ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

COVID-19 ನಂತರದ ನಾವಿನ್ಯಯುತ ಬೋಧನಾ ವಿಧಾನ ಅಳವಡಿಕೆಗೆ ಒತ್ತು: ಶಿಕ್ಷಣ ಇಲಾಖೆಯ ವಿನೂತನ ಕಾರ್ಯ

On: September 4, 2023 12:55 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:04-09-2023

ದಾವಣಗೆರೆ: ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರುಹಾಗೂ ಡಿ.ಎಸ್.ಇ.ಆರ್.ಟಿ. ನಿರ್ದೇಶಕರ ಮಾರ್ಗದರ್ಶನ ಮೇರೆಗೆ ಕೋವಿಡ್ -19 (COVID-19) ಸಂದರ್ಭದಲ್ಲಿ ಹಾಗೂ ನಂತರದ ದಿನಗಳಲ್ಲಿ ಶಿಕ್ಷಣ ಇಲಾಖೆಯ ನಾವಿನ್ಯಯುತ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವತ್ತ ಮುಂದಾಗಿದೆ.

COVID-19 ವೇಳೆ ಬಂದ ವಿದ್ಯಾಗಮ:

ಕೊರೋನ (COVID-19) ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದ ನೂತನ ಕಾರ್ಯಕ್ರಮವಾಗಿದ್ದು, ಮಕ್ಕಳ ಬಳಿ ಇರುವ ತಂತ್ರಜ್ಞಾನ ಸಾಧನಗಳನ್ನು ಆಧರಿಸಿ 3 ಗುಂಪುಗಳನ್ನಾಗಿ ವಿಂಗಡಿಸಿ, ಆ ಗುಂಪುಗಳಿಗೆ ವೇಳಾಪಟ್ಟಿ ರಚಿಸಿ, ಶಿಕ್ಷಕರನ್ನು ನಿಯೋಜನೆ ಮಾಡಲಾಗಿ, ಶಿಕ್ಷಕರು ಮಕ್ಕಳ ಬಳಿ ಇರುವ ಮೊಬೈಲ್ ಲ್ಯಾಪ್‍ಟಾಪ್ ಇತರೆ ಸಾಧನಗಳನ್ನು ಆಧರಿಸಿ ಆನ್‍ಲೈನ್ ತರಗತಿಗಳನ್ನು ನಿರ್ವಹಿಸಿದರು. ಸುರಕ್ಷಿತ ತಾಣಗಳಲ್ಲಿ ಮಕ್ಕಳ ಮನೆಗಳಿಗೆ ಹತ್ತಿರವಾಗುವಂತೆ ಕಲಿಕಾ ಕೇಂದ್ರಗಳನ್ನು ಗುರುತಿಸಿ ಮಕ್ಕಳಿಗೆ ಪಾಠ ಪ್ರವಚನ ನಿರ್ವಹಿಸಿದರು.

ಜ್ಞಾನಸಿಂಧು:

ಕೊರೊನಾ ಅವಧಿಯಲ್ಲಿ ದಾವಣಗೆರೆ ಡಯಟ್ ವತಿಯಿಂದ ಆನ್‍ಲೈನ್ ನಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿ, ಈ ಅವಧಿಯಲ್ಲಿ ಮಕ್ಕಳನ್ನು ಕಲಿಕೆಯತ್ತ ಸೆಳೆದಿಡಲು ಶಿಕ್ಷಕರಿಗೆ ಅಗತ್ಯವಾದ ತಂತ್ರಜ್ಞಾನದ ತರಬೇತಿ ನೀಡಲಾಯಿತು.
ಒಟ್ಟು 12,000 ಜನ ಶಿಕ್ಷಕರು ಇದರ ಫಲಾನುಭವಿಗಳಾಗಿದ್ದರು.

ಸಂವೇದ:

ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಿಂದ ತಯಾರಿಸಿದ ವೇಳಾಪಟ್ಟಿಯಂತೆ, ದೂರದರ್ಶನ ಆಧಾರಿತ ಕಲಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪರಿಣಿತ ಶಿಕ್ಷಕರಿಂದ ವಿಷಯವಾರು ಹಾಗೂ
ತರಗತಿವಾರು ಪಾಠಗಳನ್ನು ಬೋಧನೆ, ಟಿ.ವಿ. ವೀಕ್ಷಣೆ ಸಾಧ್ಯವಾಗದ ಮಕ್ಕಳು ರಾಜ್ಯದ ಡಿ.ಎಸ್.ಇ.ಆರ್.ಟಿ ಕಛೇರಿಯ ಜ್ಞಾನದೀವ ಯೂಟೂಬ್ ಚಾನಲ್‍ನ ವೀಕ್ಷಣೆಯ ಮೂಲಕ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಯಿತು. ಆ ಮೂಲಕ ಯಾವುದೇ ಮಗು ಕಲಿಕೆಯಿಂದ ವಂಚಿತರಾಗದಂತೆ ಕಲಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವಂತೆ ಉಸ್ತುವಾರಿ ಅಧಿಕಾರಿಗಳು ಮಾರ್ಗದರ್ಶನ ನೀಡಿದರು.

ಕಲಿಕಾ ಚೇತರಿಕೆ:

2022-23ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಿ, 2020-21 ಹಾಗೂ 2021-22ನೇ ಸಾಲಿನ ಎರಡು ಶೈಕ್ಷಣಿಕ ವರ್ಷಗಳಲ್ಲಿ ಶಾಲೆಗಳು ಔಪಚಾರಿಕವಾಗಿ ಪೂರ್ಣಾವಧಿಯವರೆಗೆ ನಡೆಯದ ಕಾರಣ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸ ಹಾಗೂ ಶೈಕ್ಷಣಿಕ ಪ್ರಗತಿಯ ಮೇಲೆ ದೀರ್ಘಕಾಲಿಕವಾದ ಪರಿಣಾಮ ಬೀರಿರುವುದನ್ನು ಹಲವು ಅಧ್ಯಯನಗಳು ದೃಢಪಡಿಸಿದವು.

ಈ ಸುದ್ದಿಯನ್ನೂ ಓದಿ: 

Davanagere: ಹೂತಿದ್ದ ಶವ ತೆಗೆದು ಅಗ್ನಿಸ್ಪರ್ಶ ಕೇಸ್, 28 ಮಂದಿ ಬಂಧನ : ಶವ ಮೇಲಕ್ಕೆತ್ತುವ ವಿಚಾರಕ್ಕೆ ಉದ್ವಿಗ್ನಗೊಂಡಿದ್ದ ನಲ್ಕುಂದ ಶಾಂತ

 

ಲಾಕ್‍ಡೌನ್ ಕಾರಣದಿಂದಾಗಿ ಶಾಲೆಗಳನ್ನು ಮುಚ್ಚಲ್ಪಟ್ಟಾಗ ವಿದ್ಯಾಗಮ, ಸಂವೇದ, ವಿಶೇಷ ಸೇತುಬಂಧ ಇತ್ಯಾದಿ. ಪರ್ಯಾಯ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂಪರ್ಕವಿಟ್ಟುಕೊಂಡು ಕಲಿಸುವ ಪ್ರಕ್ರಿಯೆಗಳು ನಡೆದವು.

SATURDAY SAMBHRAMA

ಶಾಲೆಗಳು ಪುನರಾರಂಭವಾದಾಗ ಶೈಕ್ಷಣಿಕ ಯೋಜನೆಗಳ ಮೂಲಕ ಕಲಿಸುವಿಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳಲು ಯತ್ನಿಸಲಾಗಿದೆ. ಅದೇ ರೀತಿಯಲ್ಲಿ ‘ಕಲಿಕಾಚೇತರಿಕೆ-2023’ ಕಾರ್ಯಕ್ರಮವೂ ಕೂಡ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಕಲಿಕಾ ನಮ್ಮ ಮತ್ತು ಕಲಿಕಾ ಹಿನ್ನಡೆಯನ್ನು ಸರಿದೂಗಿಸುವ ಸಲುವಾಗಿ ಜಾರಿಗೊಳಿಸಲಾಗಿತ್ತು. ಈ ಕಾರ್ಯಕ್ರಮದ ಮೂಲಕ 2022-23 ಶೈಕ್ಷಣಿಕ ವರ್ಷದಲ್ಲಿ ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಕಲಿಕಾ ನಷ್ಟವನ್ನು ಸರಿದೂಗಿಸಲು ಬೋಧನಾ ಕಲಿಕಾ ಪ್ರಕ್ರಿಯೆ ನಡೆಯಿತು. ಈ ಹಿನ್ನಲೆಯಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಮಹತ್ವದ್ದಾಗಿದೆ.

ದಾವಣಗೆರೆ ಡಯಟ್‍ನಿಂದ ಕೈಗೊಂಡ ಮತ್ತೊಂದು ವಿಶೇಷ ಕಾರ್ಯಕ್ರಮವೆಂದರೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು, ಪೋಷಕರ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಡಯಟ್‍ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರ ಮಕ್ಕಳಿಗೆ ಕರೆ ಮಾಡುವುದರ ಮೂಲಕ ಎಸ್.ಎಸ್.ಎಲ್.ಸಿ ಪರೀಕ್ಷೆ ಕುರಿತು ಆತ್ಮಸ್ಥೆರ್ಯ ತುಂಬುವುದರ ಮೂಲಕ ಪರೀಕ್ಷಾ ಭಯವನ್ನು ನಿವಾರಿಸುವ ಪ್ರಯತ್ನ ಮಾಡಲಾಯಿತು. ನಮ್ಮ ಡಯಟ್ ವತಿಯಿಂದ ಜ್ಞಾನ ಸಿಂಚನವೆಂಬ ವಿಶೇಷ ಕಾರ್ಯಕ್ರಮದ ಮೂಲಕ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರಿಗೆ, ವಿಷಯವಾರು ಸಂಪನ್ಮೂಲ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಶಿಕ್ಷಕರನ್ನು ಜ್ಞಾನ ಬಲವರ್ಧನೆ ಗೊಳಿಸಲಾಯಿತು.

ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಶಿಕ್ಷಕರ ಹಾಗೂ ಮಕ್ಕಳ ನಡುವಿನ ಕಲಿಕಾ ಸಂಪರ್ಕದ ನಿರಂತರತೆಯನ್ನು ಕಾಯ್ದುಕೊಳ್ಳುವುದರ ಮೂಲಕ ಕಲಿಕಾ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಲಾಗಿದ್ದು ಇದು ನಾವಿನ್ಯಯುತ ಕಲಿಕಾ ವಿಧಾನದಿಂದ ಸಾಧ್ಯವಾಯಿತು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment