ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮೊಸರಿನಲ್ಲಿ ಉಪ್ಪು ಅಥವಾ ಸಕ್ಕರೆ.? ಯಾವುದು ಆರೋಗ್ಯಕ್ಕೆ ಉತ್ತಮ

On: July 21, 2024 9:44 AM
Follow Us:
---Advertisement---

ಋತುವಿನ ಹೊರತಾಗಿಯೂ ಊಟದಲ್ಲಿ ಮೊಸರು ಕಡ್ಡಾಯವಾಗಿರಬೇಕು ಎಂದು ಅನೇಕರು ಬಯಸ್ತಾರೆ. ಮೊಸರಿನೊಂದಿಗೆ ಊಟವನ್ನ ಮುಗಿಸುತ್ತಾರೆ. ಕೆಲವರು ಮಜ್ಜಿಗೆ ಕುಡಿಯುತ್ತಾರೆ. ಇನ್ನು ಕೆಲವರು ಒಂದು ಕಪ್ನಲ್ಲಿ ಮೊಸರು ಹಾಕಿಕೊಂಡು ತಿನ್ನುತ್ತಾರೆ. ಈ ರೀತಿಯಾಗಿ, ಯಾರಾದರೂ ತಮಗೆ ಇಷ್ಟವಾದ ಶೈಲಿಯಲ್ಲಿ ಮೊಸರನ್ನ ತೆಗೆದುಕೊಳ್ಳುವುದು ಸಾಮಾನ್ಯ. ಅಂದ್ಹಾಗೆ, ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪ್ರೋಬಯಾಟಿಕ್‌’ಗಳು ದೇಹವನ್ನ ಆರೋಗ್ಯಕರವಾಗಿಸುತ್ತದೆ. ಅದರಲ್ಲೂ ಜೀರ್ಣಾಂಗ ವ್ಯವಸ್ಥೆಯಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನ ಹೊರಹಾಕುವ ಮೂಲಕ ಒಳ್ಳೆಯ ಬ್ಯಾಕ್ಟೀರಿಯಾವನ್ನ ಹೆಚ್ಚಿಸುತ್ತದೆ. ಆದ್ರೆ, ಕೆಲವರು ಮೊಸರಿಗೆ ಉಪ್ಪು ಹಾಕಿದರೆ ಇನ್ನು ಕೆಲವರು ಸಕ್ಕರೆ ಹಾಕುತ್ತಾರೆ. ಮೊಸರಿನಲ್ಲಿ ಉಪ್ಪು ಅಥವಾ ಸಕ್ಕರೆಯೊಂದಿಗೆ ತಿನ್ನಲು ಯಾವುದು ಉತ್ತಮ ಎಂದು ಈಗ ತಿಳಿಯೋಣಾ.

ಉಪ್ಪಿನೊಂದಿಗೆ ತಿಂದರೆ..!
ಉಪ್ಪಿನೊಂದಿಗೆ ಮೊಸರು ತುಂಬಾ ಒಳ್ಳೆಯದು. ನೀವು ಮೊಸರಿಗೆ ಗುಲಾಬಿ ಉಪ್ಪು ಅಥವಾ ಕಪ್ಪು ಉಪ್ಪನ್ನು ಸೇರಿಸಿದರೆ ಇನ್ನೂ ಉತ್ತಮ. ಮಧುಮೇಹಿಗಳು ಮೊಸರಿಗೆ ಸಕ್ಕರೆ ಹಾಕುವ ತಪ್ಪನ್ನ ಮಾಡಬಾರದು. ಅಧಿಕ ರಕ್ತದೊತ್ತಡ ಇರುವವರು ಮೊಸರನ್ನ ಉಪ್ಪಿನೊಂದಿಗೆ ಸೇವಿಸಬಹುದು. ಆದರೆ ಮೊಸರಿಗೆ ಉಪ್ಪು ಹಾಕಿದರೆ ಮೊಸರಿನಲ್ಲಿ ಇರುವ ಒಳ್ಳೆಯ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಆದ್ರೆ, ಹೆಚ್ಚು ಉಪ್ಪನ್ನು ಸೇವಿಸುವುದರಿಂದ ರಕ್ತದೊತ್ತಡದ ಸಮಸ್ಯೆಯೂ ಉಂಟಾಗುತ್ತದೆ. ಕಡಿಮೆ ಉಪ್ಪು ಹಾಕುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.

ಸಕ್ಕರೆಯೊಂದಿಗೆ ತಿಂದರೆ..!
ಮೊಸರಿಗೆ ಸಕ್ಕರೆ ಹಾಕುವ ಅಭ್ಯಾಸ ಅನೇಕರಿಗೆ ಇದೆ. ಹೀಗೆ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೂ ಒಳ್ಳೆಯದು. ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾ ಕೂಡ ಸಾಯುವುದಿಲ್ಲ. ಆದರೆ ಈ ಸಂಯೋಜನೆಯು ಹೆಚ್ಚಿನ ಕ್ಯಾಲೋರಿಗಳನ್ನ ಹೊಂದಿದೆ. ಹೀಗೆ ತಿಂದರೆ ಬೇಗ ತೂಕ ಹೆಚ್ಚುತ್ತದೆ. ಮಧುಮೇಹ ಬರುವ ಸಾಧ್ಯತೆಯೂ ಇದೆ.

ಮೊಸರು ತೆಗೆದುಕೊಳ್ಳಲು ಉತ್ತಮ ಮಾರ್ಗ ಯಾವುದು?
ನಿಜ ಹೇಳಬೇಕೆಂದರೆ, ಯಾವುದೇ ಸೇರ್ಪಡೆಗಳಿಲ್ಲದ ಮೊಸರು ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದೇ ರೀತಿ ಮೊಸರಿಗೆ ಸ್ವಲ್ಪ ಉಪ್ಪು ಮತ್ತು ಸಕ್ಕರೆ ಹಾಕಿದರೆ ಒಳ್ಳೆಯದು. ಹೀಗೆ ತಿಂದರೂ ತೊಂದರೆಯಿಲ್ಲ. ಆದ್ದರಿಂದ ಇದನ್ನು ಒಬ್ಬರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳಬೇಕು.

 

Join WhatsApp

Join Now

Join Telegram

Join Now

Leave a Comment