SUDDIKSHANA KANNADA NEWS/ DAVANAGERE/ DATE:09-06-2024
ದಾವಣಗೆರೆ: ನಗರದ ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್ ಹಾಗೂ ಜನತಾ ರಕ್ಷಣಾ ವೇದಿಕೆಯಿಂದ ಚಿಲ್ಡ್ರನ್ ಕುಂದುವಾಡ ಪ್ರೀಮಿಯರ್ ನಡೆದಿದ್ದು, ಈ ಪಂದ್ಯಾವಳಿಯಲ್ಲಿ ಡಿ ರಾಕ್ಸ್ ತಂಡ ರೋಚಕವಾಗಿ ಒಂದು ರನ್ ನಿಂದ ಗೆದ್ದು ಬೀಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕುಂದುವಾಡ ಪ್ರೀಮಿಯರ್ ಲೀಗ್ -6 ಆಯೋಜನೆ ಮಾಡಲಾಗಿತ್ತು, ಈ ಬಾರೀ ವಿಶೇಷವಾಗಿ ಗೋಲ್ಡನ್ ಕೆಪಿಎಲ್(ಬಂಗಾರದ ಕಪ್) ನ್ನು ಇಡಲಾಗಿತ್ತು, ಮಳೆ ನಿರಂತರ ಆಗಮಿಸಿದ ಹಿನ್ನೆಲೆ ಗೋಲ್ಡನ್ ಕಪ್ ಮುಂದೂಡಲಾಯಿತು.
ಈ ಮಧ್ಯೆ ಮಳೆ ಬಿಡುವು ನೀಡಿದ ಹಿನ್ನೆಲೆ ಭಾನುವಾರ ಚಿಲ್ಡ್ರನ್ ಕೆಪಿಎಲ್ ಪಂದ್ಯ ನಡೆಸಲಾಯಿತು. 5ನೇ ತರಗತಿಯಿಂದ 8ನೇ ತರಗತಿ ಒಳಗಿನ ಮಕ್ಕಳು ಮಾತ್ರ ಈ ಟೂರ್ನಿಯಲ್ಲಿ ಭಾಗವಹಿಸಿದ್ದು, ನಾಲ್ಕು ತಂಡಗಳನ್ನ ರಚಿಸಲಾಗಿತ್ತು, ಡೆವಿಲ್ಸ್ ಕ್ರಿಕೇಟರ್ಸ್, ಡಿ ರಾಕ್ಸ್, ಶ್ರೀ ವಿನಾಯಕ ಕ್ರಿಕೇಟರ್ಸ್, ಜೂನಿಯರ್ಸ್ ಸ್ನೇಹ ಬಳಗ ತಂಡಗಳು ಭಾಗವಹಿಸಿದ್ದವು,
ಗ್ರಾಮದ ಹಿರಿಯ ಮುಖಂಡರು ಪಂದ್ಯಾವಳಿ ಉದ್ಘಾಟಿಸಿದರು, ಡೆವಿಲ್ಸ್ ಹಾಗೂ ಡಿ ರಾಕ್ಸ್ ತಂಡ ಫೈನಲ್ ಪ್ರವೇಶ ಪಡೆದಿದ್ದವು, ಮೊದಲ ಬ್ಯಾಟ್ ಮಾಡಿದ ಸಂಜಯ್ ಲೋಕಿಕೆರೆ ನಾಯಕತ್ವದ ಡಿ ರಾಕ್ಸ್ ತಂಡ ನಿಗಧಿತ 4 ಓವರ್ ಗಳಲ್ಲಿ 28ರನ್ ಗಳಿಸಿತು, ಗುರಿ ಬೆನ್ನಟ್ಟಿದ ಗೌಡ್ರು ಪುನೀತ್ ನಾಯಕತ್ಸ ಡೆವಿಲ್ಸ್ ತಂಡ ರೋಚಕ ಹಣಾಹಣಿಯಲ್ಲಿ ಕೇವಲ 1 ರನ್ ನಿಂದ ಸೋತು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆಯಬೇಕಾಯಿತು,
ಕೊನೆಯ ಎಸೆತದಲ್ಲಿ ಗೆಲ್ಲಲು ಮೂರು ರನ್ ಗಳ ಅವಶ್ಯಕತೆ ಇತ್ತು, ಕೊನೆಯ ಎಸೆತ ಬಿಗಿ ಬೌಲಿಂಗ್ ದಾಳಿ ನಡೆಸಿದ ಬೌಲರ್ ಕೇವಲ ಒಂದು ರನ್ ಬಿಟ್ಟುಕೊಟ್ಟರು ಇದರೊಂದಿಗೆ ಕೇವಲ ಒಂದು ರನ್ ನಿಂದ ಡಿ ರಾಕ್ಸ್ ತಂಡ ವಿಜಯಶಾಲಿಯಾಯಿತು.
ಇನ್ನೂ ಮೂರನೇ ಸ್ಥಾನಕ್ಕಾಗಿ ಶ್ರೀ ವಿನಾಯಕ ಕ್ರಿಕೇಟರ್ಸ್ ಹಾಗೂ ಜೂನಿಯರ್ಸ್ ಸ್ನೇಹಬಳಗ ತಂಡ ಸೆಣಸಾಟ ನಡೆಸಿದವು, ಈ ಪಂದ್ಯದಲ್ಲಿ ಶ್ರೀ ವಿನಾಯಕ ತಂಡ ಸುಲಭವಾಗಿ ಗೆಲುವು ಪಡೆಯುವುದರೊಂದಿಗೆ ಮೂರನೇ ಬಹುಮಾನ ಪಡೆಯಿತು,
ಜೂನಿಯರ್ಸ್ ಸ್ನೇಹ ಬಳಗ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಇನ್ನೂ ಎಲ್ಲಾ ಪಂದ್ಯಗಳು ರೋಚಕವಾಗಿದ್ದವು, ಮಕ್ಕಳಿಗಷ್ಟೆ ಈ ಪಂದ್ಯಾವಳಿಯಲ್ಲಿ ಅವಕಾಶ ಇದ್ದಿದ್ದರಿಂದ ಆಟಕ್ಕೆ ಎಲ್ಲರಿಗೂ ಅವಕಾಶ ಸಿಕ್ಕಿತ್ತು, ಅಷ್ಟೆ ಉತ್ಸಾಹಕರಾಗಿ ಮಕ್ಕಳು ಪಾಲ್ಗೊಂಡಿದ್ದು ಚಿಲ್ಡ್ರನ್ ಕೆಪಿಎಲ್ ಯಶಸ್ವಿಯಾಗಿ ಮುಗಿದಿದೆ, ಇನ್ನೂ ಗೋಲ್ಡನ್ ಕೆಪಿಎಲ್ ಟೂರ್ನಿಯನ್ನೂ ಮುಂದೂಡಲಾಗಿದ್ದು, ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.