ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ದಾವಣಗೆರೆಯಲ್ಲಿ 9 ಪತ್ರಕರ್ತರಿಗೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರಿಂದ ಮಾಧ್ಯಮ ಪ್ರಶಸ್ತಿ ಪ್ರದಾನ: ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆಗೆ ಸಿಕ್ತು ಸಮ್ಮಾನ

On: August 27, 2023 11:54 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:27-08-2023

ದಾವಣಗೆರೆ (Davanagere): ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಕೊಡಮಾಡಲ್ಪಡುವ ಮಾಧ್ಯಮ ಪ್ರಶಸ್ತಿಯನ್ನು 9 ಪತ್ರಕರ್ತರಿಗೆ ಪ್ರದಾನ ಮಾಡಲಾಯಿತು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಿಎಂ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ವಿರಕ್ತ ಮಠದ ಬಸವ ಪ್ರಭು ಶ್ರೀಗಳು ಸೇರಿದಂತೆ ಇತರೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ಮಾಧ್ಯಮ ಪ್ರಶಸ್ತಿ ಪುರಸ್ಕೃತರು:

ಇದೇ ವೇಳೆ ಕನ್ನಡ ಭಾರತಿ ಪತ್ರಿಕೆ ಸಂಪಾದಕರಾದ ಮಲ್ಲಿಕಾರ್ಜುನ ಕಬ್ಬೂರು, ವಿಜಯ ವಾಣಿ ಸ್ಥಾನಿಕ ಸಂಪಾದಕರಾದ ಎಂ.ಬಿ.ನವೀನ್, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕರಾದ ಸದಾನಂದ ಹೆಗಡೆ, ವಾರ್ತಾ ವಿಹಾರ ತತ್ವ ಸಂಪಾದಕರಾದ ಎಂ.ವೈ. ಸತೀಶ್, ದಾವಣಗೆರೆ ಕನ್ನಡಿಗ ಸಂಪಾದಕರಾದ ಆರ್.ರವಿ, ಜನತಾ ವಾಣಿ ಹಿರಿಯ ವರದಿಗಾರರಾದ ಎಸ್.ಎ. ಶ್ರೀನಿವಾಸ್, ಸುವರ್ಣ ಟಿವಿ ಕ್ಯಾಮೆರಾ ಮ್ಯಾನ್ ಕಿರಣ್ ಕುಮಾರ್, ನ್ಯೂಸ್ 18 ಕನ್ನಡ ವಾಹಿನಿ ಜಿಲ್ಲಾ ವರದಿಗಾರರಾದ ಎ.ಸಿ. ಸಂಜಯ್, ರಾಜ್ ನ್ಯೂಸ್ ವರದಿಗಾರರಾದ ರಾಮ್ ಪ್ರಸಾದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರತಿಭಾ ಪುರಸ್ಕೃತರು:

ಜೆ. ಆದರ್ಶ (ಡಾ. ಕೆ. ಜೈಮುನಿ, ಜೆ. ಸುಶೀಲಾ), ಎಂ. ಭೂಮಿಕ, ಎಂ. ಸ್ಪಂದನ (ಪಿ. ಮಂಜುನಾಥ ಕಾಡಜ್ಜಿ, ಸುನಂದ), ಆರ್. ದೀಪಿಕಾ (ಆರ್. ರವಿಬಾಬು, ಜಿ.ವಿ. ನಾಗರತ್ನ), ಟಿ.ಎಸ್. ಧನುಷ್, ಟಿ.ಎಸ್. ಮನೋಜ್ (ಟಿ.ಜಿ. ಶಿವಮೂರ್ತಿ, ಕೆ.ಎಸ್.ಕುಸುಮಾ), ಯು. ಲಾವಣ್ಯ (ಕೆ. ಉಮೇಶ್, ಶೋಭಾ), ಇ. ಪ್ರತೀಕ್ಷಾ (ಕೆ. ಏಕಾಂತಪ್ಪ, ಪದ್ಮ ಏಕಾಂತಪ್ಪ), ಎಸ್. ತನುಶ್ರೀ (ಆರ್. ಶಿವಕುಮಾರ್, ಎಸ್. ರೇಖಾ), ಪ್ರಣವ್ ಜಹಗೀರದಾರ್ ( ರಮೇಶ್ ಜಹಗೀರದಾರ್, ವಿಜಯವಾಣಿ) ಅವರಿಗೆಪ್ರತಿಭಾ ಪುರಸ್ಕಾರ ನೀಡಲಾಯಿತು.

ಈ ಸುದ್ದಿಯನ್ನೂ ಓದಿ: 

Davanagere: ಎಂ. ಪಿ. ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ಚರ್ಚೆಯಾಗಿಲ್ಲ, ಚನ್ನಗಿರಿ ಶಾಸಕರ ಅಸಮಾಧಾನ ಇಲ್ಲ: ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟನೆ

ವಿರಕ್ತ ಮಠದ ಬಸವ ಪ್ರಭು ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು‌ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ವಹಿಸಿದ್ದರು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ
ಜಿಲ್ಲಾಧ್ಯಕ್ಷ ಎ .ಎಂ.ಮಂಜುನಾಥ್, ದಾವಣಗೆರೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ, ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್, ವಾರ್ತಾಧಿಕಾರಿ ಧನಂಜಯಪ್ಪ, ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ವರದರಾಜ್, ಖಜಾಂಚಿ ಮಧು ನಾಗರಾಜ್ ಕುಂದುವಾಡ, ಮಾಜಿ ಅಧ್ಯಕ್ಷರಾದ ಬಿ. ಎನ್. ಮಲ್ಲೇಶ್, ಬಸವರಾಜ್ ದೊಡ್ಮನಿ, ಚಂದ್ರಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment