ಬೆಂಗಳೂರು: ಟೀಮ್ ಇಂಡಿಯಾದ ಕ್ರಿಕೆಟಿಗ, ಕೆಕೆಆರ್ ತಂಡದ ಸೂಪರ್ ಸ್ಟಾರ್ ವೆಂಕಟೇಶ್ ಅಯ್ಯರ್ ಅವರು ತಮ್ಮ ಬಹುಕಾಲದ ಗೆಳತಿ ಶೃತಿ ರಘುನಾಥನ್ ಅವರೊಂದಿಗೆ ದಾಂಪತ್ಯ ಬದುಕಿಗೆ ಅಡಿಯಿರಿಸಿದರು.
ಭಾನುವಾರ ಈ ಜೋಡಿಯ ವಿವಾಹ ಸಂಪ್ರದಾಯಬದ್ಧವಾಗಿ ನೆರವೇರಿತು. ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಕೆಆರ್ ಫ್ರಾಂಚೈಸಿ ಮತ್ತು ತಂಡದ ಸಹ ಆಟಗಾರರು ಸೇರು ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಈ ಜೋಡಿಗೆ ಶುಭ ಹಾರೈಸಿದ್ದಾರೆ. ಕಳೆದ ವರ್ಷ ನವೆಂಬರ್ 21, 2023ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಸಪ್ತಪದಿ ತುಳಿದಿದ್ದಾರೆ. ವೆಂಕಟೇಶ್ ಅಯ್ಯರ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಕೆಕೆಆರ್ ತಂಡದ ಸದ್ಯನಾಗಿದ್ದಾರೆ. ಈ ಬಾರಿ 14 ಪಂದ್ಯಗಳನ್ನಾಡಿ 370 ರನ್ ಬಾರಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ತಮ್ಮ ಗೆಳತಿ ಜೊತೆ ದಾಂಪತ್ಯ