ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

College: ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ವಿಡಿಯೋ ವೈರಲ್: ನೊಂದು ನೇಣಿಗೆ ಶರಣಾಗಿ ಸಾವಿಗೆ ಶರಣಾದ ಪ್ರೇಮಿಗಳು..!

On: August 11, 2023 2:14 PM
Follow Us:
Crime
---Advertisement---

SUDDIKSHANA KANNADA NEWS/ DAVANAGERE/ DATE:29-07-2023

ದಾವಣಗೆರೆ: ಪದವಿ ಪೂರ್ವ ಕಾಲೇಜಿ(College) ನ ಕಟ್ಟಡವೊಂದರಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯ ಸರಸ -ಸಲ್ಲಾಪದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ನಡೆದಿದೆ.

ಜಗಳೂರು ತಾಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿ ಹಾಗೂ ದಾವಣಗೆರೆ ಮೂಲದ ವಿದ್ಯಾರ್ಥಿ ಸಾವಿಗೆ ಶರಣಾದ ಜೋಡಿ. ಸರ್ಕಾರದ ಪದವಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಬ್ಬರು ಸರಸ ನಡೆಸಿದ್ದ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿತ್ತು. ಈ ವಿಡಿಯೋ ಗ್ರಾಮ ಹಾಗೂ ಕಾಲೇಜಿನ ಯುವಕ, ಯುವತಿಯರ ವ್ಯಾಟ್ಸಪ್ ಗ್ರೂಪ್ ನಲ್ಲಿ ಹರಿದಾಡಿತ್ತು. ಈ ವಿಚಾರ ಎರಡೂ ಮನೆಯವರಿಗೆ ಗೊತ್ತಾಗಿತ್ತು. ಮಾತ್ರವಲ್ಲ, ಮುಜುಗರ ಅನುಭವಿಸಿದ್ದ ವಿದ್ಯಾರ್ಥಿಗಳಿಬ್ಬರ ಕುಟುಂಬದವರು ಶಾಕ್ ಆಗಿದ್ದರಲ್ಲದೇ, ಮಾನ, ಮರ್ಯಾದೆ ಹೋಯ್ತಲ್ಲ ಎಂಬ ಕೊರಗಿನಲ್ಲಿದ್ದರು.

ಈ ಸುದ್ದಿಯನ್ನೂ ಓದಿ: 

Davanagere: ರಸ್ತೆಯಲ್ಲಿ ಹೋಗೋರಿಗೆ ಬೀಳ್ತಿತ್ತು ಚಟೀರ್, ಪಟೀರ್: 30ಕ್ಕೂ ಹೆಚ್ಚು ಜನರಿಗೆ ಯಾಕ್ ಬಿತ್ತು ಹೊಡ್ತಾ…. ಕೊನೆಗೇನಾಯ್ತು ಗೊತ್ತಾ…?

ಆದ್ರೆ, ವಿಡಿಯೋದಲ್ಲಿದ್ದ ವಿದ್ಯಾರ್ಥಿನಿ ಯಾವಾಗ ಸರಸ ಸಲ್ಲಾಪದ ವಿಡಿಯೋ ವೈರಲ್ ಆಯಿತೋ ಮನನೊಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮ ವಿಧಿವಿಧಾನ ನೆರವೇರಿಸಲಾಗಿತ್ತು.

ಪರಸ್ಪರ ಪ್ರೀತಿ ಮಾಡುತ್ತಿದ್ದ ಇಬ್ಬರೂ ಕಾಲೇಜಿ(College)ನ ಕಟ್ಟಡದ ಟೆರೇಸ್ ಮೇಲೆ ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಕ್ಷಣ ಕಳೆಯುತ್ತಿರುವುದರ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿತ್ತು. ವಿಡಿಯೋ ಹರಿದಾಡುವುದು ಗೊತ್ತಾಗಗುತ್ತಿದ್ದಂತೆ ನೊಂದ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ. ಇನ್ನು ಈಕೆ ಆತ್ಮಹತ್ಯೆ
ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ವಿಡಿಯೋದಲ್ಲಿದ್ದ ಯುವಕ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಎರಡೂ ಕುಟುಂಬದವರ ಮನೆಯಲ್ಲಿ ನೋವು ಮಡುಗಟ್ಟಿದೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದವರ ವಿರುದ್ಧ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ತಿಳಿಸಿದ್ದಾರೆ. ಇನ್ನು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಎರಡೂ ಕುಟುಂಬದವರು ಪ್ರತ್ಯೇಕವಾಗಿ ದೂರು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

College Student, College Students Suicide, College News, College Students Suicide News, College Students News Updatest

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಮೊಬೈಲ್

ಕಳುವಾದ, ಕಳೆದುಕೊಂಡಿದ್ದ 1.5 ಕೋಟಿ ರೂ. ಮೌಲ್ಯದ ಮೊಬೈಲ್ ಗಳು ಪತ್ತೆ: ವಾರಸುದಾರರಿಗೆ ಹಸ್ತಾಂತರ!

ಸಮೀಕ್ಷೆ

ಸಕಾರಣ ಕೊಟ್ಟ ಕಾರ್ಯದರ್ಶಿ ಬಿಟ್ಟು ಸಮೀಕ್ಷೆ ಕೈಗೊಳ್ಳದ 3 ಸಿಬ್ಬಂದಿ ಸಸ್ಪೆಂಡ್: ಒಬ್ಬರಿಂದ ಒಂದೇ ದಿನದಲ್ಲಿ ಚನ್ನಗಿರಿಯಲ್ಲಿ 76 ಮನೆ ಸಮೀಕ್ಷೆ!

ಅಕ್ಷಯ್ ಕುಮಾರ್

“ವಿಡಿಯೋ ಗೇಮ್ ಆಡುವಾಗ ಮಗಳ ನಗ್ನ ಚಿತ್ರಗಳ ಕೇಳಲಾಗಿತ್ತು”: “ಸೈಬರ್ ಹಾರರ್” ಬಗ್ಗೆ ಅಕ್ಷಯ್ ಕುಮಾರ್ ಆತಂಕ!

ಮುಹಮ್ಮದ್

“ಐ ಲವ್ ಮುಹಮ್ಮದ್” ಹೆಸರಲ್ಲಿ ಬರೇಲಿ ಹಿಂಸಾಚಾರಕ್ಕೆ ಮೊದಲೇ ಸ್ಕೆಚ್: ತೌಕೀರ್ ರಜಾ ಸಹಾಯಕರ ಸಂದೇಶದಲ್ಲೇನಿತ್ತು?

ಹಿಂದೂ

‘ಐ ಲವ್ ಮುಹಮ್ಮದ್’ ಮಾಸ್ಟರ್ ಮೈಂಡ್, ಹಿಂದೂ ವಿರೋಧಿ ತೌಕೀರ್ ರಜಾ ಯಾರು?: ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

ದುಬೈ

ಬಗೆದಷ್ಟು ಬಯಲಾಗ್ತಿದೆ ದೆಹಲಿ ಬಾಬಾ ಕಾಮಕಾಂಡ, ದುಬೈ ಶೇಕ್ ಗೂ ಈ ಸ್ವಾಮಿಗೂ ಲಿಂಕ್ ಏನು? ವಾಟ್ಸಪ್ ಚಾಟ್ ನಲ್ಲೇನಿತ್ತು?

Leave a Comment