ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Costly Flower: ದುಬಾರಿ ವರಮಹಾಲಕ್ಷ್ಮೀ ಪೂಜೆ: ಗಗನಕ್ಕೇರಿದ ಹೂ, ಹಣ್ಣು, ದರ ಕೇಳಿ ಶಾಕ್ ಆಗ್ತಿರುವ ಗ್ರಾಹಕರು, ಮಹಿಳೆಯರು…!

On: August 24, 2023 1:28 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:24-08-2023

ದಾವಣಗೆರೆ: ವರಮಹಾಲಕ್ಷ್ಮೀ. ಮಹಿಳೆಯರ ನೆಚ್ಚಿನ ಹಬ್ಬ. ಈ ಹಬ್ಬಕ್ಕೆ ಹೂವು (Flower), ಹಣ್ಣು ಬೇಕೇ ಬೇಕು. ತರೇಹವಾರಿ ಹೂವುಗಳಿಂದ ಲಕ್ಷ್ಮೀ ಸಿಂಗರಿಸಲು ಹೂವು(Flower), ಹಣ್ಣು ತರಲು ಮಾರುಕಟ್ಟೆಗೆ ಬರುತ್ತಿರುವ ಗ್ರಾಹಕರು ದರ ಕೇಳಿ ಶಾಕ್ ಆಗುತ್ತಿದ್ದಾರೆ.

ಪ್ರತಿ ಹೂವಿ(Flower)ನ ದರವೂ ದುಪ್ಪಟ್ಟಾಗಿದೆ. ದರ ಕೇಳಿ ಲಕ್ಷ್ಮೀಗೆ ಈ ಬಾರಿ ದುಬಾರಿ ಪೂಜೆ ಎಂದು ಗೊಣಗುತ್ತಲೇ ಹೂವು(Flower), ಹಣ್ಣು ಖರೀದಿಸುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ದಾವಣಗೆರೆಯಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು ಸಡಗರ, ಸಂಭ್ರಮದಿಂದ ನೆರವೇರಿಸಲಾಗುತ್ತದೆ. ಹಬ್ಬಕ್ಕೆ ಬೇರೆ ಬೇರೆ ಹೂವುಗಳನ್ನು ತಂದು ಲಕ್ಷ್ಮೀ ದೇವಿ ಅಲಂಕರಿಸಿ ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಆದ್ರೆ, ಈ ವರ್ಷ ಹೂವಿ(Flower)ನ ದರ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ವರಮಹಾಲಕ್ಷ್ಮೀ ಶ್ರಾವಣ ಮಾಸದಲ್ಲಿ ಬರುವ ಫೆಸ್ಟಿವಲ್. ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ  ಹೂವು(Flower)– ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ. ದರ ಹೆಚ್ಚಳವಾದರೂ ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು.

ವರಮಹಾಲಕ್ಷ್ಮಿ ಹಬ್ಬದ ಆಚರಣೆ ನಡೆಯಲಿದ್ದು ನಗರದ ತಹಶೀಲ್ದಾರ್ ಕಚೇರಿ ಬಳಿಯ ಹೂ‌ (Flower)ಮಾರುಕಟ್ಟೆ, ಗಡಿಯಾರ ಕಂಬ, ಜಯದೇವ ವೃತ್ತ, ವಿದ್ಯಾರ್ಥಿ ಭವನ, ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆ, ವಿದ್ಯಾನಗರ ಸೇರಿದಂತೆ ಹಲವೆಡೆ ಹೂ‌ಹಣ್ಣು, ಬಾಳೆಕಂಬದ ಮಾರಾಟ ಇಂದು ಬೆಳಿಗ್ಗೆಯಿಂದಲೇ ಶುರುವಾಗಿದೆ.

ಈ ಸುದ್ದಿಯನ್ನೂ ಓದಿ: 

Bhadra Dam: ಭದ್ರಾ ಡ್ಯಾಂನಿಂದ ಅರೆನೀರಾವರಿಗೆ ಮಾತ್ರ ನೀರು: ಭತ್ತ ಮತ್ತಿತರ ಬೆಳೆ ಬೆಳೆದರೆ ಜಲಸಂಪನ್ಮೂಲ ಇಲಾಖೆ ಜವಾಬ್ದಾರಿಯಲ್ಲ ಎಂದಿರುವುದು ಯಾಕೆ..?

ವರ್ತಕರು ಹೂ(Flower)-ಹಣ್ಣಿನ ರಾಶಿ ಹಾಕಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವುಗಳೇ ಪ್ರಮುಖ ಆಕರ್ಷಣೆ. ಮನೆ-ಮನೆಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ದೇವಿಯ ಅಲಂಕಾರಕ್ಕೆ, ಮನೆಗೆ ಬಂದ ಮಹಿಳೆಯರಿಗೆ ನೀಡುವ ಬಾಗಿನಕ್ಕೆ ಹೂವುಗಳು ಬೇಕೇ ಬೇಕು. ಈ ಹಿನ್ನೆಲೆಯಲ್ಲಿ ವಾರದಿಂದಲೇ ಹೂವಿನ (Flower) ಬೆಲೆ ಏರಿಕೆ ಆಗುತ್ತಿದ್ದು, ಹೂಗಳ ಬೆಲೆ  ದುಪ್ಪಟ್ಟಾಗಿದೆ.

ಹೂವನ್ನು ಕೆ. ಜಿ. ಲೆಕ್ಕದಲ್ಲಿ ಕೇಳಿದರೆ ತಲೆಗಿರುವುದು ಗ್ಯಾರಂಟಿ. 750 ರೂಪಾಯಿ ಇದ್ದ ಕೆಜಿಗೆ ಗುಲಾಬಿ ಹೂವು ಒಂದೂವರೆ ಸಾವಿರ ರೂಪಾಯಿಯವರೆಗೆ ಏರಿಕೆಯಾಗಿದೆ. ಬಹುತೇಕ ಎಲ್ಲಾ ಹೂವುಗಳ ದರ ಎರಡು ಪಟ್ಟು ಹೆಚ್ಚಾಗಿದೆ. ಕೆ.ಜಿ. ಲೆಕ್ಕದಲ್ಲಿ ಖರೀದಿಗೆ ಬಂದಂಥವರು ಗ್ರಾಂ ಲೆಕ್ಕದಲ್ಲಿ ತೂಕ ಮಾಡಿಸಿಕೊಂಡು ತೆಗೆದುಕೊಂಡು ಹೋಗಿದ್ದು ಕಂಡು ಬಂತು.

ಬೆಲೆ ಏರಿಕೆಯ ಬಿಸಿ:

ಅತ್ಯಂತ ಸಡಗರ-ಸಂಭ್ರಮದಿಂದ ಆಚರಣೆ ಮಾಡುವ ಹಬ್ಬಕ್ಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯು ದೊಡ್ಡ ತಡೆಯಾಗಿ ಪರಿಣಮಿಸಿದೆ.‌ಬೆಲೆ ಹೆಚ್ಚಳದ ಹೊರತಾಗಿಯೂ ಜನರು ಹಬ್ಬದ ತಯಾರಿಯಲ್ಲಿ ನಿರತರಾಗಿದ್ದಾರೆ. ತರಕಾರಿ, ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ.

1 ಕೆಜಿ ಟೊಮೊಟೊ ಬೆಲೆ 40 ರಿಂದ 50 ರೂ., ಬೀನ್ಸ್ 80 ರೂ., ಕ್ಯಾರೆಟ್ 80 ರೂ. ಇದೆ. ಹಾಗೆಯೇ ಕೊತಂಬರಿ ಮತ್ತಿತರ ಸೊಪ್ಪುಗಳ ಬೆಲೆಯೂ ಹೆಚ್ಚಾಗಿದೆ‌. ಉಳಿದಂತೆ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಹಬ್ಬಕ್ಕೆ ಅಗತ್ಯವಾದ ವಸ್ತುಗಳ ಮಾರಾಟ ಜೋರಾಗಿದೆ. ಮಾವಿನ ಸೊಪ್ಪು, ಹೂವು(Flower), ಬಾಳೆಕಂದು, ಬಾಳೆ ಎಲೆ, ಹಣ್ಣುಹಂಪಲು, ಪೂಜೆಗೆ ಸಂಬಂಧಿಸಿದ ವಸ್ತುಗಳ ಮಾರಾಟವೂ ಹೆಚ್ಚಾಗಿ‌ ಕಂಡುಬರುತ್ತಿದೆ.

ನಾಲ್ಕೈದು ದಿನಗಳ ಹಿಂದೆ ಪ್ರತಿ ಕೆಜಿಗೆ ಬಿಡಿ ಹೂವು (Flower) 800 ರೂಪಾಯಿಗೆ ಸಿಗುತಿತ್ತು. ಈಗ 1600 ರೂಪಾಯಿ ದಾಟಿದೆ. ಲಕ್ಷ್ಮೀ ದೇವಿಯ ಬಹುಇಷ್ಟದ ಕಮಲದ ಹೂ ಜೋಡಿಗೆ 200 ರೂಪಾಯಿ ಇತ್ತು. ಚೆಂಡು ಹೂ ಮಾರಿಗೆ 60 ರೂ, ಬಿಡಿ ಗುಲಾಬಿ ಕಾಲು ಕೆಜಿಗೆ 200 ರಿಂದ 250 ರೂಪಾಯಿ ಇತ್ತು. ಎಲ್ಲಾ ಹೂವುಗಳ ದರವೂ ಹೆಚ್ಚಾಗಿದೆ. ಸೇವಂತಿಗೆ ಸೇರಿದಂತೆ ಎಲ್ಲಾ ಹೂವುಗಳು ಒಂದು ಮಾರು ನೂರು ರೂಪಾಯಿ ದಾಟಿದೆ. ಸೇವಂತಿಗೆ ಹೂವಂತೂ ಶುಕ್ರವಾರಕ್ಕೆ ಮತ್ತಷ್ಟು ದರ ಹೆಚ್ಚಾಗುವ ಸಾಧ್ಯತೆ ಇದೆ.

ಹಣ್ಣು ದುಬಾರಿ:

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಹಣ್ಣುಗಳ ಬೆಲೆಯೂ ಹೆಚ್ಚಾಗಿದೆ. ಅದರಲ್ಲೂ ಏಲಕ್ಕಿ ಬಾಳೆ ಹಣ್ಣು ಪ್ರತಿ ಕೆ.ಜಿ.ಗೆ 100 ರೂಪಾಯಿಯಿಂದ 130ರವರೆಗೆ ಏರಿದೆ. ಸೇಬು, ದಾಳಿಂಬೆ, ಸೀಬೆ ಮೊದಲಾದ ಹಣ್ಣುಗಳ ಬೆಲೆಯೂ‌ ಹೆಚ್ಚಾಗಿದೆ.
ಪ್ರತಿ ಕೆ. ಜಿ. ಸೇಬಿಗೆ 140 ರೂಪಾಯಿಯಿಂದ 170 ರೂಪಾಯಿ, ದಾಳಿಂಬೆ 80 ರಿಂದ 120 ರೂಪಾಯಿ, ಸೀಬೆ ಹಣ್ಣು 120 ರಿಂದ 150ರವರೆಗೆ ಏರಿದೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment