ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್: ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ

On: July 1, 2024 5:11 PM
Follow Us:
---Advertisement---

ಬೆಂಗಳೂರು: ರೇಣುಕಾಸ್ವಾಮಿ(Renuka Swamy) ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌(Actor Darshan) ಅವರನ್ನು ಕುಟುಂಬಸ್ಥರು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

ಇತ್ತೀಚೆಗಷ್ಟೇ ಜೈಲಿನಲ್ಲಿ ನಟ ದರ್ಶನ್‌ ಅವರನ್ನು ರಕ್ಷಿತಾ, ಪ್ರೇಮ್ ದಂಪತಿ ಭೇಟಿ ಮಾಡಿದ್ದರು. ಈ ವೇಳೆ ಇಂತಹ ಕೃತ್ಯ ನಡೆಯಬಾರದಿತ್ತು ಎಂದು ರಕ್ಷಿತಾ ಬೇಸರ ವ್ಯಕ್ತಪಡಿಸಿದ್ದರು.

ಪ್ರಕರಣದಲ್ಲಿ ಪವಿತ್ರಾ ಗೌಡ (Pavithra Gowda) ಎ1 ಆಗಿದ್ದು ದರ್ಶನ್‌ ಎ2 ಆಗಿದ್ದಾರೆ. ಸದ್ಯ ದರ್ಶನ್‌ ಅವರು ಶೀಘ್ರದಲ್ಲಿ ಜೈಲಿನಿಂದ ಹೊರಬರಲಿ ಎಂದು ಒಂದು ವರ್ಗ ಹೇಳುತ್ತಿದ್ದರೆ, ಇನ್ನೊಂದೆಡೆ ತಪ್ಪುವೆಸಗಿದವರಿಗೆ ಶಿಕ್ಷೆ ಆಗಲೇಬೇಕೆಂದು ಕೆಲವೊಂದಿಷ್ಟು ಮಂದಿ ಆಗ್ರಹಿಸಿದ್ದಾರೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಕೂಡ ಇತ್ತೀಚೆಗೆ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಇದಾದ ಬಳಿಕ ಪೋಸ್ಟ್‌ ವೊಂದನ್ನು ಹಂಚಿಕೊಂಡು, ನ್ಯಾಯಾಂಗದ ಮೇಲೆ ನಂಬಿಕೆಯಿದೆ. ನ್ಯಾಯ ಸಿಗುವ ಭರವಸೆಯಿದೆ. ಅಭಿಮಾನಿಗಳು ತಾಳ್ಮೆಯಿಂದಾರಬೇಕೆಂದು ಪೋಸ್ಟ್‌ ವೊಂದನ್ನು ಹಂಚಿಕೊಂಡು ಹೇಳಿದ್ದರು.

ಕಳೆದ ಕೆಲ ಸಮಯದಿಂದ ದರ್ಶನ್‌ ಅವರಿಂದ ದೂರವಾಗಿ ಉಳಿದಿರುವ ಸಹೋದರ ದಿನಕರ್‌ ಹಾಗೂ ತಾಯಿ ಮೀನಾ ಅವರು ಸೋಮವಾರ(ಜು.1 ರಂದು) ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್‌ ಅವರಿಗೆ ಧೈರ್ಯ ತುಂಬಿದ್ದಾರೆ.

ತಾಯಿ ಹಾಗೂ ಸಹೋದರನನ್ನು ನೋಡಿ ದರ್ಶನ್‌ ಭಾವುಕರಾಗಿದ್ದಾರೆ. ಇತ್ತ ಮಗನ ಸ್ಥಿತಿಯನ್ನು ನೋಡಿ ಮೀನಾ ಅವರು ಕೂಡ ಭಾವುಕರಾಗಿ ಅಪ್ಪಿಕೊಂಡು ಧೈರ್ಯವಾಗಿರುವಂತೆ ಆತ್ಮಸ್ಥೈರ್ಯವನ್ನು ತುಂಬಿದ್ದಾರೆ. ಸಹೋದರನ ಜೊತೆ ದರ್ಶನ್‌ ಕಾನೂನು ಹಾದಿಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಪವಿತ್ರಾ ಗೌಡ ಅವರಿಗೆ ಆಶ್ಲೀಲ ಮೆಸೇಜ್‌ ಮಾಡಿದ್ದಕ್ಕಾಗಿ ಜೂ.8 ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎನ್ನುವನನ್ನು ಅಪಹರಿಸಿ ಶೆಡ್‌ ವೊಂದರಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ ಕೊಲೆಗೈದು ಮೋರಿಗೆ ಎಸೆಯಲಾಗಿತ್ತು. ಈ ಸಂಬಂಧ ಮೊದಲಿಗೆ 18 ಮಂದಿ ಆರೋಪಿಯನ್ನು ಬಂಧಿಸಲಾಗಿತ್ತು. ವಿಚಾರಣೆ ನಡೆದ ಬಳಿಕ ದರ್ಶನ್‌, ಪವಿತ್ರಾ ಗೌಡ, ವಿನಯ್‌ ಸೇರಿದಂತೆ ಹಲವು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಆರ್ ಜೆಡಿ

ಆರ್ ಜೆಡಿ-ಕಾಂಗ್ರೆಸ್ ಮೈತ್ರಿಕೂಟ ಸೀಟು ಹಂಚಿಕೆಯಲ್ಲಿ ಬಿರುಕು: ಚಿಹ್ನೆ ವಾಪಸ್ ಪಡೆದ ಲಾಲೂ ಯಾದವ್ ಪಕ್ಷ!

ಪ್ರಿಯಾಂಕ್ ಖರ್ಗೆ

ನಿಮ್ಮ ತಂದೆ, ನೀವು ಬೆಂಬಲಿಸುವ ನಕಲಿ ಗಾಂಧಿ ಕುಟುಂಬದಿಂದ ಆರ್ ಎಸ್ ಎಸ್ ನಿಷೇಧ ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆಗೆ ಸಾಲು ಸಾಲು ಪ್ರಶ್ನೆ ಕೇಳಿದ ಬಿಜೆಪಿ!

ಸಿದ್ದರಾಮಯ್ಯ

ಜಸ್ಟ್ ಡಿನ್ನರ್ ಅಷ್ಟೇ, ರಾಜಕೀಯ ಚರ್ಚೆ ಇಲ್ಲ: ಸಚಿವ ಸಂಪುಟ ಪುನರ್ರಚನೆ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ!

ಪ್ರಭಾ ಮಲ್ಲಿಕಾರ್ಜುನ್

ಅರಣ್ಯ ಇಲಾಖೆ ಹುದ್ದೆಗಳ ನೇರ ನೇಮಕಾತಿಗೆ ಬಿಎಸ್ಸಿ ಅರಣ್ಯ ಶಾಸ್ತ್ರ ಪದವಿ ವಿದ್ಯಾರ್ಹತೆಯನ್ನಾಗಿ ಪರಿಗಣಿಸಿ: ಡಾ. ಪ್ರಭಾ ಮಲ್ಲಿಕಾರ್ಜುನ್ ಗೆ ವಿದ್ಯಾರ್ಥಿಗಳ ಮನವಿ

ಆರ್ ಎಸ್ ಎಸ್

ಆರ್ ಎಸ್ ಎಸ್ ಬ್ಯಾನ್ ವಿಚಾರಕ್ಕೆ ಕೇಸರಿ ಪಡೆ ನಿಗಿನಿಗಿ, ತಾಕತ್ತೇನೆಂದು ತೋರಿಸ್ತೇವೆ: ಬಿಜೆಪಿ ನಾಯಕರ ಸವಾಲ್!

ರೈಲ್ವೆ

ರೈಲ್ವೆ ನೇಮಕಾತಿ ಮಂಡಳಿಯ ಜೂನಿಯರ್ ಎಂಜಿನಿಯರ್ ನೇಮಕ: 2570 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Leave a Comment