ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Cricket World Cup: ವಿಶ್ವಕಪ್ ಕ್ರಿಕೆಟ್ ಪ್ರಾರಂಭದ ಕಾರಣಕ್ಕೆ ಹಾಸ್ಟೆಲ್ ಗಳ ಮೇಲೆ ಪೊಲೀಸರು ನಿಗಾ ವಹಿಸುವಂತೆ ಮನವಿ ಮಾಡಿರುವುದೇಕೆ…?

On: October 4, 2023 7:23 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:04-10-2023

ದಾವಣಗೆರೆ: ಅಕ್ಟೋಬರ್ 5ರಿಂದ ವಿಶ್ವ ಕಪ್ ಕ್ರಿಕೆಟ್ (Cricket World Cup) ಪಂದ್ಯಾವಳಿಗಳು ಪ್ರಾರಂಭವಾಗುತ್ತಿದ್ದು, ಕ್ರೀಡಾಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಕ್ರೀಡೆ ಕೇವಲ ಮನೋರಂಜನೆಯಾಗದೇ ಜೂಜಾಟಕ್ಕೆ ತಿರುಗಿರುವ ಕಾರಣ ಹಾಸ್ಟೆಲ್ ಗಳಲ್ಲಿ ಹಾಗೂ ಪಿಜಿಗಳಲ್ಲಿ ಇರುವ ವಿದ್ಯಾರ್ಥಿಗಳ ಪೋಷಕರು ಭಯದಿಂದ  ದಿನ ದೂಡುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಳೆದ ಮೂರು ನಾಲ್ಕು ವರ್ಷಗಳಿಂದ ನಡೆದಿರುವಂತಹ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳೇ ಸಾಕ್ಷಿಯಾಗಿವೆ ಎಂದು ಕಾಂಗ್ರೆಸ್ ಜಿಲ್ಲಾ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ. ಎಲ್. ಹರೀಶ್ ಬಸಾಪುರ ಹೇಳಿದ್ದಾರೆ.

Read Also This Story:

ಶಾಮನೂರು ಶಿವಶಂಕರಪ್ಪ (Shamanuru Shivashankarappa) ಸರ್ಕಾರ ಉರುಳಿಸುವ ಮಾತನಾಡಿದ್ದಾರೆ, ಕಾಂಗ್ರೆಸ್ ಸರ್ಕಾರಕ್ಕೆ ಅಪಾಯ ಗ್ಯಾರಂಟಿ: ಬಿಜೆಪಿ ಟ್ವೀಟ್ ನಲ್ಲಿ ಕುಟುಕು…!

ಬುಕ್ಕಿಗಳು ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಜೂಜಾಟಕ್ಕೆ ಪ್ರಚೋದನೆ ನೀಡುತ್ತಿರುವ ದೂರುಗಳು ಜನಸಾಮಾನ್ಯರಿಂದ ಕೇಳಿ ಬರುತ್ತಿದ್ದು ಪೊಲೀಸ್ ಇಲಾಖೆ ಇದರ ಬಗ್ಗೆ ಹೆಚ್ಚಿನ ಗಮನಹರಿಸಿ ಜೂಜಾಟಕ್ಕೆ ಕಡಿವಾಣ ಹಾಕಬೇಕಾಗಿದೆ. ಈಗ ಜೂಜಾಟಗಳು ಮೊಬೈಲ್ ಗಳಲ್ಲಿ ಆನ್ ಲೈನ್ ಮೂಲಕ ನಡೆಯುತ್ತಿರುವುದರಿಂದ ಎಲ್ಲೋ ದೂರದಲ್ಲಿ ಕುಳಿತ ಬುಕ್ಕಿಗಳು ಅಲ್ಲಿಂದಲೇ ಜೂಜಾಟವನ್ನು ನಿಯಂತ್ರಿಸುತ್ತಿದ್ದು ಇಲಾಖೆ ಅಂತಹ ತಂತ್ರಜ್ಞಾನಕ್ಕೆ
ಪರ್ಯಾಯ ವ್ಯವಸ್ಥೆಯ ಮೂಲಕ ಕಂಡುಹಿಡಿಯುವ ಮೂಲಕ ಯುವಕರನ್ನು ದಾರಿ ತಪ್ಪಿಸುತ್ತಿರುವ ತಪ್ಪಿತಸ್ಥರಿಗೆ ಅತ್ಯಂತ ಕಠಿಣ ರೀತಿಯಲ್ಲಿ ಶಿಕ್ಷಿಸಬೇಕಾಗಿದೆ ಎಂದು ಹೇಳಿದ್ದಾರೆ.

ಕೆ. ಎಲ್. ಹರೀಶ್ ಬಸಾಪುರ, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ
ಕೆ. ಎಲ್. ಹರೀಶ್ ಬಸಾಪುರ, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ

ಜಿಲ್ಲೆಗೆ ನೂತನವಾಗಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದಿರುವ ಉಮಾ ಪ್ರಶಾಂತ್ ರವರು ಕ್ರಿಕೆಟ್ ಬೆಟ್ಟಿಂಗ್ ತಡೆಗಟ್ಟಲು ವಿಶೇಷ ಟಾಸ್ಕ್ ಫೋರ್ಸ್ ರಚಿಸುವ ಮೂಲಕ ಹಾಸ್ಟೆಲ್ ಗಳ ಮೇಲೆ ಹಾಗೂ ಪಿಜಿಗಳ ಮೇಲೆ ವಿಶೇಷ ಗಮನವಿಟ್ಟು,
ನೂರಾರು ಕನಸುಗಳೊಂದಿಗೆ ವಿದ್ಯಾಭ್ಯಾಸಕ್ಕಾಗಿ ತಮ್ಮ ಮಕ್ಕಳನ್ನು ನಗರಕ್ಕೆ ಕಳಿಸಿರುವ ಪೋಷಕರ ನೆಮ್ಮದಿಗೆ ಕಾರಣರಾಗಲು ಲಕ್ಷಾಂತರ ಪೋಷಕರ ಪರವಾಗಿ ಈ ಮನವಿ ಮಾಡಲಾಗುವುದು ಎಂದು ಕೆ.ಎಲ್.ಹರೀಶ್ ಬಸಾಪುರ ತಿಳಿಸಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment