ಫರೀದಾಬಾದ್: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಹರಿಯಾಣದ ಫರೀದಾಬಾದ್ನಲ್ಲಿ ‘ಇಂಡಿಯಾ’ (INDIA) ಒಕ್ಕೂಟ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯ ವೇಳೆ ಕಾಂಗ್ರೆಸ್ನ ಇಬ್ಬರು ಮಹಿಳಾ ನಾಯಕಿಯರು ಪರಸ್ಪರ ಕೆನ್ನೆಗೆ ಬಾರಿಸಿಕೊಂಡು ರಂಪಾಟ ನಡೆಸಿದ್ದಾರೆ.
ವಿಡಿಯೋ ವೀಕ್ಷಿಸಿ:
Faridabad, Haryana: A scuffle breaks out between Congress leaders Parag Sharma and Gajna Lamba during a party protest. The dispute reportedly begins after Sharma asks Lamba to move back, leading to an argument that escalates into both allegedly slapping each other. Other Congress… pic.twitter.com/WJEWPC5uKw
— IANS (@ians_india) October 8, 2026
ಚುನಾವಣಾ ಅಕ್ರಮ ಹಾಗೂ “ಮತ ಕಳವು” ಆರೋಪಿಸಿ ದೆಹಲಿ-ಎನ್ಸಿಆರ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಈ ಪ್ರತಿಭಟನೆಯಲ್ಲಿ ಬಲ್ಲಬ್ಗಢ ವಿಧಾನಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಅಭ್ಯರ್ಥಿ ಪರಾಗ್ ಶರ್ಮಾ ಹಾಗೂ ಕಾಂಗ್ರೆಸ್ ನಾಯಕಿ ಗಜ್ನಾ ಲಂಬಾ ನಡುವೆ ಈ ಘಟನೆ ನಡೆದಿದೆ.
ಹಳೇ ಫರೀದಾಬಾದ್ನ ಚಾಂದಿ ವಾಲಿ ಧರ್ಮಶಾಲೆಯಿಂದ ಪಠವಾರಿ ಮಂದಿರದವರೆಗೆ ಹರಿಯಾಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪರ್ಲ್ ಚೌಧರಿ ಹಾಗೂ ಜಿಲ್ಲಾಧ್ಯಕ್ಷ ಬಲ್ಜಿತ್ ಕೌಶಿಕ್ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಯುತ್ತಿತ್ತು. ಬ್ಯಾನರ್ ಹಿಡಿದು ಸಾಗುತ್ತಿದ್ದಾಗ ಮುಂದೆ ಹೋಗುವ ವಿಚಾರ ಹಾಗೂ ಫೋಟೋ ತೆಗೆಯುವ ಜಾಗದ ಗೊಂದಲಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ತೀವ್ರ ವಾಕ್ಸಮರ ಶುರುವಾಗಿದೆ.
ಮಾತಿಗೆ ಮಾತು ಬೆಳೆದು ಪರಾಗ್ ಶರ್ಮಾ ಅವರು ಗಜ್ನಾ ಲಂಬಾ ಅವರ ಕೆನ್ನೆಗೆ ಹೊಡೆದಿದ್ದು, ತಕ್ಷಣವೇ ಲಂಬಾ ಕೂಡ ಪ್ರತ್ಯುತ್ತರವಾಗಿ ಕೆನ್ನೆಗೆ ಬಾರಿಸಿದ್ದಾರೆ. ಸ್ಥಳದಲ್ಲಿದ್ದ ಕಾಂಗ್ರೆಸ್ ನಾಯಕರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು.
ಪರಸ್ಪರ ಪೊಲೀಸ್ ದೂರು: ಘಟನೆಗೆ ಸಂಬಂಧಿಸಿದಂತೆ ಗಜ್ನಾ ಲಂಬಾ ಹಾಗೂ ಪರಾಗ್ ಶರ್ಮಾ ಇಬ್ಬರೂ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಒಬ್ಬರ ವಿರುದ್ಧ ಒಬ್ಬರು ದೂರು ದಾಖಲಿಸಿದ್ದಾರೆ.
ಗಜ್ನಾ ಲಂಬಾ ಆರೋಪ: ಇದೊಂದು ಪೂರ್ವನಿಯೋಜಿತ ಸಂಚು ಎಂದು ಆರೋಪಿಸಿರುವ ಲಂಬಾ, ಪರಾಗ್ ಶರ್ಮಾ ತಮ್ಮ ವಿರುದ್ಧ ಜಾತಿ ನಿಂದನೆ ಪದ ಬಳಸಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದಾರೆ.
ಪೊಲೀಸರ ಪ್ರತಿಕ್ರಿಯೆ: ಹುದ್ದೆ, ಸ್ಥಾನಮಾನ ಹಾಗೂ ಮೆರವಣಿಗೆಯಲ್ಲಿ ಮುಂದೆ ನಿಲ್ಲುವ ಜಾಗದ ವಿಚಾರಕ್ಕಾಗಿಯೇ ಈ ಗಲಾಟೆ ಆರಂಭವಾಗಿದೆ ಎಂದು ಎಸ್ಎಚ್ಒ ವಿಷ್ಣು ಮಿತ್ತರ್ ಸ್ಪಷ್ಟಪಡಿಸಿದ್ದಾರೆ.
ಪೊಲೀಸರ ಹೇಳಿಕೆ:
Faridabad, Haryana: SHO Vishnu Mittar says, "Separate complaints have been received from two women politicians—one is Gajna Lamba and the other is Parag Sharma. A dispute broke out between them during a rally over taking down a photo, which led to verbal abuse and physical… pic.twitter.com/c9lMcUhhSG
— IANS (@ians_india) October 8, 2026
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಪ್ರತಿಭಟನಾ ಮೆರವಣಿಗೆಯ ಹಾದಿಯಲ್ಲೇ ಕಾಂಗ್ರೆಸ್ ನಾಯಕಿಯರು ಬೀದಿಯಲ್ಲಿ ಗಲಾಟೆ ಮಾಡಿಕೊಂಡಿರುವುದು ಪಕ್ಷಕ್ಕೆ ತೀವ್ರ ಮುಜುಗರ ತಂದಿಟ್ಟಿದೆ.





Leave a comment