ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ ಸಿಜೆ ಆಸ್ಪತ್ರೆಯ ಮೇಲ್ಛಾವಣಿ ಕಾಂಕ್ರಿಟ್ ಕುಸಿತ: ಕೂಡಲೇ ದುರಸ್ತಿಪಡಿಸಿ – ಸಿಎಂ ಕಚೇರಿ ಕಟ್ಟಪ್ಪಣೆ!

On: January 15, 2025 3:43 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:15-01-2025

ದಾವಣಗೆರೆ: ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವಿಚಾರವನ್ನು ʼಎಕ್ಸ್‌ʼ ಬಳಕೆದಾರರೊಬ್ಬರು ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ಗಮನಕ್ಕೆ ತಂದಿದ್ದರು. ಕೂಡಲೇ ಸ್ಪಂದಿಸಿದ ವಿಶೇಷ ಕರ್ತವ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.

ಈ ಆಸ್ಪತ್ರೆ ಕಟ್ಟಡವು ಸುಮಾರು 50 ವರ್ಷಗಳಷ್ಟು ಹಳೆಯದಾಗಿದ್ದು, ಮೇಲ್ಛಾವಣಿಯಲ್ಲಿನ ಕಾಂಕ್ರೀಟ್‌ ಬೀಳುತ್ತಿದೆ ಹಾಗೂ ಮಳೆಗಾಲದಲ್ಲಿ ಕಟ್ಟಡ ಸೋರುತ್ತಿರುತ್ತದೆ. ಈ ವಿಚಾರವನ್ನು ಆರೋಗ್ಯ ಇಲಾಖೆಯ
ಗಮನಕ್ಕೆ ತರಲಾಗಿದ್ದು, ಕಟ್ಟಡದ ದುರಸ್ತಿಗಾಗಿ ಸುಮಾರು 27 ಕೋಟಿ ರೂ. ಅಂದಾಜು ಮೊತ್ತದ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಮುಂದುವರೆದು, ಆಸ್ಪತ್ರೆ ಕಟ್ಟಡವನ್ನು ತುರ್ತಾಗಿ ರಿಪೇರಿ ಮಾಡಿಸಿಕೊಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಮುಖ್ಯ ಆಯುಕ್ತರಿಗೆ ಮತ್ತೊಮ್ಮೆ ಪತ್ರ ಬರೆಯಲಾಗಿದೆ ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ.

ನೀವು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ @osd_cmkarnataka ʼಎಕ್ಸ್‌ʼ ಖಾತೆಗೆ ಟ್ಯಾಗ್‌ ಮಾಡಬಹುದು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಗಣೇಶ

“ಗಣೇಶ ಹಬ್ಬದ ಪೆಂಡಾಲ್ ಗಳು ಕ್ರಾಂತಿಕಾರಿಗಳ ಕಾರ್ಖಾನೆಗಳು, ಇಲ್ಲಿಂದಲೇ ಸ್ವಾತಂತ್ರ್ಯ ಕ್ರಾಂತಿ: ಹಾರಿಕಾ ಮಂಜುನಾಥ್ ಅಬ್ಬರದ ಭಾಷಣ!

ಮೆಡಿಕವರ್ ಆಸ್ಪತ್ರೆಯಿಂದ ವೈದ್ಯ ಹೆಲ್ತ್ ಕೇರ್ ಕ್ಲಿನಿಕ್‌ನಲ್ಲಿ ಮೂಲಭೂತ ಆರೋಗ್ಯ ತಪಾಸಣೆ ಶಿಬಿರ

ದಾವಣಗೆರೆ

BIG BREAKING: ದಾವಣಗೆರೆಯ ಮಟ್ಟಿಕಲ್ ಫ್ಲೆಕ್ಸ್ ವಿವಾದ: ಪಿಎಸ್ಐ ಸಚಿನ್ ಸೇರಿ ಮೂವರ ಸಸ್ಪೆಂಡ್!

M. P. Renukacharya

ನೂರಾರು ಕೇಸ್ ಹಾಕಿ ತಾಕತ್ತಿದ್ದರೆ ಬಂಧಿಸಿ: ಎಫ್ಐಆರ್ ಬಳಿಕ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಎಂ. ಪಿ. ರೇಣುಕಾಚಾರ್ಯ ಸವಾಲ್!

M. P. Renukacharya

BIG NEWS: “ಡಿಜೆ ಬಳಸಿ, ತಾಕತ್ತಿದ್ದರೆ ಜಿಲ್ಲಾಡಳಿತ ತಡೆಯಲಿ” ಎಂದಿದ್ದ ಎಂ. ಪಿ. ರೇಣುಕಾಚಾರ್ಯ ವಿರುದ್ಧ ಎಫ್ ಐಆರ್! ದೂರಿನ ಕಂಪ್ಲೀಟ್ ಡೀಟೈಲ್ಸ್

Ganesha

“ಗಣೇಶ ಹಬ್ಬದ ನೆಪದಲ್ಲಿ ಬೆಂಕಿ ಹಚ್ಚುವವರ ಹತ್ತಿರ ಬಿಟ್ಟುಕೊಳ್ಳಬೇಡಿ”: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್!

Leave a Comment