SUDDIKSHANA KANNADA NEWS/ DAVANAGERE/ DATE:15_07_2025
ದಾವಣಗೆರೆ: ನಗರದ ದೇವರಾಜ್ ಅರಸ್ ಬಡಾವಣೆಯ ಎ ಬ್ಲಾಕ್ ನಲ್ಲಿ ಪಾರ್ಕ್ ಅಭಿವೃದ್ದಿಗೆ ಕೇವಲ ಜಾಲಿ ಮರ ತೆಗೆಯಲು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಆದ್ರೆ, ಆದರೆ ಅನುಮತಿ ಪಡೆದ ಮರದ ಜೊತೆ ದೊಡ್ಡದಾಗಿ ಬೆಳೆದ ಮರಗಳನ್ನು ಕಡಿಯಲು ಹೇಳಿದವರು ಯಾರು ಎಂದು ಪರಿಸರ ಪ್ರೇಮಿಗಳು ಪ್ರಶ್ನಿಸಿದ್ದಾರೆ.
READ ALSO THIS STORY: ಸೌಂದರ್ಯವೇ ಶಾಪವಾಯ್ತು: ಕೂದಲು ಕಟ್, ಚಿತ್ರಹಿಂಸೆ, ನರಕ.. ಗಂಡ, ಮಾವನ ಕಾಟಕ್ಕೆ ಶಾರ್ಜಾದಲ್ಲಿ ಮಗು ಕೊಂದು ಮಹಿಳೆ ಆತ್ಮಹತ್ಯೆ!
ಈ ಬಗ್ಗೆ ಬಳ್ಳಾರಿಯ ಅರಣ್ಯ ಇಲಾಖೆಯ ವಿಜೆಲೆಯನ್ಸಿ ಅವರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಭಾಗದ ಯುವ ವಕೀಲರು ಹೋಗಿ ಕೇಳಿದರೂ ಸಮಂಜಸ ಉತ್ತರ ನೀಡದೇ ಮರ ಕಡಿದವರು ಮರ ಕಡಿಯಲು ದೇವಸ್ಥಾನ ಕಮಿಟಿಯವರು ಹೇಳಿದ್ದಾರೆ ಎಂಬ ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ದಾವಣಗೆರೆ ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರು ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಪರಿಸರ ರಕ್ಷಣೆ ನಮ್ಮ ಹೊಣೆ ಎಂಬುದು ಎಲ್ಲಾ ನಾಗರೀಕರ ಕರ್ತವ್ಯವಾಗಿದೆ. ಪಕ್ಷಿ ಸಂಕುಲದ ಉಳಿವಿಗೆ ಮರ ಗಿಡದ ಅವಶ್ಯಕತೆ ಅಗತ್ಯ ಎಂಬುದನ್ನು ಎಲ್ಲರೂ ಸಹ ಪಾಲಿಸಬೇಕು. ಮರ ಕಡಿಯಲು ಯಾರು ಹೇಳಿದ್ದು ಎಂಬ ಕುರಿತಂತೆ ಸಮಗ್ರ ತನಿಖೆಯಾಗಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.