು ಒಂದು ವಾರದಿಂದ ಪ್ರತಿಭಟನೆ ಮಾಡುತ್ತಿದ್ದರೂ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಸೂಕ್ತವಾಗಿ ಸ್ಪಂದಿಸದಿರುವುದು ಬೇಸರದ ಸಂಗತಿ. ಎಲ್ಲ ರೈತ ಪರ ಸಂಘಟನೆಗಳು ದಾವಣಗೆರೆ ಬಂದ್ ಗೆ ಕರೆ ಕೊಟ್ಟಿದ್ದು, ರಾಜ್ಯಾದ್ಯಂತ ಆಮ್ ಆದಿ ಪಕ್ಷದ ವತಿಯಿಂದ ಕಾವೇರಿನ ನೀರಿನ ವಿಚಾರವಾಗಿ ಕೂಡ ಹೋರಾಟ ನಡೆಯುತ್ತಿದೆ. ರೈತರ ಪರವಾಗಿ ಆಮ್ ಆದ್ಮಿ ಇದ್ದು, ಸೋಮವಾರ ಬೆಳಿಗ್ಗೆ 10. 30ಕ್ಕೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ರೈತ ಸಮುದಾಯದ ಪರವಾಗಿ ಕೆಲಸ ಮಾಡುತ್ತಾ ಬಂದಿರುವ ನಮ್ಮ ಪಕ್ಷದ ವತಿಯಿಂದ ಮೆರವಣಿಗೆ ಮೂಲಕ ಎಸಿ ಕಚೇರಿಯವರೆಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ. ಆರ್. ಅರುಣ್ ಕುಮಾರ್ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment