ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ(Davanagere)ಯಲ್ಲಿ ಸಂಚಲನ ಮೂಡಿಸಿದ್ದ ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ ಆರೋಪಿ ಸಿಕ್ಕಿಬಿದ್ದಿದ್ದಾದರೂ ಹೇಗೆ…? ವಶಪಡಿಸಿಕೊಂಡ ಹಣವೆಷ್ಟು…?

On: September 23, 2023 3:58 PM
Follow Us:
DAVANAGERE ACCUSE ARREST
---Advertisement---

SUDDIKSHANA KANNADA NEWS/ DAVANAGERE/ DATE:23-09-2023

ದಾವಣಗೆರೆ (Davanagere): ಮಹಿಳೆಯೊಬ್ಬರು ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ಹಲ್ಲೆ ಮಾಡಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ದಾವಣಗೆರೆ ವಿದ್ಯಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read Also This Story: 

BIG BREAKING NEWS: ಭದ್ರಾ ಡ್ಯಾಂ (Bhadra Dam) ನೀರು ಹರಿಸುವ ಬಗ್ಗೆ ಭಾನುವಾರ ಸಂಜೆಯೊಳಗೆ ಲಿಖಿತ ಆದೇಶ ಬರದಿದ್ದರೆ ಸೆ. 25ಕ್ಕೆ ದಾವಣಗೆರೆ ಬಂದ್: ಭಾರತೀಯ ರೈತ ಒಕ್ಕೂಟ ಎಚ್ಚರಿಕೆ

ದಾವಣಗೆರೆ(Davanagere)ಯ ಬೂದಾಳ್ ರಸ್ತೆಯ ಎಸ್ ಪಿ ಎಸ್ ನಗರದ ತಿರುಮಲ ಬಾರ್ ಹತ್ತಿರದ ವಾಸಿ ಎಲೆಕ್ಟ್ರಿಷಿಯನ್ ಮುಬಾರಕ್ ಎಂ. ಅಲಿಯಾಸ್ ಬಾಬು ಅಲಿಯಾಸ್ ಸಾಹೀಲ್ (22) ಬಂಧಿತ ಆರೋಪಿ. ಬಂಧಿತನಿಂದ 2,17,500 ರೂಪಾಯಿ ನಗದು ಮತ್ತು 26,000 ರೂಪಾಯಿ ಮೌಲ್ಯದ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಘಟನೆ ಹಿನ್ನೆಲೆ ಏನು…?

ಕಳೆದ 13ರಂದು ದಾವಣಗೆರೆ(Davanagere)ಯ ಬಾಲಾಜಿ ಸರ್ಕಲ್ ಸಮೀಪದ ಕುಂದುವಾಡ ರಸ್ತೆಯ ವಾಸಿ ಯೋಗೀಶ್ವರಿ ಎಂಬುವವರು ಮನೆಯಲ್ಲಿ ತನ್ನ ಮಗನ ಜೊತೆ ಇದ್ದರು. ಪತಿ ಶ್ರೀನಾಥ ಹೊರಗೆ ಹೋಗಿದ್ದರು. ಸಮರ್ಥನೊಂದಿಗೆ ಯೋಗೇಶ್ವರಿ ಮನೆಯಲ್ಲಿದ್ದಾಗ ಮಧ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ಮನೆಗೆ ಯುವಕ ಬಂದಿದ್ದ. ಮಗನಿಗೆ ತಿನ್ನಲು ತಿಂಡಿಯನ್ನು ಕೊಟ್ಟು ಮನೆಯ ಹೊರಗೆ ಒಣಗಿಸಲು ಇಟ್ಟಿದ್ದ ಕೊಬ್ಬರಿ ತುಂಡುಗಳನ್ನು ನೋಡಲು ಹೋಗಿ ವಾಪಸ್ಸು ಮನೆಗೆ ಬಂದಾಗ ಮನೆಯಲ್ಲಿ ಮಗನೊಂದಿಗೆ ಯಾರೋ ಒಬ್ಬ ವ್ಯಕ್ತಿ ಸ್ಟೋರ್ ರೂಮಿನಲ್ಲಿದ್ದ.

ಆ ವ್ಯಕ್ತಿಗೆ ಯಾರು ನೀನು ಅಂತಾ ಕೇಳಿದ ತಕ್ಷಣವೇ ಆತನು ಯೋಗೇಶ್ವರಿ ಅವರಿಗೆ ಕಲ್ಲಿನಿಂದ ತೆಲೆಗೆ ಜೋರಾಗಿ ಎರಡರಿಂದ ಮೂರು ಬಾರಿ ಹೊಡೆದಿದ್ದ. ಯಾರೂ ನೀನು ಏಕೆ ಹೊಡೆಯುತ್ತಿದ್ದೀಯಾ ಅಂತಾ ಕೇಳಿದಾಗ ಆರೋಪಿಯು ಮಹಿಳೆ ಮೇಲೆ ಹಲ್ಲೆ ಮಾಡಿ ಗಾಯಪಡಿಸಿ ಹಣ, ಬಂಗಾರ ಕೊಡು ಅಂತಾ ಬೆದರಿಕೆ ಹಾಕಿದ್ದಾನೆ. ಬೆಡ್ ರೂಂಗೆ ಕರೆದುಕೊಂಡು ಹೋಗಿ ಮೂರರಿಂದ ನಾಲ್ಕು ಲಕ್ಷ ಹಣವಿದ್ದ ಬ್ಯಾಗ್ ಅನ್ನು ತೆಗೆದುಕೊಂಡು ಹೋಗಿದ್ದ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯು ವಿದ್ಯಾನಗರ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಮಾತ್ರವಲ್ಲ ಆರೋಪಿಯು ಬಂದು ಹೋಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

THEAFT DAVANAGERE
THEAFT DAVANAGERE

ದಾವಣಗೆರೆ(Davanagere)ಯಲ್ಲಿ ಈ ಘಟನೆ ನಡೆದಿದ್ದು ಆತಂಕಕ್ಕೆ ಕಾರಣವಾಗಿತ್ತು. ಈ ಪ್ರಕರಣವು ಸೂಕ್ಷ್ಮ ಪ್ರಕರಣವಾದ ಕಾರಣಕ್ಕೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಸಾರ್ವಜನಿಕರಲ್ಲಿ ಭೀತಿಯನ್ನೂ ಉಂಟು ಮಾಡಿತ್ತು. ಈ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.

ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಆರ್. ಬಿ. ಬಸರಗಿ, ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ ಸ್ಪೆಕ್ಟರ್ ಪ್ರಭಾವತಿ. ಸಿ. ಶೇತಸನದಿಅ ಅವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಅಧಿಕಾರಿ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು

ಈ ತಂಡವು ಆರೋಪಿ ಮುಬಾರಕ್ ಎಂ. ಅಲಿಯಾಸ್ ಬಾಬು ಅಲಿಯಾಸ್ ಸಾಹೀಲ್ ಎಂಬಾತನನ್ನು ಸೆರೆ ಹಿಡಿದಿದ್ದಾರೆ. ಸುಲಿಗೆ ಮಾಡಿದ್ದ ಮಾಡಿದ್ದ 2,17,500 ರೂಪಾಯಿ ನಗದು, 26 ಸಾವಿರ ರೂಪಾಯಿ ಮೌಲ್ಯದ ವಿವೋ ಮೊಬೈಲ್‌ಅನ್ನು ವಶಪಡಿಸಿಕೊಂಡಿದ್ದು ತನಿಖೆ ಮುಂದುವರಿದಿದೆ.

ಸವಾಲಾಗಿದ್ದ ಪ್ರಕರಣ ಬೇಧಿಸಿದ ಅಧಿಕಾರಿಗಳು ಸೇರಿದಂತೆ ತನಿಖಾಧಿಕಾರಿ ಪ್ರಭಾವತಿ.ಸಿ.ಶೇತಸನದಿ, ಪಿಎಸ್ ಐಗಳಾದ ವಿಜಯ್ ಎಂ., ರೇಣುಕಾ ಜಿ.ಎಂ ಹಾಗೂ ಸಿಬ್ಬಂದಿಯಾದ ಆನಂದ ಮುಂದಲಮನಿ, ಯೋಗೀಶ್ ನಾಯ್ಕ, ಭೋಜಪ್ಪ ಕಿಚಡಿ, ಗೋಪಿನಾಥ ಬಿ ನಾಯ್ಕ, ಯೋಗೀಶ್ ನಾಯ್ಕ, ಮಂಜಪ್ಪ, ಲಕ್ಷ್ಮಣ್, ರಾಘವೇಂದ್ರ, ಶಾಂತರಾಜ್ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಅವರು ಅಭಿನಂದಿಸಿದ್ದಾರೆ.

SP MEETING IN DAVANAGERE

ಶ್ರೀನಾಥ್ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ನಿಮಿತ್ತ ಹೊರಗಡೆ ಹೋಗಿದ್ದರು. ಮನೆಯ ಬಾಗಿಲು ತೆಗೆದು ಕಸ ಹಾಕಲು ಹೊರಗಡೆ ಹೋಗುತ್ತಿದ್ದಂತೆ ಒಳನುಗ್ಗಿದ್ದ ಕಳ್ಳನು ಯೋಗೇಶ್ವರಿ ಹಾಗೂ ಅವರ 8 ವರ್ಷದ ಪುತ್ರನನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದಾನೆ. ಹೊರಗಡೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಚಾಕು ತೋರಿಸಿ ಹಣ, ಒಡವೆ ನೀಡುವಂತೆ ಬೆದರಿಕೆ ಹಾಕಿದ್ದ ಪ್ರಕರಣ ಸಾಕಷ್ಟು ಸಂಚಲನಕ್ಕೂ ಕಾರಣವಾಗಿತ್ತು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment