SUDDIKSHANA KANNADA NEWS/ DAVANAGERE/ DATE:20-10-2023
ದಾವಣಗೆರೆ (Davanagere): ಗುಣಮಟ್ಟದ ವಿದ್ಯುತ್ ನ್ನು ಸಮರ್ಪಕವಾಗಿ ಪೂರೈಕೆ ಮಾಡುವ ಸಲುವಾಗಿ ಅನಧಿಕೃತ ಮತ್ತು ಅಧಿಕೃತ ಪಂಪ್ ಸೆಟ್ ಗಳ ಸರ್ವೆ ಮಾಡಿ ಗಣತಿ ಮಾಡಬೇಕು ಎಂದು ಇಂದು ನಡೆದ ರೈತರ ಮತ್ತು ಬೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಿರಂತರ 3 ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದ ರೈತರು ರೋಸಿ ಹೋಗಿದ್ದು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಪರಿವರ್ತಕಗಳ ದುರಸ್ಥಿ ಮತ್ತು ಬದಲಾವಣೆ ಮಾಡುವಲ್ಲಿ
ವಿಳಂಬ ಧೋರಣೆ ಅನುಸರಿಸಬಾರದು ಎಂದು ರೈತರು ಆಗ್ರಹಿಸಿದ್ದರು.
Read Also This Story:
Davanagere: ಹಾದಿಬೀದಿಯಲ್ಲಿ ರೇಣುಕಾಚಾರ್ಯ ಪಕ್ಷದ ವಿರುದ್ಧ ಮಾತನಾಡಬಾರದು: ಬಿಜೆಪಿಯಿಂದ ಉಚ್ಚಾಟಿಸುವಂತೆ ವರಿಷ್ಠರಿಗೆ ಒತ್ತಾಯ
ರೈತರ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ ಕಾರ್ಯಪಾಲಕ ಇಂಜಿನಿಯರ್ ಎಸ್ ಕೆ. ಪಟೇಲ್ ರವರು 5 ಗಂಟೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತೇವೆ. ಆದರೆ ಅನಧಿಕೃತ ಪಂಪ್ ಸೆಟ್ ಗಳ ಮಾಹಿತಿ ಬೇಕು. ನಮ್ಮ ದಾಖಲೆಗಳಲ್ಲಿ ಇರುವುದಕ್ಕೂ ವಾಸ್ತವತೆಗೂ ಬಹಳ ವ್ಯತ್ಯಾಸವಿದೆ. ಹೀಗಾಗಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಗೆ ಸಮಸ್ಯೆ ಇದೆ. ರೈತರು ಸಹಕರಿಸಿದರೆ ನಮ್ಮ ಕಚೇರಿ ವಿಭಾಗಕ್ಕೆ ಬರುವ ದಾವಣಗೆರೆ, ಜಗಳೂರು ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿರುವ ಎಲ್ಲಾ ಪಂಪ್ ಸೆಟ್ ಗಳ ಸರ್ವೆ ಕಾರ್ಯ ನಡೆಸಿ ಗಣತಿ ಮಾಡಬೇಕು. ಆಗ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಅನುಕೂಲವಾಗುತ್ತದೆ ಎಂದರು.
ಇವರ ಪ್ರಸ್ತಾವಕ್ಕೆ ರೈತರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು. ಈಗಿನ ಪರಿಸ್ಥಿತಿಯಲ್ಲಿ ಪ್ರತಿದಿನ 7 ಗಂಟೆ 3 ಫೇಸ್ ಕೊಡಲು ಸಾಧ್ಯವಿಲ್ಲ. 5 ಗಂಟೆ ಕೊಡಲಾಗುವುದು ಎಂದು ಪಟೇಲ್ ರವರು ಹೇಳಿದಾಗ ರೈತರು ಲೋಡ್ ಶೆಡ್ಡಿಂಗ್ ಇಲ್ಲದೆ ನಿರಂತರವಾಗಿ ಮತ್ತು ಸಮರ್ಪಕವಾಗಿ ಪೂರೈಕೆ ಮಾಡಬೇಕು ಎಂದು ಹೇಳಿದರು. ರೈತರ ಆಗ್ರಹಕ್ಕೆ ಮಣಿದ ಬೆಸ್ಕಾಂ ಅಧಿಕಾರಿಗಳು ಲೋಡ್ ಶೆಡ್ಡಿಂಗ್ ಸಂಪೂರ್ಣ ಇರುವುದಿಲ್ಲ ಎಂದು ಹೇಳಿದರು.
ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಬುಳ್ಳಾಪುರದ ಹನುಮಂತಪ್ಪ, ಬೆಳವನೂರು ನಾಗೇಶ್ವರರಾವ್, ಈಚಗಟ್ಟದ ಕರಿಬಸಪ್ಪ, ಅಣಬೇರು ಅಣ್ಣಪ್ಪ, ಬಲ್ಲೂರು ಅಣ್ಣಪ್ಪ, ಎಸ್ ಟಿ ಪರಮೇಶ್ವರಪ್ಪ, ಆರನೇಕಲ್ಲು ವಿಜಯಕುಮಾರ, ಕೊಗ್ಗನೂರು ಹನುಮಂತಪ್ಪ, ಚಿನ್ನಸಮುದ್ರದ ಭೀಮಾನಾಯ್ಕ್ ಮುಂತಾದವರು ಭಾಗವಹಿಸಿದ್ದರು.
ಸಭೆಯಲ್ಲಿ ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಎಸ್ ಕೆ ಪಟೇಲ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಾದ ಜಿ ಎಂ ನಾಯಕ್, ತೀರ್ಥೆಶ್ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು:
ವಧು – ವರ ಮಾಹಿತಿ ಕೇಂದ್ರ
ನಮ್ಮಲ್ಲಿ ಎಲ್ಲಾ ಜಾತಿಯವರು ಹಾಗೂ ಎಲ್ಲಾ ವರ್ಗವದರು ಇದ್ದಾರೆ. ಮೊದಲ ಹಾಗೂ ಎರಡನೇ ಮದುವೆಗೆ ಹಾಗೂ ನಮ್ಮಲ್ಲಿ 2 ಲಕ್ಷ ಪ್ರೊಫೈಲ್ ಇದೆ. ನಿಮ್ಮಲ್ಲಿ ಎಂಥ ಸಮಸ್ಯೆ ಇದ್ದರೂ ಕೇವಲ ಮೂರು ತಿಂಗಳಲ್ಲಿ ಮದುವೆ ಹೊಂದಿಸಿ ಕೊಡುತ್ತೇವೆ ಹಾಗೂ ಅಂತರಜಾತಿ ಮದುವೆ ಹೆಚ್ಚಾಗಿ ಮಾಡಿಸುತ್ತೇವೆ. ಒಮ್ಮೆ ಭೇಟಿ ಕೊಡಿ ಅಥವಾ ಕರೆ ಮಾಡಿ ಮೊಬೈಲ್ ನಂಬರ್: 99455 00051, ವಾಟ್ಸಪ್ ನಂಬರ್ 98443 50220.