(Crop Loan) ರಾಜ್ಯ ಸರ್ಕಾರವು 2017 ಹಾಗೂ 2018ನೇ ಸಾಲಿನಲ್ಲಿ ರಾಜ್ಯದ ರೈತರ ಸಾಲ ಮನ್ನಾ ಮಾಡುವ ಯೋಜನೆಯ ಅಡಿಯಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಇದಕ್ಕೆ ಅನ್ವಯವಾಗುವಂತೆ ರಾಜ್ಯದ ಒಟ್ಟು 17.37 ಲಕ್ಷ ರೈತರು ಬೆಳೆ ಸಾಲ ಮನ್ನಾದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಆದರೆ, ರಾಜ್ಯಾದ್ಯಂತ ಈ ಯೋಜನೆಯ ಅಡಿಯಲ್ಲಿ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ರಾಜ್ಯದ 31,000 ರೈತರಿಗೆ ಇದರ ಪ್ರಯೋಜನ ದೊರೆತಿಲ್ಲ. ಈ ಕಾರಣದಿಂದಾಗಿ ಇತ್ತೀಚಿಗೆ ನಡೆದಂತಹ ವಿಧಾನ ಪರಿಷತ್ ಸಚಿವ ಸಂಪುಟದಲ್ಲಿ ಸಹಕಾರ ಸಚಿವರಾಗಿರುವಂತಹ ಕೆ. ಎನ್ ರಾಜನ್ ಅವರು ಪ್ರತಿಕ್ರಿಯಿಸಿದ್ದು, ಬೆಳೆ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ ಪ್ರಯೋಜನ ಪಡೆಯದೇ ಇರುವಂತಹ 31 ಸಾವಿರ ರೈತರಿಗೆ ನೀಡಬೇಕಾಗಿರುವ 161.51 ಕೋಟಿ ರೂಪಾಯಿ ಹಣವನ್ನು ಹಾಗೂ ಬಾಕಿ ಇರುವ ರೈತರ ಮೊತ್ತ 64 ಕೋಟಿ ರೂಪಾಯಿ ಹಣ ಸೇರಿ ಒಟ್ಟು 232 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗುವುದೆಂದು ತಿಳಿಸಿದ್ದಾರೆ.
ಹಾಗಾದರೆ ಯಾವ ರೈತರಿಗೆ ಇದರ ಪ್ರಯೋಜನ ಸಿಗಲಿದೆ. ಮೊಬೈಲ್ ನಲ್ಲಿಯೇ ಈ ಕೆಳಗಿನ ಹಂತವನ್ನು ಅನುಸರಿಸಿ ನೋಡಬಹುದಾಗಿದೆ.
- ಮೊದಲು ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ https://clws.karnataka.gov.in/index_KN.html
- ನಂತರದಲ್ಲಿ ಅಲ್ಲಿ ಕಾಣುವಂತಹ “ನಾಗರೀಕ ಸೇವೆಗಳು” ಎಂಬ ಆಯ್ಕೆಯ ಮೇಲೆ ಒತ್ತಿ “ಬೆಳೆ ಸಾಲಮನ್ನಾ ವರದಿ” ಎಂಬ ಆಯ್ಕೆ ಮೇಲೆ ಒತ್ತಿ ಮುಂದುವರೆಯಿರಿ.
- ನಂತರದ ಪುಟದಲ್ಲಿ ನಿಮಗೆ ನಿಮ್ಮ ಜಿಲ್ಲಾ, ತಾಲೂಕು ಹಾಗೂ ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಳ್ಳಲು ಕೇಳಲಾಗುತ್ತದೆ.
- ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಹಳ್ಳಿಯಲ್ಲಿ ಯಾವ ಯಾವ ರೈತರ ಬೆಳೆ ಸಾಲ ಮನ್ನಾ ಆಗಿದೆ ಹಾಗೂ ಎಷ್ಟು ಮೊತ್ತ ಆಗಿದೆ ಎಂಬ ರೈತರ ಪಟ್ಟಿ ಸಹಿತ ಮಾಹಿತಿಯನ್ನು ಅಲ್ಲಿ ತೋರಿಸಲಾಗುತ್ತದೆ.ಈ ಕ್ರಮಗಳನ್ನು ಅನುಸರಿಸುವುದರ ಮುಖಾಂತರ ನೀವು ನಿಮ್ಮ ಬೆಳೆ ಸಾಲ ಮನ್ನಾ ಆಗಿದಿಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.