SUDDIKSHANA KANNADA NEWS/ DAVANAGERE/ DATE:22-08-2023
ದಾವಣಗೆರೆ (Davanagere): ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ವತಿಯಿಂದ ಮಾಧ್ಯಮ ದಿನಾಚರಣೆ ಮತ್ತು ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಆ. 27ರಂದು ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ.
ಪ್ರತಿವರ್ಷದಂತೆ ಮಾಧ್ಯಮ ದಿನಾಚರಣೆ ಅಂಗವಾಗಿ ಕೊಡಮಾಡಲಾಗುವ ಮಾಧ್ಯಮ ಪ್ರಶಸ್ತಿಗೆ ಈ ಬಾರಿ 9 ಪತ್ರಕರ್ತರು ಆಯ್ಕೆಯಾಗಿದ್ದು, ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಬಾರಿ ಪ್ರಶಸ್ತಿ ನೀಡಲು ಸಮಿತಿ ರಚಿಸಲಾಗಿತ್ತು. ಅದರಂತೆ ಸಮಿತಿಯು ಸೋಮವಾರ ಸಭೆ ನಡೆಸಿ 9 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ:
Parrots Problem: ಘೀಳಿಟ್ಟು ಬರುತ್ತಿದೆ ಲಕ್ಷಾಂತರ ಗಿಳಿಗಳ ಹಿಂಡು: “ಈ ಪ್ರದೇಶಗಳಿಗೆ” ಬಂದು ಮೆಕ್ಕೆಜೋಳ ನಾಶಪಡಿಸುವುದ್ಯಾಕೆ..? ಕಾಳು ಕುಕ್ಕಿ ತಿನ್ನುವ ಗಿಳಿಗಳಿಂದ ಹಿಂಡುತ್ತಿದೆ ರೈತರ ಕರುಳು…!
ಕನ್ನಡ ಭಾರತಿ ಪತ್ರಿಕೆ ಸಂಪಾದಕ ಮಲ್ಲಿಕಾರ್ಜುನ ಕಬ್ಬೂರ್, ವಿಜಯವಾಣಿಯ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ವಾರ್ತಾ ವಿಹಾರ ಸುದ್ದಿ ಸಂಪಾದಕ ಎಂ.ವೈ. ಸತೀಶ್. ದಾವಣಗೆರೆ ಕನ್ನಡಿಗ ಪತ್ರಿಕೆ ಸಂಪಾದಕ ಆರ್. ರವಿ, ಜನತಾವಾಣಿ ಹಿರಿಯ ವರದಿಗಾರ ಎನ್.ವಿ. ಶ್ರೀನಿವಾಸ, ನ್ಯೂಸ್ 18 ಕನ್ನಡ ಸುದ್ದಿವಾಹಿನಿ ಜಿಲ್ಲಾ ವರದಿಗಾರ ಎ.ಪಿ. ಸಂಜಯ್, ರಾಜ್ ನ್ಯೂಸ್ ವರದಿಗಾರ ರಾಮಪ್ರಸಾದ್ ಹಾಗೂ ಸುವರ್ಣ ಸುದ್ದಿ ವಾಹಿನಿಯ ಕ್ಯಾಮೆರಾಮೆನ್ ಕಿರಣ ಕುಮಾರ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆಯ್ಕೆಗೊಂಡವರಿಗೆ ಮಾಧ್ಯಮ ದಿನಾಚರಣೆಯ ಕಾರ್ಯಕ್ರಮದಲ್ಲಿ ನಗದು ಮತ್ತು ಪ್ರಶಸ್ತಿಯನ್ನು ಗಣ್ಯರಿಂದ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಪ್ರಧಾನ
ಕಾರ್ಯದರ್ಶಿ ಡಾ. ಸಿ. ವರದರಾಜ್, ಖಜಾಂಚಿ ಮಧು ನಾಗರಾಜ್ ಕುಂದುವಾಡ ತಿಳಿಸಿದ್ದಾರೆ.