Site icon Kannada News-suddikshana

ಸಿ.ಟಿ.ರವಿ ಪ್ರಕರಣ:ಖಾನಪುರದ ಸಿಪಿಐ ಅಮಾನತು

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯನ್ನು ಖಾನಪುರದ ಪೋಲಿಸ್ ಠಾಣೆಗೆ ತಡರಾತ್ರಿ ಕರೆತರಲಾಗಿತ್ತು, ಆ ಸಮಯದಲ್ಲಿ‌ ಬಿಜೆಪಿಯ ನಾಯಕರುಗಳು ಗಲಾಟೆ ಮಾಡಿದ ಕಾರಣ ಠಾಣೆಯೊಳಗೆ ಬಿಡಲಾಗಿತ್ತು.

ಕರ್ತವ್ಯ ಲೋಪ, ಬೇಜಾವಬ್ದಾರಿ, ಆಪಾದಿತರನ್ನು ಹೊರತು ಪಡಿಸಿ ಠಾಣೆಯೊಳಗೆ ಯಾರನ್ನು ಬಿಡದಂತೆ ಆದೇಶ ಹೊರಡಿಸಿದ್ದರು, ನಿರ್ಲಕ್ಷ್ಯ ವಹಿಸಿ ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿರುವ ಆರೋಪದ ಮೇಲೆ ಖಾನಪುರದ ಸಿಪಿಐ ಮಂಜುನಾಥ್ ನಾಯಕ ಅವರನ್ನು ಐಜಿಪಿ ವಿಕಾಸ್ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಹಿನ್ನಲೆಯಲ್ಲಿ ಗರಂ ಆಗಿರುವ ಗೃಹ ಸಚಿವ ಪರಮೇಶ್ವರ್ ರವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ನಂತರ ಐಜಿಪಿ ವಿಕಾಸ ಕುಮಾರ್ ಸಿಪಿಐ ಮಂಜುನಾಥ್ ನಾಯಕ ಅವರನ್ನು ಅಮಾನತು ಮಾಡಿ ವಿಕಾಸ ಆದೇಶ ಹೊರಡಿಸಿದ್ದಾರೆ.

 

Exit mobile version