SUDDIKSHANA KANNADA NEWS/ DAVANAGERE/ DATE:29-09-2023
ದಾವಣಗೆರೆ (Davanagere): ತಮಿಳುನಾಡಿಗೆ ಕಾವೇರಿ ನೀರು ಹರಿಸುವಿಕೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ದಾವಣಗೆರೆ(Davanagereಯಲ್ಲಿ ಹೋರಾಟ ನಡೆಸಲಾಗುತ್ತಿದೆ. ದಾವಣಗೆರೆ ಬಂದ್ ಗೆ ಕರೆ ನೀಡಲಾಗಿದೆ. ಆದ್ರೆ, ಐದು ವರ್ಷದ ಪೋರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾನೆ.
ದಾವಣಗೆರೆ(Davanagereಯ ಕೆ. ಬಿ. ಬಡಾವಣೆಯ ಎಂಜಿನಿಯರ್ ಅವಿನಾಶ್ ಹಾಗೂ ಚೈತ್ರಾ ದಂಪತಿ ಪುತ್ರ ಮೇಹಿತ್ ಬೆಳ್ಳಂಬೆಳಿಗ್ಗೆ ತನ್ನ ತಾಯಿಯ ಜೊತೆ ಜಗಳವಾಡಿಕೊಂಡು ಪ್ರತಿಭಟನೆಗೆ ತಯಾರಾಗಿ ಬಂದಿದ್ದ. ಜಯದೇವ ವೃತ್ತಕ್ಕೆ ಆಗಮಿಸಿದ ಮೇಹಿತ್ ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರು ಕೂಡಲೇ ನೀರು ಸ್ಥಗಿತಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ.
ಈ ಸುದ್ದಿಯನ್ನೂ ಓದಿ:
Davanagere: ಇಂದು ಬಂದ್ ಗೆ ಕರೆ ಕೊಟ್ಟಿರುವ ಆಯೋಜಕರಿಗೆ ಪೊಲೀಸ್ ಇಲಾಖೆ ಕೊಟ್ಟಿರುವ ಎಚ್ಚರಿಕೆಗಳು ಏನು…? ಕಾನೂನು ಉಲ್ಲಂಘಿಸಿದರೆ ಕೇಸ್ ಬೀಳೋದು ಗ್ಯಾರಂಟಿ..!
ನಮಗೆ ಭತ್ತ, ಬೇಳೆ ಸೇರಿದಂತೆ ಇತರೆ ಬೆಳೆಯಲು ನೀರಿಲ್ಲ. ಕುಡಿಯಲು ನೀರು ಸರಿಯಾಗಿ ಸಿಗುತ್ತಿಲ್ಲ. ಕಾವೇರಿ ನದಿ ನೀರು ನಮ್ಮದು, ಯಾವುದೇ ಕಾರಣಕ್ಕೂ ನೀರು ಹರಿಸಬೇಡಿ. ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಿ. ನಾನು ಟಿವಿಯಲ್ಲಿ ಕಾವೇರಿಗಾಗಿ ಹೋರಾಟ ನಡೆಯುತ್ತಿರುವುದನ್ನು ನೋಡಿದೆ. ನನಗೂ ಹೋರಾಟಕ್ಕೆ ಧುಮಕಬೇಕು ಎಂಬ ಬಯಕೆ ಬಂತು. ಹಾಗಾಗಿ, ಬೆಳಿಗ್ಗೆಯೇ ಬಂದಿದ್ದೇನೆ. ಕನ್ನಡಪರ ಸಂಘಟನೆಗಳ ಜೊತೆ ನಾನೂ ನಿಲ್ಲುತ್ತೇನೆ ಎಂದು ಹೇಳುವ ಮೂಲಕ
ಎಲ್ಲರ ಕೇಂದ್ರಬಿಂದುವಾದ.
ರಾಜ್ಯ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸಿರುತ್ತಿರುವುದು ತಪ್ಪು. ಮೊದಲು ರಾಜ್ಯದ ಜನರ ಹಿತ ಕಾಪಾಡಬೇಕು. ರೈತರ ನೆರವಿಗೆ ಧಾವಿಸಬೇಕು. ಕಾವೇರಿ ನೀರು ಹರಿಸಬಾರದು ಎಂಬ ಬೇಡಿಕೆ ನನ್ನದು. ಕೂಡಲೇ ನೀರು
ಹರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುವ ಮೂಲಕ ಗಮನ ಸೆಳೆದ.
Comments 2