SUDDIKSHANA KANNADA NEWS/ DAVANAGERE/ DATE:10-10-2023
ದಾವಣಗೆರೆ: ಈಗ ವಿಶ್ವಕಪ್ ಕ್ರಿಕೆಟ್ (Cricket World Cup) ಜ್ವರ ಎಲ್ಲೆಡೆ ಕಂಡು ಬರುತ್ತಿದೆ. ಪ್ರತಿಯೊಂದು ಪಂದ್ಯವೂ ಕುತೂಹಲಕರ. ಬಲಿಷ್ಠ ತಂಡಗಳ ಕಾದಾಟ ನೋಡೋದೇ ಚೆಂದ. ಅದರಲ್ಲಿಯೂ ಭಾರತ ಮತ್ತು ಪಾಕ್ ನಡುವಿನ ಪಂದ್ಯಕ್ಕೆ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈಗ ನಡೆಯುತ್ತಿರುವ ಪಂದ್ಯಗಳೂ ಪ್ರೇಕ್ಷಕರ ಮನ ಗೆದ್ದಿದೆ.
Read Also This Story:
ದೇಶದಲ್ಲಿ ಎಷ್ಟು ಲಕ್ಷ ಹೆಕ್ಟೇರ್ ನಲ್ಲಿ ಅಡಿಕೆ (Areca nut) ಬೆಳೆಯಲಾಗುತ್ತೆ…? ಧಾರಣೆ ಕುಸಿಯುತ್ತಿರುವ ಈ ಹೊತ್ತಲ್ಲಿ ಅಡಿಕೆ ಸಿಪ್ಪೆ, ಹಾಳೆ ಬಳಸಿ ಕೈ ತುಂಬಾ ಹಣ ಮಾಡಬಹುದು… ಹೇಗೆ ಅಂತೀರಾ…?
ಭಾರತದಲ್ಲಿ ಕ್ರಿಕೆಟ್ ಅಂದರೆ ಪಂಚಪ್ರಾಣ. ಕೋಟ್ಯಾನುಕೋಟಿ ಅಭಿಮಾನಿಗಳು ಟಿವಿ ಮುಂದೆ ಕುಳಿತು ಬಿಡುತ್ತಾರೆ. ಟೀಂ ಇಂಡಿಯಾ ಪಂದ್ಯವಾದರಂತೂ ಕೆಲಸ ಬಿಟ್ಟು ನೋಡುತ್ತಾರೆ. ಅಷ್ಟು ಕ್ರೇಜ್ ಇದೆ. ಟೀಂ ಇಂಡಿಯಾ ಈ ಬಾರಿ ವಿಶ್ವಕಪ್ ಗೆಲ್ಲಲಿ, ಪ್ರತಿ ಪಂದ್ಯದಲ್ಲಿಯೂ ವಿಜಯದುದುಂಭಿ ಮೊಳಗಿಸಲು ಎಂದು ಕ್ರಿಕೆಟ್ ಫ್ಯಾನ್ಸ್ ಹಾರೈಸತೊಡಗಿದ್ದಾರೆ. ದಾವಣಗೆರೆಯ ಯುವಕರ ಟೀಂ ವಿಶೇಷವಾಗಿ ಟೀಂ ಇಂಡಿಯಾಕ್ಕೆ ಶುಭ ಕೋರಿದೆ.
ಹೌದು. ದಾವಣಗೆರೆಯ ಬ್ಲಾಕ್ ಕ್ಯಾಟ್ಸ್ ಕ್ರಿಯೇಟಿವ್ ಲ್ಯಾಬ್ ನಲ್ಲಿ ಅ. 11ಕ್ಕೆ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಇದು ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡುವಂಥದ್ದು. ಎರಡು ಹಾಡುಗಳನ್ನು ರೂಪಿಸಿದ್ದು, ಎಲ್ಲರ ಮನ ಗೆಲ್ಲುವುದು ಗ್ಯಾರಂಟಿ.
ಅ. 11 ರಂದು ಮಧ್ಯಾಹ್ನ 12. 30ಕ್ಕೆ ವಿಶ್ವಕಪ್ ಕ್ರಿಕೆಟ್ (Cricket World Cup) ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ಗೀತೆ 2023, ಗೆದ್ದು ಬಾ ಓ ಇಂಡಿಯಾ ಹಾಡು ಲೋಕಾರ್ಪಣಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಲ್ಯಾಬ್ ಪಾಲುದಾರ ಎಂ.ಎಸ್. ಚೇತನ್ ಹೇಳಿದರು.
Read Also This Story:
Davanagere: ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೊಂದು ಅವಕಾಶ: ನಿಮಗೆ ಸಿಗುತ್ತೆ ಫ್ರೀ ಟ್ರೈನಿಂಗ್… ಅದಕ್ಕೆ ಏನು ಮಾಡಬೇಕು…?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯನ್ ಕ್ರಿಕೆಟ್ ಯ್ಯಾಂಥಮ್ 2023 ಹೆಸರಿನ ಹಾಡು, ಈಗ ಯೂಟ್ಯೂಬ್ನಲ್ಲಿ 5 ಭಾಷೆಗಳಲ್ಲಿ ಅಂದರೆ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪರಿಕಲ್ಪನೆ ಮತ್ತು ನಿರ್ದೇಶನ, ಸಂಗೀತ ಬಾಲು ವಿ.ಜಿ.ಎಸ್., ಕನ್ನಡ ಮತ್ತು ತೆಲುಗು ಸಾಹಿತ್ಯವನ್ನು ಕಾರ್ತಿಕ್ ಬಿ.ಜಿ., ಹಿಂದಿ ಸಾಹಿತ್ಯ ಮಂಜುನಾಥ್ ರಾವ್, ತಮಿಳು ಸಾಹಿತ್ಯ ತಮಿಳ್ಳಗನ್, ಮಲಯಾಳಂ ಸಾಹಿತ್ಯ ಚಂದ್ರ ಶೇಖರನ್ ನಂಬೂಲಿ ಅವರದ್ದಾಗಿದ್ದು, ಶಶಾಂಕ್ ಶೇಷಗಿರಿ, ಚೇತನ್ ನಾಯಕ್, ಎಂ.ಸಿ. ಅಜ್ಜು ಅವರು ಕನ್ನಡದಲ್ಲಿ ಹಾಡಿದ್ದಾರೆ. ಹಿಂದಿಯಲ್ಲಿ ಶಶಾಂಕ್ ಶೇಷಗಿರಿ, ಇಶಾನ್ ರೋಜಿಂದರ್, ಎಂ.ಸಿ.ಬಿಜ್ಜು ಹಾಡಿದ್ದಾರೆ. ಕರೀಮುಲ್ಲಾ, ಸುಗಂದ್ ಶೇಖರ್, ಶಶಾಂಕ್
ಶೇಷಗಿರಿ, ಎಂ.ಸಿ. ಬಿಜ್ಜು ರವರು ತೆಲುಗಿನಲ್ಲಿ ಹಾಡಿದ್ದಾರೆ ಎಂದರು.
ಪ್ರತಿಯೊಬ್ಬರಿಗೂ ತಮ್ಮ ಮಾತೃಭಾಷೆಯಲ್ಲಿ ಭಾರತೀಯರ ಹೃದಯವನ್ನು ಸ್ಪರ್ಶಿಸುವ ಪ್ಯಾನ್ ಇಂಡಿಯಾ ಹಾಡು ಇದು. ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಸೌಹಾರ್ದತೆ ಜತೆ ನಮ್ಮ ರಾಷ್ಟ್ರದ ಶ್ರೀಮಂತ ವೈವಿಧ್ಯತೆ ಮತ್ತು ಏಕತೆಯನ್ನು ತೋರಿಸುವ ಮೂಲಕ ಭಾರತದಾದ್ಯಂತ ಮತ್ತು ಅದರಾಚೆಗಿನ ಪ್ರೇಕ್ಷಕರನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಈ ವೀಡಿಯೋ ಹಾಡು ಹೊಂದಿದೆ ಎಂದು ತಿಳಿಸಿದರು.
ಡಿ.ಸತ್ಯಪ್ರಕಾಶ್ ಧರ್ಮ ತಾಲ್ ಶೆರೀಫ್, ಶಶಾಂಕ್ ಶೇಷಗಿರಿ, ಎಂ.ಸಿ.ಬಿಜ್ಜು ತಮಿಳನಲ್ಲಿ ಹಾಡಿದ್ದಾರೆ. ರಾಜಗಣಪತಿ, ಶಶಾಂಕ್ ಶೇಷಗಿರಿ, ಎಂ.ಸಿ.ಬಿಜ್ಜು ಮಲಯಾಳಂನಲ್ಲಿ ಹಾಡಿದ್ದಾರೆ ಎಂದರು.
ಸಹ ನಿರ್ದೇಶನ: ಕಾರ್ತಿಕ್ ಬಿ.ಜಿ., ಸಂಕಲನ: ಬಾಲು ವಿ.ಜಿ.ಎಸ್., ಡಿ.ಒ.ಪಿ: ವಿಶ್ವಾಸ್ ಕೌಂಡಿನ್ಯ, ಪ್ರೋಗ್ರಾಮಿಂಗ್ ಮತ್ತು ಮಿಕ್ಸಿಂಗ್: ಹರ್ಷಿತ್ ಮತ್ತು ಐ.ಡಿ.ಅಕಾಶ್, ಕಿಶೋರ್, ಕಾರ್ಯಕಾರಿ ನಿರ್ಮಾಪಕರು: ಚೇತನ್ ಎಂ.ಎಸ್., ತಾಂತ್ರಿಕ ಬೆಂಬಲ
: ಅಮಿತ್ ಎನ್, ಪಾಟೀಲ್, ಪೋಸ್ಟರ್ ಗಳು ಮತ್ತು ಪ್ರಚಾರ ವಿನ್ಯಾಸ : ಐಸಿಎಲ್ ಕ್ರಿಯೇಜವ್ ಏಜೆನ್ಸಿ, ದಾವಣಗೆರೆ ಇವರಿಂದ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಡಿ. ಶೇಷಾಚಲ,ಅಮೀತ್ ಪಾಟೀಲ್, ನವೀನ್ ಮತ್ತಿತರರು ಹಾಜರಿದ್ದರು.