ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭೋವಿ ಮಠದಲ್ಲಿ ಮುಖ್ಯಮಂತ್ರಿಗಳಿಗೆ ಊಟ ಬಡಿಸಿದ ಭೋವಿ ಶ್ರೀ: ಭೋವಿ ಅಧ್ಯಯನ ಪೀಠ, ಸಮುದಾಯದ ಒಬ್ಬರನ್ನು KPSC ಸದಸ್ಯರನ್ನಾಗಿಸುವುದಕ್ಕೆ ನಾನು ಸಿದ್ದ ಎಂದ ಸಿದ್ದರಾಮಯ್ಯ 

On: November 23, 2023 12:29 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:23-11-2023

ಬಾಗಲಕೋಟೆ: ಭೋವಿ ಅಧ್ಯಯನ ಪೀಠ ಮಾಡುವುದಕ್ಕೆ ಮತ್ತು ಸಮುದಾಯದ ಒಬ್ಬರನ್ನು KPSC ಸದಸ್ಯರನ್ನಾಗಿಸುವುದಕ್ಕೆ ನಾನು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಬಾಗಲಕೋಟೆಯಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಭೋವಿ ಜನಾಂಗದ ಕಸುಬಾದ ಕಲ್ಲು ಹೊಡೆಯುವ ಮೂಲಕ ಭೋವಿ ಸಮುದಾಯದ ಕುಲಗುರು ಶರಣಬಸವ ಅಪ್ಪಂಗಳ್ ಅವರ ಕುಟೀರವನ್ನು ಉದ್ಘಾಟಿಸಿ, ಶಿಲಾಮಂಟಪದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಭೋವಿ ಅಭಿವೃದ್ಧಿ ನಿಗಮ ಮಾಡುವ ಭರವಸೆ ನಾನು ನೀಡಿದ್ದೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೇ ಅಭಿವೃದ್ಧಿ ನಿಗಮ ಮಾಡಿದೆ. ಈಗಲೂ ನಿಮ್ಮ ಬೇಡಿಕೆ ಈಡೇರಿಸಲು ನಾನು ಸಿದ್ದ ಎಂದು ಭರವಸೆ ನೀಡಿದರು.

ಭೋವಿ ಸಮಾಜದ ಹಿತ ಕಾಯುವ ಪಕ್ಷ ನಮ್ಮದು. ನಾನು ಸಮುದಾಯಕ್ಜೆ ಆರ್ಥಿಕ ಶಕ್ತಿ ನೀಡುತ್ತೇನೆ. ನಿಮ್ಮ ಆಶೀರ್ವಾದ ನಮಗಿರಲಿ. ನಾನು ಸಿದ್ದರಾಮೇಶ್ವರರ ವಚನಗಳಲ್ಲಿ, ಆಶಯಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದರು.

ಬಸವಣ್ಣನವರಿಗಿಂತ ಮೊದಲು ಧರ್ಮ ಬೋಧನೆ ಜನರ ಭಾಷೆಯಲ್ಲಿ ಆಗುತ್ತಿರಲಿಲ್ಲ. ಶರಣರು ಬಂದ ಬಳಿಕ ಜನರ ಭಾಷೆಯಲ್ಲಿ ಧಾರ್ಮಿಕ ಬೋಧನೆ ಶುರುವಾಯಿತು. ಜನರಿಗಾಗಿ ಧರ್ಮ ಇರುವುದು. ಧರ್ಮಕ್ಕಾಗಿ ನಾವು ಇರುವುದಲ್ಲ ಎಂದು ಸ್ಪಷ್ಟಪಡಿಸಿ ಮೌಡ್ಯ ಕಂದಾಚಾರಗಳ, ಜಾತಿಯನ್ನು ಬಿಡಬೇಕು ಎನ್ನುವುದು ಶರಣರ , ವಚನಕಾರರ ಆಶಯವಾಗಿತ್ತು. ಇದನ್ನು ಆಚರಿಸುವವರೇ ನಿಜ ಶರಣರು ಎಂದು ಹೇಳಿದರು.

ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವದ ಅಂಗವಾಗಿ ಬಾಗಲಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭೋವಿ ಜನಸಮುದ ಸಮಾವೇಶದಲ್ಲಿ ಸಾಂಕೇತಿಕವಾಗಿ ಸುತ್ತಿಗೆ ಹಿಡಿದು ಕಲ್ಲು ಒಡೆಯುವ ಮೂಲಕ ಉದ್ಘಾಟಿಸಿದರು.

ಭೋವಿ ಗುರುಪೀಠದ ಶ್ರೀ ನಿರಂಜನ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೋವಿ ಸೇರಿದಂತೆ ಮುಂತಾದ ಸಮುದಾಯಗಳಿಗೆ ನೀಡಿರುವ ಅಪಾರ ಕೊಡಿಗೆಗಳನ್ನು ಪಟ್ಟಿ ಮಾಡಿ ಇಡಿ ಸಮುದಾಯದ ಪರವಾಗಿ ಧನ್ಯವಾದ ಅರ್ಪಿಸಿದರು.

ಶಾಸಕರಾದ ಮಾನಪ್ಪ ವಜ್ಜಲ್ ಸೇರಿದಂತೆ ಹಲವಾರು ಶಾಸಕರು, ಮಾಜಿ ಶಾಸಕರುಗಳು ಮತ್ತು ಭೋವಿ , ಕೊರಮ, ಕೊರಚ ಸಮುದಾಯಗಳ ಮುಖಂಡರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗುರು ಕುಟೀರಕ್ಕೆ ಭೇಟಿ ನೀಡಿದಾಗ ಶ್ರೀಗಳೇ ತಮ್ಮ ಕೈಯಾರೆ ಮುಖ್ಯಮಂತ್ರಿಗಳಿಗೆ ಊಟ ಬಡಿಸಿದರು. ಅಲ್ಲೇ ಪ್ರಸಾದ ಸೇವಿಸುವ ಮೂಲಕ ವೇದಿಕೆ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾಗಿ ಶ್ರೀಗಳು ಬೃಹತ್ ಸಭೆಗೆ ತಿಳಿಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment