ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದ ಆಡಳಿತಾರೂಢ ಬಿಜೆಪಿಯ ನಡೆ ಅಸಂವಿಧಾನಿಕ ಇಂತಹ ಕೆಟ್ಟ ರಾಜಕಾರಣವನ್ನು ದೇಶ ಈವರೆಗೆ ನೋಡಿರಲಿಲ್ಲ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ್ ಆರೋಪಿಸಿದರು.
ಉದ್ಯಮಿ ಗೌತಮ್ ಆದಾನಿ ಇಡೀ ದೇಶವನ್ನು ಅವರಿಸಿಕೊಳ್ಳುತ್ತಿದ್ದು, ಹಲವು ಕ್ಷೇತ್ರಗಳು ಆದಾನಿ ಹಿಡಿತಕ್ಕೆ ಸಿಲುಕುತ್ತಿವೆ. ಈ ಕುರಿತು ಬಿಜೆಪಿ ಚರ್ಚೆಗೆ ನಿರಾಕರಿಸುತ್ತಿರುವ ಮೂಲಕ ತನ್ನ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚರ್ಚೆಗೆ ಅವಕಾಶ ನೀಡದಿರುವ ಕಾರಣ ಸಂಸತ್ತಿನಲ್ಲಿ ಮೌನ ಪ್ರತಿಭಟನೆ ನಡೆಸಿದೆವು, ಕೊನೆಯ ದಿನ ಬಿಜೆಪಿಯ ಸಂಸದರು ಕೋಲನ್ನು ಹಿಡಿದು ಸಂಸತ್ತಿಗೆ ಆಗಮಿಸಿದ್ದರು.ಆಡಳಿತಾರೂಢ ಪಕ್ಷದ ದಬ್ಬಾಳಿಕೆಗೆ ಇದೊಂದು ನಿರ್ದಶನ ಎಂದರು
ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿಯೊಬ್ಬ ಜನಪ್ರತಿನಿಧಿಗೂ ಹೊಣೆಗಾರಿಗಳಿವೆ ಸಂಸದರ ಅಭಿಪ್ರಾಯಕ್ಕೆ ಮತ್ತು ಆಕ್ಷೇಪಗಳಿಗೆ ಮಾನ್ಯತೆ ನೀಡುವ ಔದಾರ್ಯವನ್ನು ಆಡಳಿತಾರೂಢ ಪಕ್ಷವೂ ಅಳವಡಿಸಿಕೊಳ್ಳಬೇಕು. ಸಂಸತ್ತಿನಲ್ಲಿ ಮಂಡನೆಯಾಗುವ ಮಸೂದೆಗಳಿಗೆ ವಿರೋಧ ಪಕ್ಷದ ಅಭಿಪ್ರಾಯಗಳನ್ನು ಪಡೆಯುತ್ತಿಲ್ಲ, ಬಿಜೆಪಿಯ ಈ ವರ್ತನೆ ಅತಿರೇಕವಾಗಿದೆ ಎಂದು ಆಕ್ರೋಶ ಹೊರಹಾಕಿದರು.