SUDDIKSHANA KANNADA NEWS/ DAVANAGERE/ DATE:30-07-2023
ದಾವಣಗೆರೆ: ಲೋಕಸಭೆ ಚುನಾವಣೆಗೆ ಇನ್ನು ಒಂದು ವರ್ಷ ಇದೆ. ಆದ್ರೆ, ಕಾಂಗ್ರೆಸ್ (Congress)ನಲ್ಲಿ ಕೆಲವರು ತಾನೇ ಕಾಂಗ್ರೆಸ್ (Congress) ಪಕ್ಷದ ಟಿಕೆಟ್ ಆಕಾಂಕ್ಷಿ, ಅಭ್ಯರ್ಥಿ ಎಂದೇಳಿಕೊಂಡು ಓಡಾಡುತ್ತಿದ್ದರಂತೆ. ಹಾಗಂತ ಜಿಲ್ಲಾ ಕಾಂಗ್ರೆಸ್ (Congress) ಸಮಿತಿಯೇ ಹೇಳಿದೆ. ಮಾತ್ರವಲ್ಲ ಎಚ್ಚರಿಕೆಯನ್ನೂ ಕೊಟ್ಟಿದೆ.
ಯಾರೂ ಸಹ ಆಕಾಂಕ್ಷಿ, ಅಭ್ಯರ್ಥಿ ಎಂದು ಹೇಳಿಕೊಂಡು ಜಿಲ್ಲೆಯಲ್ಲಿ ಪ್ರಚಾರ ಮಾಡುವಂತಿಲ್ಲ. ಕಾಂಗ್ರೆಸ್ (Congress) ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ (Congress) ಕೇಂದ್ರ ವರಿಷ್ಠರು ಹಾಗೂ ರಾಜ್ಯ ನಾಯಕರು ನಿರ್ಧರಿಸುತ್ತಾರೆ. ಕೆಲವರು ಈಗಾಗಲೇ ಸಭೆ ನಡೆಸಿದ್ದಾರಂತೆ. ಮಾತ್ರವಲ್ಲ, ಕೆಲ ಮುಖಂಡರು ಪಾಲ್ಗೊಂಡಿದ್ದಾರಂತೆ. ಹಾಗಾದರೆ ಯಾರು ಎನ್ನುವುದು ಮಾತ್ರ ನಿಗೂಢ. ಯಾರ ಹೆಸರು ಪ್ರಸ್ತಾಪಿಸದೇ ಸೂಚನೆ ನೀಡುವಂತೆ ವಾರ್ನಿಂಗ್ ಕೊಡಲಾಗಿದೆ.
ಈ ಸುದ್ದಿಯನ್ನೂ ಓದಿ:
Water: ಭದ್ರಾ ನಾಲೆಗಳಿಗೆ ನೀರು ಹರಿಸಲು ಕಾಡಾ ಸಭೆ ಯಾವಾಗ..? ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಕೊಟ್ಟಿರುವ ಸೂಚನೆ ಏನು..?
ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿರುವವರು ಯಾರು ಎಂಬ ಬಗ್ಗೆಯೂ ಉಲ್ಲೇಖ ಇಲ್ಲ. ಯಾರೂ ಸಹ ಜಿಲ್ಲಾ ಕಾಂಗ್ರೆಸ್ (Congress) ಸಮಿತಿಯ ಪೂರ್ವಾನುಮತಿ ಪಡೆಯದೇ ಸಭೆ ನಡೆಸಬೇಡಿ ಎಂದು ಸೂಚನೆ ಕೊಡಲಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಕೆಲವರು ತಾವೇ ಮುಂದಿನ ಲೋಕಸಭಾ ಚುನಾವಣೆಯ ಪಕ್ಷದ ಅಭ್ಯರ್ಥಿ, ಆಕಾಂಕ್ಷಿ ಎಂದು ಹೇಳುತ್ತಾ ಸುತ್ತಾಡುತ್ತಿದ್ದಾರೆ. ಇಲ್ಲಿಯವರೆಗೂ ಪಕ್ಷದ ಯಾವುದೇ ಹೋರಾಟಗಳಲ್ಲಿ ಭಾಗವಹಿಸದೇ, ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸದೇ, ಪಕ್ಷ ಸಂಘಟನೆಯಲ್ಲಿ ತೊಡಗದೆ ಇರುವಂತಹ ವ್ಯಕ್ತಿಗಳೇ ಸಭೆ ನಡೆಸುತ್ತಿದ್ದಾರೆ, ಇಂತಹ ಸಭೆಗಳು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿವೆ ಎಂದು ಕಾರ್ಯಕರ್ತರಿಂದ ದೂರುಗಳು ಬಂದಿವೆ ಎಂದು ಕಾಂಗ್ರೆಸ್ (Congress) ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರ ಶಿಫಾರಸ್ಸಿನಂತೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪಕ್ಷದ ಹೈಕಮಾಂಡ್ ಅಭ್ಯರ್ಥಿಯನ್ನು ಘೋಷಿಸಲಿದ್ದು, ಇಲ್ಲಿಯವರೆಗೂ ಆ ರೀತಿಯ ಯಾವುದೇ ಬೆಳವಣಿಗೆಗಳು
ನಡೆದಿರುವುದಿಲ್ಲ. ಆದ್ದರಿಂದ ಜಿಲ್ಲಾ ಸಮಿತಿಯ ಸೂಚನೆ ಇರದೇ ಈ ರೀತಿಯ ಸಭೆಗಳನ್ನು ನಡೆಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇಂತಹ ಸಭೆಗಳಿಗೆ ಬ್ಲಾಕ್ ಅಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರು, ಪಕ್ಷದ ಚುನಾಯಿತ ಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರು ಭಾಗವಹಿಸುವುದು ಸರಿಯಲ್ಲ. ಜಿಲ್ಲಾ ಸಮಿತಿಯ ಗಮನಕ್ಕೆ ತರದೇ ಇಂತಹ ಸಭೆಗಳನ್ನು
ನಡೆಸುವುದು ಹಾಗೂ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುವುದು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಲಾಗುವುದು. ಜಿಲ್ಲಾಧ್ಯಕ್ಷ ಹೆಚ್.ಬಿ ಮಂಜಪ್ಪನವರ ಸೂಚನೆಯಂತೆ ತಮ್ಮಗಳ ಗಮನಕ್ಕೆ
ಈ ಮಾಹಿತಿಯನ್ನು ತರಲಾಗುತ್ತಿದೆ ಎಂದು ದಿನೇಶ್ ಕೆ. ಶೆಟ್ಟಿ ಅವರು, ಬ್ಲಾಕ್ ಅಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರು, ಪಕ್ಷದ ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲೆಯ ಪಕ್ಷದ ಮುಖಂಡರಿಗೆ ಹೇಳಿದ್ದಾರೆ.