Site icon Kannada News-suddikshana

ಸಿಎಂ ಸಿದ್ದರಾಮಯ್ಯರ ಸಭೆ ವೇಳೆ ಕೊಟ್ಟ “ಬಿಸ್ಕತ್” ಸೂಪರ್: ಕಾಂಗ್ರೆಸ್ ಶಾಸಕ ಶಾಂತನಗೌಡ ದಿಲ್ ಖುಷ್!

ಸಿದ್ದರಾಮಯ್ಯ

SUDDIKSHANA KANNADA NEWS/ DAVANAGERE/DATE:07_08_2025

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಉಪಸ್ಥಿತಿಯಲ್ಲಿ ಜಿಲ್ಲೆಗೆ ನೀಡಬೇಕಾದ ಅನುದಾನ ಕುರಿತಂತೆ ಚರ್ಚಿಸಿದ್ದಾರೆ. ಈ ವೇಳೆ ಕೊಟ್ಟ ಬಿಸ್ಕತ್, ಟೀ ಸೂಪರ್ ಆಗಿತ್ತು ಎಂದು ಹೊನ್ನಾಳಿ ಕಾಂಗ್ರೆಸ್ ಶಾಸಕ ಶಾಂತನಗೌಡ ಅವರು ಹೇಳಿದರು.

READ ALSO THIS STORY: ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ: ರೈತರಿಗೆ ಸತ್ಯ ತಿಳಿಸಲು ಕುಂದೂರಿನಲ್ಲಿ ಆ. 9ಕ್ಕೆ ರೈತರ ಬೃಹತ್ ಸಭೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಜಿಲ್ಲೆಯ ಅನುದಾನ ಕುರಿತಂತೆ ಚರ್ಚಿಸಲಾಗಿದೆ. ಮಕ್ಕಳು, ಮೊಮ್ಮಕ್ಕಳ ಜೊತೆ ಖುಷಿಯಾಗಿ ಇರುವಂತೆ ಸಭೆ ಇತ್ತು ಎಂದು ಹೇಳಿದರು.

ಪ್ರತಿ ಕ್ಷೇತ್ರದ ಶಾಸಕರಿಗೆ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಭೆಯಲ್ಲಿ ಹಲವು ಸಮಸ್ಯೆಗಳ ಕುರಿತಂತೆ ಚರ್ಚಿಸಲಾಯಿತು. ಎಲ್ಲಾ ಶಾಸಕರು ಸಭೆ ಬಳಿಕ ಸಂತೋಷಗೊಂಡಿದ್ದರು. ನಮಗೂ ಅನುದಾನ ನೀಡಿದ್ದಾರೆ. ಸಭೆಯಲ್ಲಿ ಎಲ್ಲಾ ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಲಾಯಿತು. ಸಿದ್ದರಾಮಯ್ಯರು ಗ್ಯಾರಂಟಿ ಯೋಜನೆಗಳ ನಡುವೆಯೂ ಅನುದಾನ ನೀಡಿದ್ದಾರೆ. ಹೊನ್ನಾಳಿ ತಾಲೂಕಿಗೆ ಎಷ್ಟು ಅನುದಾನ ಬಂದಿದೆ ಎಂದು ಆಗಸ್ಟ್ 9ರಂದು ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ನಡೆಯಲಿರುವ ರೈತ ಸಭೆಯಲ್ಲಿ ದಾಖಲೆ ಸಮೇತ ಮಾತನಾಡುತ್ತೇನೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಮಾಯಕೊಂಡ ಶಾಸಕ ಕೆ. ಎಸ್. ಬಸವಂತಪ್ಪ ಮತ್ತಿತರರು ಹಾಜರಿದ್ದರು.

Exit mobile version