Home ಕ್ರೈಂ ನ್ಯೂಸ್ ಕೊಲೆ ಆರೋಪಿ ಕೈದಿಗಳಿಂದ ಮನೆ ಕೆಲಸ ಮಾಡಿಸಿದ್ದ ಜೈಲರ್ ಅರೆಸ್ಟ್: ತಾನು ಆಡಳಿತ ನಡೆಸಿದ್ದ ಜೈಲಿನಲ್ಲೇ ದಿವ್ಯಾ ಚೌಧರಿ ಕೈದಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕೊಲೆ ಆರೋಪಿ ಕೈದಿಗಳಿಂದ ಮನೆ ಕೆಲಸ ಮಾಡಿಸಿದ್ದ ಜೈಲರ್ ಅರೆಸ್ಟ್: ತಾನು ಆಡಳಿತ ನಡೆಸಿದ್ದ ಜೈಲಿನಲ್ಲೇ ದಿವ್ಯಾ ಚೌಧರಿ ಕೈದಿ!

Share
ಕೈದಿ
Share

ಜೈಪುರ / ಅಜ್ಮೇರ್: ರಾಜಸ್ಥಾನದ ಅಜ್ಮೇರ್ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಮಹಿಳಾ ಕೈದಿಗಳನ್ನು ಕಾನೂನು ಬಾಹಿರವಾಗಿ ತನ್ನ ಖಾಸಗಿ ಫ್ಲಾಟ್ ಸ್ವಚ್ಛಗೊಳಿಸುವ ಕೆಲಸಕ್ಕೆ ಕರೆದೊಯ್ದು, ಪ್ರಕರಣ ದಾಖಲಾದ ಬಳಿಕ ಸುಮಾರು ಎರಡು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಅಮಾನತುಗೊಂಡ ಜೈಲರ್ ದಿವ್ಯಾ ಚೌಧರಿ ಅವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ವಿಶೇಷವೆಂದರೆ, ಖಾಸಗಿ ಫ್ಲಾಟ್‌ನಲ್ಲಿ ಗೃಹಕೃತ್ಯದ ಕೆಲಸಕ್ಕೆ ಬಳಕೆಯಾದ ಈ ಇಬ್ಬರೂ ಮಹಿಳಾ ಕೈದಿಗಳು (ಕಿರಣ್ ಮತ್ತು ಸನಾ) ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಗಂಭೀರ ಅಪರಾಧಿಗಳಾಗಿದ್ದಾರೆ. ಕೋರ್ಟ್‌ನಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಹಾಗೂ ಜೈಲಿನ ಅಧಿಕೃತ ರಿಜಿಸ್ಟರ್‌ಗಳಲ್ಲಿ ಯಾವುದೇ ನಮೂದು ಮಾಡದೆ, ಜುಲೈ 12ರಂದು ಖಾಸಗಿ ಕಾರಿನಲ್ಲಿ ಇಬ್ಬರನ್ನೂ ಅಜ್ಮೇರ್‌ನ ‘ARG ಸಿಟಿ’ಯಲ್ಲಿರುವ ತಮ್ಮ ಸ್ವಂತ ಫ್ಲಾಟ್‌ಗೆ ಜೈಲರ್ ದಿವ್ಯಾ ಚೌಧರಿ ಕರೆದೊಯ್ದಿದ್ದರು.

ಈ ವೇಳೆ ಜೈಲಿನ ಮುಖ್ಯ ದ್ವಾರದಲ್ಲಿದ್ದ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಇದನ್ನು ತಡೆದು ಆಕ್ಷೇಪ ವ್ಯಕ್ತಪಡಿಸಿದಾಗ, ಜೈಲರ್ ದಿವ್ಯಾ ಚೌಧರಿ ಮತ್ತು ಜೈಲು ಗಾರ್ಡ್ ಸೋನಿಯಾ ಚೌಧರಿ ಅವರು ಸಿಬ್ಬಂದಿಗೆ ಬೆದರಿಕೆ ಹಾಕಿ ಕೈದಿಗಳನ್ನು ಅಕ್ರಮವಾಗಿ ಹೊರಗೆ ಕರೆದೊಯ್ದಿದ್ದರು. ನಂತರ ಘಟನೆ ಮೇಲಾಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೈದಿಗಳನ್ನು ವಾಪಸ್ ಜೈಲಿಗೆ ಕರೆತರಲಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಆಗಸ್ಟ್ 5ರಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಜೈಲರ್ ದಿವ್ಯಾ ಚೌಧರಿ ಹಾಗೂ ಜೈಲು ಗಾರ್ಡ್ ಸೋನಿಯಾ ಚೌಧರಿ ಅವರನ್ನು ಸೇವೆಯಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿತ್ತು. ಅಮಾನತಾದ ಬಳಿಕ ಇಬ್ಬರೂ ಇಲಾಖಾ ಕೇಂದ್ರಗಳಲ್ಲಿ ವರದಿ ಮಾಡಿಕೊಳ್ಳದೆ ತಲೆಮರೆಸಿಕೊಂಡಿದ್ದರು.

ಅಜ್ಮೇರ್ ಎಸ್‌ಪಿ ನೇತೃತ್ವದ ಕೌಂಟರ್ ಟಾಸ್ಕ್ ಫೋರ್ಸ್ ಮತ್ತು ತಾಂತ್ರಿಕ ಸಿಬ್ಬಂದಿ ಮೊಬೈಲ್ ಲೊಕೇಶನ್ ಹಾಗೂ ಸಿವಿಲ್ ನೆಟ್‌ವರ್ಕ್ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ, ಅಕ್ಟೋಬರ್ 6 ರಂದು ಕೋಟಾದ ಬಾಡಿಗೆ ಫ್ಲಾಟ್ ಒಂದರಲ್ಲಿದ್ದ ದಿವ್ಯಾ ಚೌಧರಿ ಅವರನ್ನು ಸೆರೆಹಿಡಿದಿದ್ದಾರೆ. ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಪರಿಣಾಮವಾಗಿ, ತಾನು ಹಿಂದೆ ಅಧಿಕಾರ ಚಲಾಯಿಸಿ ಮೇಲ್ವಿಚಾರಣೆ ನಡೆಸುತ್ತಿದ್ದ ಅದೇ ಅಜ್ಮೇರ್ ಜೈಲಿಗೆ ದಿವ್ಯಾ ಚೌಧರಿ ಇದೀಗ ವಿಚಾರಣಾಧೀನ ಕೈದಿಯಾಗಿ ಪ್ರವೇಶಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಜೈಲು ಗಾರ್ಡ್ ಸೋನಿಯಾ ಚೌಧರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಡಿಎಸ್‌ಪಿ (ಉತ್ತರ) ಶಿವಂ ಜೋಶಿ ತಿಳಿಸಿದ್ದಾರೆ.

ಅಧಿಕಾರ ದುರುಪಯೋಗ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೊಲೆ ಆರೋಪಿಗಳನ್ನು ಖಾಸಗಿ ವಾಹನದಲ್ಲಿ ಕರೆದೊಯ್ದು ಮನೆ ಕೆಲಸಕ್ಕೆ ಬಳಸಿಕೊಂಡ ಜೈಲರ್.

ತಡೆದ ಸಿಬ್ಬಂದಿಗೆ ಬೆದರಿಕೆ: ಜೈಲಿನ ಮುಖ್ಯ ದ್ವಾರದಲ್ಲಿ ತಡೆದ ಸಿಬ್ಬಂದಿ ವಿರುದ್ಧವೇ ದೌರ್ಜನ್ಯ ಎಸಗಿ ಕೈದಿಗಳನ್ನು ಹೊರಗೆ ಕರೆದೊಯ್ದಿದ್ದ ದಿವ್ಯಾ ಚೌಧರಿ ಮತ್ತು ಸೋನಿಯಾ ಚೌಧರಿ.

ಎರಡು ತಿಂಗಳ ಬಳಿಕ ಸಿಕ್ಕಿಬಿದ್ದ ಆರೋಪಿ: ಅಮಾನತಾದ ಬಳಿಕ ತಲೆಮರೆಸಿಕೊಂಡಿದ್ದ ದಿವ್ಯಾ ಅವರನ್ನು ಮೊಬೈಲ್ ಲೊಕೇಶನ್ ಆಧಾರದ ಮೇಲೆ ಕೋಟಾದಲ್ಲಿ ಅಜ್ಮೇರ್ ಪೊಲೀಸರು ಬಂಧಿಸಿದ್ದಾರೆ.

ಅದೇ ಜೈಲಿನಲ್ಲಿ ಕೈದಿ: ಜೈಲರ್ ಆಗಿ ಮೆರೆದಿದ್ದ ಸ್ಥಳದಲ್ಲೇ ಇದೀಗ ಕೈದಿಯಾಗಿ ದಿನ ದೂಡುವಂತಾದ ದುಸ್ಥಿತಿ.

Share

Leave a comment

Leave a Reply

Your email address will not be published. Required fields are marked *

Related Articles