SUDDIKSHANA KANNADA NEWS/ DAVANAGERE/ DATE:24-08-2023
ದಾವಣಗೆರೆ: ಜಾಗತಿಕ ಇತಿಹಾಸದಲ್ಲಿ ತನ್ನ ಅಪ್ರತಿಮ ಸಾಧನೆ ಮೆರೆದು ಚಂದ್ರನ ದಕ್ಷಿಣ ಭಾಗದಲ್ಲಿ ತನ್ನ ಹೆಜ್ಜೆಯೂರಿದ ತ್ರಿವಿಕ್ರಮ ಲ್ಯಾಂಡರ್‌ಗೆ ಮತ್ತು ಇದಕ್ಕೆ ಕಾರಣೀಭೂತರಾದ ಇಸ್ರೋ (ISRO)ದ ಎಲ್ಲ ವಿಜ್ಞಾನಿಗಳಿಗೆ ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮಕ್ಕಳು ಹರ್ಷೋದ್ಗಾರಗಳಿಂದ ಅಭಿನಂದಿಸಿದರು.
ರಾಕೆಟ್‌ಗಳ ಮತ್ತು ವಿಕ್ರಮ ಲ್ಯಾಂಡರ್‌ನ ಬೃಹತ್ ಚಿತ್ರಗಳನ್ನು ಹಿಡಿದು ಸಂಭ್ರಮಿಸಿದರು. ತ್ರಿವರ್ಣ ಧ್ವಜಗಳನ್ನು ಹಾರಾಡಿಸಿ ತಮ್ಮ ಸಂತೋಷ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ:
Costly Flower: ದುಬಾರಿ ವರಮಹಾಲಕ್ಷ್ಮೀ ಪೂಜೆ: ಗಗನಕ್ಕೇರಿದ ಹೂ, ಹಣ್ಣು, ದರ ಕೇಳಿ ಶಾಕ್ ಆಗ್ತಿರುವ ಗ್ರಾಹಕರು, ಮಹಿಳೆಯರು…!
ಶಿಕ್ಷಕರು, ಆಡಳಿತ ಮಂಡಳಿಯ ಡಾ. ಜಯಂತ್, ಕಾರ್ಯದರ್ಶಿ ಹೇಮಂತ್ ಈ ಕ್ಷಣಗಳಿಗೆ ಸಾಕ್ಷಿಯಾದರು. ಹಿರಿಯ ವಿದ್ಯಾರ್ಥಿಗಳಾದ ರಾಮ ಮನೋಹರ, ಪ್ರವೀಣ ಮುಂಡಾಸದ ಅವರು ಈ ಅಭಿನಂದನಾ ಕ್ಷಣಗಳನ್ನು ಕಣ್ತುಂಬಿಸಿಕೊಂಡರು. 9ನೇ ತರಗತಿ ವಿದ್ಯಾರ್ಥಿನಿ ಮಹಾಲಕ್ಷ್ಮಿ ಮತ್ತು ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ರವರು ಚಂದ್ರಯಾನದ ಯಶಸ್ಸಿನ ಹಿಂದಿರುವ ಜಾಣ್ಮೆ, ಶ್ರಮ, ಶ್ರದ್ಧೆ, ಐಕ್ಯತೆಯನ್ನು ಶ್ಲಾಘಿಸುತ್ತಾ ಭಾರತದ ಈ ಸಾಧನೆ ಅವಿಸ್ಮರಣೀಯ ಎಂದರು.
ಶಾಸಕರ ಅಭಿನಂದನೆ:
ಚಂದ್ರನ ಅಂಗಳದಲ್ಲಿ ವಿಕ್ರಾಮ್ ಲ್ಯಾಂಡರ್‌ನ್ನು ಯಶಸ್ವಿಯಾಗಿ ಇಳಿಸಿ ಕೋಟ್ಯಂತರ ಭಾರತೀಯರ ಕನಸು ನನಸು ಮಾಡಿದ, ಭಾರತೀಯರ ಪ್ರಾರ್ಥನೆ ಈಡೇರಿಸಿದ ಹಾಗೂ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಇಸ್ರೋ (ISRO) ವಿಜ್ಞಾನಿಗಳಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ರೀತಿಯಾಗಿ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಭಾರತವನ್ನು ವಿಶ್ವ ಮಟ್ಟದಲ್ಲಿ ಮುಂಚೂಣಿ ರಾಷ್ಟ್ರವನ್ನಾಗಿ ಮಾಡುವಂತೆ ವಿಜ್ಞಾನಿಗಳಿಗೆ ಶುಭ ಹಾರೈಸಿದ್ದಾರೆ.
ಮೇರಾ ಮಿಟ್ಟಿ-ಮೇರಾ ದೇಶ್‌ಗೆ ಕಳಸ ಸಮರ್ಪಣೆ:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀಸಿದ್ದಗಂಗಾ ಸಂಸ್ಥೆಯ ವತಿಯಿಂದ ಜಿಲ್ಲೆಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಮೇರಾ ಮಿಟ್ಟಿ, ಮೇರಾದೇಶ್ ಎಂಬ ಮಹಾನ್ ಕಾರ್ಯಕ್ಕೆ ಪಂಚ ಕಳಸಗಳಲ್ಲಿ ಶಾಲೆಯ
ಆವರಣದ ಪವಿತ್ರ ಮಣ್ಣು ತುಂಬಿ ಕಳಸಗಳನ್ನು ನೀಡಲಾಯಿತು.
ಕಾರ್ಯಕಾರಿ ಸಮಿತಿ ಚೇರ್ಮನ್ ಜಸ್ಟಿನ್ ಡಿ ಸೌಜ, ಕಾರ್ಯದರ್ಶಿ ಮಹೇಶ್ ಎಂ.ಸಿ ಮತ್ತು ಎಲ್. ಟಿ. ಶಶಿಕಲಾ ಇವರು ಸಿದ್ಧಗಂಗಾ ಗೈಡ್ಸ್‌ನ ಹರ್ಷಿತ, ಬೀಬಿ ಜೈನಾಬ್, ಮಾನಸ, ಶ್ರೇಯಾ, ಜೀವಿಕಾ ಅವರಿಗೆ ಕಳಸಗಳನ್ನು ವಿತರಿಸಿ, ಜಿಲ್ಲಾ ಸಂಸ್ಥೆಗೆ ತಲುಪಿಸಲು ಗೈಡ್ಸ್ ಮಕ್ಕಳಿಗೆ ಹೇಳಿದರು.
ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಚಿಗಟೇರಿಯವರಿಗೆ ಸಿದ್ಧಗಂಗಾ ಗೈಡ್ಸ್‌ನವರು ಈ ಕಳಸಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ರತ್ನ ಎಂ., ಜಂಟಿಕಾರ್ಯದರ್ಶಿ ಸುಖವಾಣಿ ಹಾಗೂ ನೀಲಮ್ಮ ಉಪಸ್ಥಿತರಿದ್ದರು.